Home
ಫೀಚರ್ ಸ್ಟೋರೀಸ್

ಬರಲಿದೆ ಆಂಡ್ರಾಯ್ಡ್ 'O': ಹೊಸದೇನು..? ವಿಶೇಷತೆಗಳೇನು..?

ಈ ಹಿನ್ನಲೆಯಲ್ಲಿ ಆಂಡ್ರಾಯ್ 'O' ನಲ್ಲಿ ಹೊಸದೇನು ಇರಲಿದೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.

By Srinidhi

ಮೊನ್ನೆ ಮೊನ್ನೆ ತಾನೇ ಆಂಡ್ರಾಯ್ಡ್ N (ನ್ಯಾಗಾ) ಬಿಡುಗಡೆ ಮಾಡಿದ ಗೂಗಲ್ ಈಗಾಗಲೇ ಮತ್ತೊಂದು ಹೊಸ ಆಂಡ್ರಾಯ್ಡ್ ಆವೃತ್ತಿಯನ್ನು ಸಿದ್ಧ ಪಡಿಸಿದ್ದು, ಬಿಟಾ ವರ್ಷನ್ ಬಿಡುಗಡೆ ಮಾಡುವ ಹಂತದಲ್ಲಿದೆ. ಈ ಹಿನ್ನಲೆಯಲ್ಲಿ ಆಂಡ್ರಾಯ್ 'O' ನಲ್ಲಿ ಹೊಸದೇನು ಇರಲಿದೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಬರಲಿದೆ ಆಂಡ್ರಾಯ್ಡ್ 'O': ಹೊಸದೇನು..? ವಿಶೇಷತೆಗಳೇನು..?

ಈಗಾಗಲೇ ಆಂಡ್ರಾಯ್ಡ್ N (ನ್ಯಾಗಾ) ಹಲವು ಫೋನ್‌ಗಳಲ್ಲಿ ಲಭ್ಯವಿದ್ದು, ಇನ್ನು ಕೆಲವರು ಹೊಸ ಆಪ್‌ಡೇಟ್ ಪಡೆದುಕೊಂಡಿಲ್ಲ. ಆಗಲೇ ಹೊಸ ಆವೃತ್ತಿಯೂ ಸಿದ್ಧವಾಗಿದ್ದು, ಮೇ.17 ರಂದು ಬಿಡುಗಡೆಯಾಗಲಿದೆ. ಈ ಹಿನ್ನಲೆಯಲ್ಲಿ ಹೊಸ ಆಂಡ್ರಾಯ್ಡ್‌ನಲ್ಲಿ ಹೆಚ್ಚಿನ ಆಯ್ಕೆಯನ್ನು ಗೂಗಲ್ ನೀಡಿದ್ದು, ಆಪಲ್ ನಿಂದ ಹಲವು ಆಯ್ಕೆಗಳನ್ನು ಎರವಲು ಸಹ ಪಡೆದಿದೆ ಎನ್ನುವ ಮಾತು ಕೇಳಿಬಂದಿದೆ.

ಆಲ್ಟ್ರಾ ಪವರ್ ಸೆವಿಂಗ್ ಮೋಡ್:

ಆಲ್ಟ್ರಾ ಪವರ್ ಸೆವಿಂಗ್ ಮೋಡ್:

ಸದ್ಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆಯೇ ಜಾಸ್ತಿ ಇರುವುದರಿಂದ ಆಂಡ್ರಾಯ್ O ನಲ್ಲಿ ಆಲ್ಟ್ರಾ ಪವರ್ ಸೇವಿಂಗ್ ಮೋಡ್ ಇರಲಿದೆ. ಇದು ಕೆಲವೇ ಫೋನ್‌ಗಳಲ್ಲಿ ಇತ್ತು. ಇದನ್ನು ಆಂಡ್ರಾಯ್ಡ್ ಎಲ್ಲಾ ಫೋನ್‌ಗಳಿಗೂ ನೀಡಲು ಮುಂದಾಗಿದೆ. ಇದು ನಿಮ್ಮ ಪೋನಿನ ಬ್ಯಾಟರಿ ಲೈಫ್ ಹೆಚ್ಚಿಸುವುದಲ್ಲದೇ ಬೆಸಿಕ್ ಆಯ್ಕೆಗಳನ್ನು ಮಾತ್ರ ಬಳಕೆಗೆ ಬಿಡಲಿದೆ.

ಮೀಡಿಯಾ ಕಂಟ್ರೋಲ್:

ಮೀಡಿಯಾ ಕಂಟ್ರೋಲ್:

ಕೇಂದ್ರ ವ್ಯವಸ್ಥಿತ ಮೀಡಿಯಾ ಕಟ್ರೋಲ್ ಆಯ್ಕೆಯನ್ನು ನೀಡಲಿದೆ. ಆಪಲ್ ಫೋನ್‌ಗಳಲ್ಲಿ ಇರುವ ಆಯ್ಕೆಯನ್ನು ಆಂಡ್ರಾಯ್ಡ್ ತನ್ನ ಬಳಕೆದಾರರಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದೇ ಕಡೆ ಆಡಿಯೋ, ಬ್ರೈಟ್‌ನೆಸ್ ಎಲ್ಲವನ್ನು ಬದಲಾಯಿಸಬಹುದಾಗಿದೆ. ಇದು ಸಹ ಬಳಕೆದಾರಿಗೆ ಹೆಚ್ಚು ಸಹಾಯಕಾರಿಯಾಗಲಿದೆ.

ಫಿಂಗರ್ ಪ್ರಿಂಟ್ ಸ್ಕ್ಯಾನರ್ ಜೊತೆಗೆ ಆಟೋ ಸ್ವೀಚ್:

ಫಿಂಗರ್ ಪ್ರಿಂಟ್ ಸ್ಕ್ಯಾನರ್ ಜೊತೆಗೆ ಆಟೋ ಸ್ವೀಚ್:

ನೂತನ ಆಂಡ್ರಾಯ್ಡ್‌ನಲ್ಲಿ ಫಿಂಗರ್ ಸ್ಕ್ಯಾನರ್ ಅನ್ನು ಹೆಚ್ಚು ಆಪ್‌ಡೇಟ್ ಮಾಡಲಿದ್ದು, ಒಂದೇ ಫೋನನ್ನು ಇಬ್ಬರು ಬಳಕೆ ಮಾಡುತ್ತಿರುವ ಸಂದರ್ಭದಲ್ಲಿ ಯಾರ ಫಿಂಗರ್ ಪ್ರಿಂಟ್ ನೀಡಲಾಗುತ್ತಿದಯೋ ಅವರ ಆಕೌಂಟ್ ಮಾತ್ರವೇ ಓಪನ್ ಆಗುವಂತಹ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಒನ್ ಹ್ಯಾಂಡ್ ಮೋಡ್:

ಒನ್ ಹ್ಯಾಂಡ್ ಮೋಡ್:

ಒಂದೇ ಕೈನಲ್ಲಿ ಫೋನ್ ಬಳಸುವ ಸಂದರ್ಭದಲ್ಲಿ ಸಹಾಯವಾಗುವಂತೆ ಒನ್ ಹ್ಯಾಂಡ್ ಮೋಡ್ ಆಂಡ್ರಾಯ್ಡ್‌ನಲ್ಲೇ ಬರಲಿದೆ. ಇದು ಸದ್ಯ ಕೇಲವು ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರವೇ ಲಭ್ಯವಿದೆ. ಆಂಡ್ರಾಯ್ಡ್ ಇದನ್ನು ಅಳವಡಿಸಿಕೊಳ್ಳಲಿದೆ ಎನ್ನುವ ಸುದ್ದಿ ಲಬ್ಯವಾಗಿದೆ.

Best Mobiles in India

English summary
Google dropped the developer preview of Android O, the next version of the most used operating system in the world. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+