ನೀವು ತಿಳಿದೇಯಿಲ್ಲದ ಬೆರಗಾಗಿಸುವ ಫೇಸ್‌ಬುಕ್ ಮಾಹಿತಿಗಳಿವು!!..ತಿಳಿದರೆ ಶಾಕ್ ಖಂಡಿತ!!
ನಿಮಗೆ ಆಶ್ಚರ್ಯವಾದರೂ ಆಗಬಹುದು ಏಕೆಂದರೆ ಫೇಸ್‌ಬುಕ್‌ನ ಒಟ್ಟು ಬಳಕೆದಾರರಲ್ಲಿ 53% ಹೆಂಗಸರಿದ್ದರೆ 47% ಗಂಡಸರಿದ್ದಾರೆ ಎಂದು ಜುಲೈ 2017 ರಲ್ಲಿ ಫೇಸ್‌ಬುಕ್ ನೀಡಿದ ಮಾಹಿತಿಯಿಂದ ತಿಳಿದುಬಂದಿದೆ.!!
ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್‌ಬುಕ್ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಸಂಬಂಧ, ಮನರಂಜನೆ, ಸುದ್ದಿ, ವ್ಯಾಪಾರ ಹೀಗೆ ನಾನಾ ಚಟುವಟಿಗೆಗಳನ್ನು ಒದಗಿಸುವ ಮೂಲಕ ಸಾಮಾಜಿಕ ಜಾಲತಾಣದ ಸಾದ್ಯತೆಗಳನ್ನು ಹಿಗ್ಗಸಿದ ಫೇಸ್‌ಬುಕ್ ಎಂಬ ಮಾಂತ್ರಿಕ ಆಪ್ ಇಂದು ಜಗತ್ತಿನ ಮೂಲೆ ಮೂಲೆಯಲ್ಲಿ ಕೋಟಿ ಕೋಟಿ ಮಂದಿಯನ್ನು ತಲುಪಿದೆ.!
ಮಾರ್ಕ್ ಜುಕರ್‌ಬರ್ಗ್ ಹಾಗೂ ಆತನ ಜೊತೆ ಕಲಿಯುತ್ತಿದ್ದ ಎಡುವರ್ಡೊ ಸವೆರನ್, ಆಂಡ್ರೊ ಮೆಕಲಮ್, ಡಸ್ಟಿನ್ ಮಾಸ್ಕೋವಿಟ್ಜ್ ಮತ್ತು ಕ್ರಿಸ್ ಹೀವ್ಸ್ ಗೆಳೆಯರು ಸೇರಿ 2004 ನೇ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಕಟ್ಟಿದ ಸಾಮಾಜಿಕ ಜಾಲತಾಣ ಇಂದು ಪ್ರತಿತಿಂಗಳು 200 ಕೋಟಿಗೂ ಹೆಚ್ಚು ಬಳಕೆದಾರ ಖಾತೆಗಳನ್ನು ಹೊಂದಿದೆ ಎಂದರೆ ಆಶ್ಚರ್ಯವಾಗಲೇಬೇಕು.!!

ಇಡೀ ಪ್ರಪಂಚದಲ್ಲಿಯೇ ಭಾರತೀಯರಿಂದಲೇ ಹೆಚ್ಚು ಬಳಸಲ್ಪಡುತ್ತಿರುವ ಫೇಸ್‌ಬುಕ್ ಭಾರತದಲ್ಲಿಯೇ 25 ಕೋಟಿ ಬಳಕೆದಾರರನ್ನು ಹೊಂದಿದೆ. ಇನ್ನು ಫೇಸ್‌ಬುಕ್ ಜನ್ಮಸ್ಥಳ ಅಮೆರಿಕಾ ದೇಶವು 24 ಕೋಟಿ ಬಳಕೆದಾರರಿಂದ ಎರಡನೇ ಸ್ಥಾನದಲ್ಲಿದೆ.! ಹಾಗಾಗಿ, ಇಂದಿನ ಲೇಖನದಲ್ಲಿ ಬೆರಗಾಗಿಸುವ ಕೆಲವು ಫೇಸ್‌ಬುಕ್ ಬಗೆಗಿನ ಮಾಹಿತಿಗಳನ್ನು ತಿಳಿಯೋಣ.!!

ಯೂಟ್ಯೂಬ್ ಹಿಂದಿಕ್ಕಿದೆ ಫೇಸ್‌ಬುಕ್!!
ಸಾಮಾಜಿಕ ಜಾಲತಾಣ ಫೆಸ್‌ಬುಕ್ ಯೂಟ್ಯೂಬ್ ಬಳಕೆದಾರರಿಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದೆ. 2017ರ ಕೊನೆಯಲ್ಲಿ ಫೇಸ್‌ಬುಕ್ ಹೊರತಂದಿರುವ ಮಾಹಿತಿ ಪ್ರಕಾರ ಒಂದು ತಿಂಗಳಲ್ಲಿ 2.1 ಬಿಲಿಯನ್ ಅಂದರೆ 200 ಕೋಟಿಗೂ ಹೆಚ್ಚು ಬಳಕೆದಾರರು ಚಟುವಟಿಕೆಯಿಂದ ಇರುತ್ತಾರಂತೆ.!!

ಬಳಕೆದಾರರು ಯಾರು?!
ನಿಮಗೆ ಗೊತ್ತಾ?. ಒಂದು ಸೆಕೆಂಡ್‌ಗೆ 5 ಹೊಸ ಫೇಸ್‌ಬುಕ್ ಖಾತೆಗಳು ಹುಟ್ಟುತ್ತವಂತೆ.! ನಿಮಗೆ ಆಶ್ಚರ್ಯವಾದರೂ ಆಗಬಹುದು ಏಕೆಂದರೆ ಫೇಸ್‌ಬುಕ್‌ನ ಒಟ್ಟು ಬಳಕೆದಾರರಲ್ಲಿ 53% ಹೆಂಗಸರಿದ್ದರೆ 47% ಗಂಡಸರಿದ್ದಾರೆ ಎಂದು ಜುಲೈ 2017 ರಲ್ಲಿ ಫೇಸ್‌ಬುಕ್ ನೀಡಿದ ಮಾಹಿತಿಯಿಂದ ತಿಳಿದುಬಂದಿದೆ.!!

ಫೇಸ್‌ಬುಕ್‌ನಲ್ಲಿದೆ ಯುವಪಡೆ.!!
ಪೇಸ್‌ಬುಕ್‌ನ ಒಟ್ಟು ಬಳಕೆದಾರರಲ್ಲಿ 25 ರಿಂದ 34ರ ವಯಸ್ಸಿನವರದ್ದೇ ದೊಡ್ಡ ಪಾಲಿದೆ. ಸುಮಾರು 30% ನಷ್ಟು ಬಳಕೆದಾರರು 25 ರಿಂದ 34 ವಯಸ್ಸಿನವರಾಗಿದ್ದಾರೆ. ಅದನ್ನು ಬಿಟ್ಟರೆ 18 ರಿಂದ 24 ರ ವಯಸ್ಸಿನವರದ್ದು ಎರಡನೇ ದೊಡ್ಡ ಗುಂಪಾಗಿದೆ. ಅಂದರೆ ಫೇಸ್ಬುಕ್ಕಿನದ್ದು ಯುವ ಬಳಕೆದಾರರ ಪಡೆಯಿಂದ ತುಂಬಿದೆ!


10ಕೋಟಿ ಫೇಕ್ ಅಕೌಂಟ್!!
ಇನ್ನೊಂದು ತಿಳಿಯಬೇಕಾದ ಮಾಹಿತಿ ಎಂದರೆ ಇರುವ 200 ಕೋಟಿಗೂ ಹೆಚ್ಚಿನ ಫೇಸ್‌ಬುಕ್ ಬಳಕೆದಾರರಲ್ಲಿ ಸುಮಾರು 10 ಕೋಟಿಗೂ ಹೆಚ್ಚು ಫೇಕ್ ಅಕೌಂಟ್‌ಗಳಿವೆಯಂತೆ. ತಮ್ಮ ಗುರುತನ್ನು ಮರೆಮಾಚಿ ಫೇಸ್‌ಬುಕ್ ಬಳಸುವುದಕ್ಕಾಗಿ, ಪ್ರಚಾರದ ಉದ್ದೇಶಕ್ಕಾಗಿ ಹೀಗೆ ಹಲವು ಕಾರಣಗಳಿಂದಾಗಿ ಇರುವ ಖಾತೆಗಳನ್ನು ತೆಗೆದುಹಾಕುವುದಿಲ್ಲ ಎಂದು ಫೇಸ್‌ಬುಕ್ ತಿಳಿಸಿದೆ.!

ಯಾವ ಹೊತ್ತಿನಲ್ಲಿ ದಟ್ಟಣೆ ಹೆಚ್ಚಿದೆ?
ಸೋಮವಾರದಿಂದ ಶುಕ್ರವಾರದ ತನಕ ಹಗಲು 1 ಗಂಟೆಯಿಂದ 4 ಗಂಟೆಯವರೆಗೆ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಹೆಚ್ಚಿರಲಿದೆ. ಬೆಳಗ್ಗೆ 9 ಗಂಟೆಗೆ ಬಳಕೆಯ ದಟ್ಟಣೆಯು ಹೆಚ್ಚುತ್ತಾ ಹೋಗಿ 1 ಗಂಟೆಯ ಹೊತ್ತಿಗೆ ದಟ್ಟಣೆಯು ತುದಿಯನ್ನು ಮುಟ್ಟುತ್ತದೆಯಂತೆ. ಇನ್ನು ಶನಿವಾರ ಹಾಗೂ ರವಿವಾರದಂದು ಬೆಳಗ್ಗೆ 8 ಗಂಟೆಯ ಒಳಗೆ ಹಾಗೂ ಸಂಜೆ 8 ಗಂಟೆಯ ಮೇಲೆ ಹೆಚ್ಚು ಬಳಕೆದಾರರಿತ್ತಾರಂತೆ.!!

ಎಷ್ಟು ಹೊತ್ತು ಬಳಕೆ?
ಫೇಸ್‌ಬಕ್ ಬಳಕೆದಾರರು ಒಮ್ಮೆ ಆಪ್ ಒಳಹೊಕ್ಕತೆ ಅದನ್ನು ಬಳಸುವ ಸರಾಸರಿ ಹೊತ್ತು 20 ನಿಮಿಷಗಳಂತೆ. ಬಳಕೆದಾರರ ಸರಾಸರಿ ಗೆಳೆಯರ ಎಣಿಕೆ 155 ಇದೆಯಂತೆ. ಇವೆಲ್ಲವಕ್ಕಿಂತ 18-34 ವಯಸ್ಸಿನ ಬಳಕೆದಾರರಲ್ಲಿ ಶೇ 50% ಮಂದಿ ಬೆಳಗ್ಗೆ ಎದ್ದ ಕೂಡಲೆ ಮೊದಲು ನೋಡುವುದು ಫೇಸ್‌ಬುಕ್ ಅನ್ನೇ ಎಂದರೆ ನೀವು ನಂಬಲೇಬೇಕು.!!


Click it and Unblock the Notifications








