Subscribe to Gizbot

4G ಫೋನಿಲ್ಲದ ಗ್ರಾಹಕರಿಗೆ ಏರ್‌ಸೆಲ್ ನಿಂದ ಭರ್ಜರಿ ಆಫರ್..!!

Written By:

ಜಿಯೋ ಸೇವೆ ಆರಂಭವಾಗುತ್ತಿದ್ದಂತೆ ಜನರು ಎಚ್ಚತ್ತುಕೊಳ್ಳತೊಡಗಿ, ಇಷ್ಟು ದಿನ ದುಬಾರಿ ಬೆಲೆ ನೀಡಿ ಡೇಟಾ ಖರೀದಿಸುತ್ತಿದ್ದ ಕ್ರಮವನ್ನು ಬದಲಾಯಿಸಿಕೊಳ್ಳಲು ಮುಂದಾದರು. ಉಚಿತ ಡೇಟಾ ನೀಡಿದ ಜಿಯೋ ಕಡೆಗೆ ತಮ್ಮ ಆಯ್ಕೆಯನ್ನು ಹೊರಳಿಸುವದರೊಂದಿಗೆ ಇನ್ನು ನಾವು ಹೆಚ್ಚಿನ ಹಣವನ್ನು ಪಾವತಿ ಮಾಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಟೆಲಿಕಾಂ ಕಂಪನಿಗಳಿಗೆ ತಲುಪಿಸುವಲ್ಲಿ ಯಶಸ್ವಿಯಾದರು.

4G ಫೋನಿಲ್ಲದ ಗ್ರಾಹಕರಿಗೆ ಏರ್‌ಸೆಲ್ ನಿಂದ ಭರ್ಜರಿ ಆಫರ್..!!

ಇದರಿಂದ ಬಿಸಿ ಮುಟ್ಟಿಸಿಕೊಂಡ ಟೆಲಿಕಾಂ ಕಂಪನಿಗಳನ್ನು ತಮ್ಮ ಗ್ರಾಹಕರನ್ನು ಸೆಳೆಯುವ ಪ್ರಯತ್ನವನ್ನು ಕೈಹಾಕಿದರೂ, ಆರಂಭದಲ್ಲಿ ಇದು ಸಾಧ್ಯವಾಗದೆ ಹೊಯಿತು. ನಂತರ ಜಿಯೋ ತನ್ನ ಸೇವೆಗೆ ಶುಲ್ಕವನ್ನು ವಿಧಿಸಲು ಮುಂದಾದ ಸಂದರ್ಭದಲ್ಲಿ ತಾವು ಸಹ ಡೇಟಾ ಬೆಲೆಯನ್ನು ಕಡಿಮೆ ಮಾಡಿ ಗ್ರಾಹಕರನ್ನು ಮತ್ತೆ ಕರೆತರುವ ಪ್ರಯತ್ನವನ್ನು ಮಾಡುತ್ತಿವೆ ಇತರೆ ಟೆಲಿಕಾಂ ಕಂಪನಿಗಳು. ಇದೇ ಹಾದಿಯಲ್ಲಿ ಸಾಗಿರುವ ಏರ್‌ಸೆಲ್ ತನ್ನ ಗ್ರಾಹಕರಿಗೆ ಆಕರ್ಷಕ ಆಫರ್‌ವೊಂದನ್ನು ಬಿಡುಗಡೆ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.76 ಕ್ಕೆ 1 GB 3G ಡೇಟಾ:

ರೂ.76 ಕ್ಕೆ 1 GB 3G ಡೇಟಾ:

ಏರ್‌ಸೆಲ್ ಕಳೆದ ತಿಂಗಳಿನಲ್ಲಿ ಉಚಿತ ರೂಮಿಂಗ್ ಘೋಷನೆ ಮಾಡಿದ್ದ ಬೆನ್ನಲೇ ತನ್ನ ಗ್ರಾಹಕರಿಗೆ ರೂ.76ಕ್ಕೆ 1 GB 3G ಡೇಟಾ ನೀಡುವ ಪ್ಲಾನ್‌ವೊಂದನ್ನು ಬಿಡುಗಡೆ ಮಾಡಿದೆ. ಇದು 4G ಮೊಬೈಲ್ ಇಲ್ಲದ ಗ್ರಾಹಕರಿಗೆ ಬೆಸ್ಟ್ ಆಫರ್ ಆಗಿದೆ.

ರೂ.50ಕ್ಕಿಂತ ಹೆಚ್ಚಿನ ರೀಚಾರ್ಜ್ ಮಾಡಿಸಿದವರಿಗೆ ಆಫರ್:

ರೂ.50ಕ್ಕಿಂತ ಹೆಚ್ಚಿನ ರೀಚಾರ್ಜ್ ಮಾಡಿಸಿದವರಿಗೆ ಆಫರ್:

ಇದಲ್ಲದೇ ಏರ್‌ಸೆಲ್ ತನ್ನ ಗ್ರಾಹಕರು ರೂ.50ಕ್ಕಿಂತ ಹೆಚ್ಚಿನ ಮೊತ್ತಕ್ಕೆ ರಿಚಾರ್ಜ್ ಮಾಡಿಸಿದವರಿಗೆ ಉಚಿತವಾಗಿ 100 MB ಡೇಟಾವನ್ನು ನೀಡುವ ಆಫರ್ ಘೋಷಣೆ ಮಾಡಿದೆ.

ಫುಲ್ ಟಾಕ್ ಟೈಮ್ ಆಫರ್‌ಗಳು:

ಫುಲ್ ಟಾಕ್ ಟೈಮ್ ಆಫರ್‌ಗಳು:

ಅಲ್ಲದೇ ಏರ್‌ಸೆಲ್ ಗ್ರಾಹಕರು ಫುಲ್ ಟಾಕ್ ಟೈಮ್ ಲಾಭವನ್ನು ಪಡೆಯಬಹುದಾಗಿದೆ. ಅನೇಕ ಮೊತ್ತದ ರೀಚಾರ್ಜ್ ಮೇಲೆ ಫುಲ್ ಟಾಕ್ ಟೈಮ್ ಘೋಷಣೆ ಮಾಡಿದೆ.

 ಏರ್‌ಸೆಲ್ ಆಪ್:

ಏರ್‌ಸೆಲ್ ಆಪ್:

ಇತರೆ ಟೆಲಿಕಾಂ ಕಂಪನಿಗಳ ಮಾದರಿಯಲ್ಲೇ ಏರ್‌ಸೆಲ್ ಸಹ ಆಪ್ ಬಿಡುಗಡೆ ಮಾಡಿದ್ದು, ಇದರ ಮೂಲಕ ಪ್ಲಾನ್‌ಗಳ ಬಗ್ಗೆ ತಿಳಿಯಬಹುದಾಗಿದ್ದು, ಅಲ್ಲದೇ ರಿಚಾರ್ಜ್ ಗಳನ್ನು ಮಾಡಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Aircel is offering its customers 1GB of 3G data at a price of Rs. 76 on its mobile app. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot