ಹಾಲಿವುಡ್ ಸಿನಿಮಾಗಳಲ್ಲಿ ಹೋಲೋಗ್ರಾಫಿಕ್ ಕೈಚಳಕ
ಭವಿಷ್ಯದ ತಂತ್ರಜ್ಞಾನವನ್ನು ಒರೆಗೆ ಹೆಚ್ಚಲು ಹಾಲಿವುಡ್ ಸಿನಿಮಾಗಳು ಮುಖ್ಯ ಭೂಮಿಕೆ ಎಂದೆನಿಸಿವೆ. ಹಾರುವ ಕಾರುಗಳು, ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ, ಸೆಲ್ಫ್ ಡ್ರೈವಿಂಗ್ ಕಾರ್ಸ್ ಹೀಗೆ ತಂತ್ರಜ್ಞಾನಗಳ ಸುರಿಮಳೆಯನ್ನೇ ಸಿನಿಮಾಗಳು ವೀಕ್ಷಕರಿಗೆ ತೋರಿಸುತ್ತವೆ. ಇದನ್ನು ನೈಜವಾಗಿ ಸಿನಿಮಾಗಳಲ್ಲಿ ತೋರಿಸುವ ನಿರ್ದೇಶಕರುಗಳು ಇವುಗಳು ಮುಂದಿನ ದಿನಗಳಲ್ಲಿ ನಮಗೆ ನೈಜವಾಗಿ ಕಾಣಿಸಿಕೊಳ್ಳುತ್ತವೆ ಎಂಬಂತೆಯೇ ರೂಪಿಸುತ್ತಾರೆ.

ಇಂದಿನ ಲೇಖನದಲ್ಲಿ ಈ ತಂತ್ರಜ್ಞಾನ ಆವಿಷ್ಕಾರಗಳ ಬಗ್ಗೆ ನಾವು ಕೆಲವೊಂದು ಉದಾಹರಣೆಗಳನ್ನು ತಿಳಿಸಲಿದ್ದು ಇದು ನಿಮ್ಮನ್ನು ಅಚ್ಚರಿಗೊಳಿಸಲಿದೆ. ಬನ್ನಿ ಆ ದೃಷ್ಟಾಂತಗಳೇನು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

ಹೋಲೋ ಟ್ರೆಂಡ್
ಹೋಲೋಗ್ರಾಫಿಕ್ ಸ್ಕ್ರೀನ್ ಅನ್ನು ಸ್ಮಾರ್ಟ್‌ಫೋನ್‌ನಲ್ಲಿ ರಚನೆ ಮಾಡಬಹುದಾಗಿದ್ದು ನಿಮಗೆ ಎಲ್ಲಾ ಮಾಹಿತಿಯನ್ನು ಅದೇ ವಿಧಾನದಲ್ಲಿ ನೀಡಬಲ್ಲುದು.

ನಿಜಕ್ಕೂ ಇದೊಂದು ಅದ್ಭುತ
ಹೋಲೋಗ್ರಾಮ್ ಕಾನ್ಸೆಪ್ಟ್ ಪ್ರಥಮವಾಗಿ ಬಂದಾಗ, ಮಕ್ಕಳು ನಿಜಕ್ಕೂ ಇದನ್ನು ಅದ್ಭುತವೆಂದೇ ಕಂಡುಕೊಂಡಿದ್ದಾರೆ. ಭವಿಷ್ಯದ ಹಾಗುಹೋಗುಗಳನ್ನು ಇದು ನಮಗೆ ಒದಗಿಸಿದೆ. 21 ನೇ ಶತಮಾನದ ಮಕ್ಕಳಂತೂ ಇದನ್ನು ಹೆಚ್ಚು ಮೋಜಿನದ್ದು ಎಂದೇ ಪರಿಗಣಿಸುತ್ತಾರೆ. ಅವರು ನೋಡಬಹುದು, ಕೇಳಬಹುದು ಮತ್ತು ಅರಿತುಕೊಳ್ಳಬಹುದು ಅಂತೆಯೇ ಪರಿಸರವನ್ನು ಆಸ್ವಾದಿಸಿಕೊಳ್ಳಬಹುದಾಗಿದೆ.

ಸಿಮಿತವಲ್ಲದ ಸಾಧ್ಯತೆಗಳು
ಹೋಲೋಲೆನ್ಸ್‌ಗಳನ್ನು ಮೈಕ್ರೋಸಾಫ್ಟ್ ಲಾಂಚ್ ಮಾಡಿದ್ದು ನಿಮ್ಮ ಅಪ್ಲಿಕೇಶನ್ ಮತ್ತು ಸ್ಕೈಪ್ ಕರೆಗಳನ್ನು ಕಾರ್ಯರೂಪಕ್ಕೆ ತರಲು ಇದೊಂದು ಉತ್ತಮ ಅನುಭವವಾಗಿದೆ. ಆದರೆ ಹೆಡ್ ಗೇರ್ ಅನ್ನು ಧರಿಸಿ ಇದರಲ್ಲಿ ಕಾರ್ಯಾಚರಣೆ ಮಾಡುವುದು ಯಾರಿಗೂ ಅಷ್ಟೊಂದು ಇಷ್ಟವಾಗುವುದಿಲ್ಲ ಅಲ್ಲವೇ? ಇದನ್ನು ಬಳಸಿ ಸ್ಥಳದಲ್ಲಿಯೇ ವೀಡಿಯೊ ಕರೆಗಳನ್ನು ನಿರ್ವಹಿಸಬಹುದಾಗಿದೆ. ಗೂಗಲ್ ಹ್ಯಾಂಗ್ ಔಟ್ಸ್, ಆಪಲ್‌ನಿಂದ ಫೇಸ್‌ಟೈಮ್, ಮೈಕ್ರೋಸಾಫ್ಟ್ ಸ್ಕೈಪ್ ಹೀಗೆ ಪ್ರತಿಯೊಬ್ಬರೂ ತಮ್ಮದೇ ಆವೃತ್ತಿಗಳನ್ನು ಸೃಷ್ಟಿಸಿಕೊಳ್ಳಲು ಅವಕಾಶಕ್ಕಾಗಿ ಕಾಯಬಹುದಾಗಿದೆ.

ಇಂಡಸ್ಟ್ರಿ ಸಂಸ್ಥೆಗಳು
ಹೋಲೋಲೆನ್ಸ್ ಉತ್ಪನ್ನಗಳಿಗೆ 3 ಡಿ ಮಾಡೆಲ್‌ಗಳನ್ನು ರಚಿಸುವ ವಿನ್ಯಾಸಕಾರರನ್ನು ಬಯಕೆಗಳನ್ನು ಈಡೇರಿಸಲಿದೆ. ಹೋಲೋಗ್ರಾಫಿಕ್ ತಂತ್ರಜ್ಞಾನ ಬಳಕೆದಾರರನ್ನು ತಲುಪಿದಾಗ, ಹೊಸ ಸಂಸ್ಥೆಗಳು ಅವುಗಳ ವಿಚಾರಗಳನ್ನು ಕಾರ್ಯರೂಪಕ್ಕೆ ತರುತ್ತವೆ.


Click it and Unblock the Notifications








