Home
ಫೀಚರ್ ಸ್ಟೋರೀಸ್

ಆನ್‌ಲೈನ್ ವಂಚಕರ ಗಾಳಕ್ಕೆ ಇಂಜಿನಿಯರ್ ಓರ್ವ ಬಿದ್ದದ್ದು ಹೇಗೆ ಗೊತ್ತಾ?..ನೀವೆ ನಗಾಡ್ತೀರಾ!!

ಅಮೆರಿಕದ ನರ್ಸ್, ಆರ್‌ಬಿಐನ ಮುಖ್ಯ ಪ್ರಧಾನ ವ್ಯವಸ್ಥಾಪಕ ಹಾಗೂ ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ವಂಚಕರು ನಗರದ ರಾಜರಾಜೇಶ್ವರಿನಗರದಲ್ಲಿ ಇಂಜಿನಿಯರ್ ಆಗಿರುವ ರಮೇಶ್ ಎಂಬವರಿಗೆ 4.70 ಲಕ್ಷ ಟೋಪಿ ಹಾಕಿರುವುದೆ ಸಾಕ್ಷಿ!!

By Bhaskar N J

ಯಾರಾದರೂ ಆನ್‌ಲೈನ್ ವಂಚಕರ ಗಾಳಕ್ಕೆ ಬಿದ್ದರೆ, ನಾವು ಅಂತಹ ಜಾಲದಿಂದ ಮೋಸ ಹೊಗುವುದಿಲ್ಲ ಎಂದು ನೀವಂದುಕೊಂಡಿದ್ದೀರಾ?. ಹಾಗಾದರೆ, ಫೇಸ್‌ಬುಕ್ ಬೆಡಗಿಯೋರ್ವಳನ್ನು ನಂಬಿಕೊಂಡು ಬೆಂಗಳೂರಿನ ಇಂಜಿನಿಯರ್ ಓರ್ವರು ಹೇಗೆಲ್ಲಾ ಹಣ ಕಳೆದುಕೊಂಡರು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಹೌದು, ಎಷ್ಟೇ ಬುದ್ದಿವಂತರಾದರೂ ಸಹ ನಂಬಿಕೆ ಎಂಬುದು ನಮ್ಮನ್ನು ಹೇಗೆ ಹಾಳು ಮಾಡುತ್ತದೆ ಎನ್ನಲಿಕ್ಕೆ ಅಮೆರಿಕದ ನರ್ಸ್, ಆರ್‌ಬಿಐನ ಮುಖ್ಯ ಪ್ರಧಾನ ವ್ಯವಸ್ಥಾಪಕ ಹಾಗೂ ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ವಂಚಕರು ನಗರದ ರಾಜರಾಜೇಶ್ವರಿನಗರದಲ್ಲಿ ಇಂಜಿನಿಯರ್ ಆಗಿರುವ ರಮೇಶ್ ಎಂಬವರಿಗೆ 4.70 ಲಕ್ಷ ಟೋಪಿ ಹಾಕಿರುವುದೆ ಸಾಕ್ಷಿ!!

ಹಾಗಾದರೆ, ಏನಿದು 4.70 ಲಕ್ಷ ರೂ. ವಂಚನೆ ಸ್ಟೋರಿ ? ಬುದ್ದಿವಂತರರಾದರೂ ಕೂಡ ವಂಚಕರ ಬಲೆಗೆ ಇಂಜಿನಿಯರ್ ಚಿದ್ದದ್ದು ಹೇಗೆ? ವಂಚಕರು ಹೇಗೆಲ್ಲಾ ಪ್ಲಾನ್ ಮಾಡಿದ್ದಾರೆ? ಫೇಸ್‌ಬುಕ್ ಗೆಳೆಯ ಗೆಳತಿಯರ ಅಸಲತ್ತು ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಫೇಸ್‌ಬುಕ್‌ ಫ್ರೆಂಡ್‌ಶಿಪ್!!

ಫೇಸ್‌ಬುಕ್‌ ಫ್ರೆಂಡ್‌ಶಿಪ್!!

ಎಂಜಿನಿಯರ್ ರಮೇಶ್ ಅವರಿಗೆ ಫೇಸ್‌ಬುಕ್‌ನಲ್ಲಿ ‘ರಚನಾ ಕರಂ ವೈದ್ಯ' ಎಂಬುವವರ ಪರಿಚಯವಾಗಿ, ಪರಿಚಯ ಸ್ನೇಹಕ್ಕೂ ತಿರುಗಿದೆ.! ರಚನಾ ಕರಂ ವೈದ್ಯ ಹೆಸರಿನ ಯುವತಿ ತಾನು ಅಮೆರಿಕದಲ್ಲಿ ನರ್ಸ್‌ ಕೆಲಸ ಮಾಡುತ್ತಿರುವುದಾಗಿ ಹೇಳಿ ಸದ್ಯದಲ್ಲೇ ಬೆಂಗಳೂರಿಗೆ ಬರುತ್ತಿದ್ದೇನೆ. ಅಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ಎಂದು ಹೇಳಿದ್ದಾರೆ.!!

ರಮೇಶ್ ಬಿದ್ದರು ಗುಂಡಿಗೆ.!!

ರಮೇಶ್ ಬಿದ್ದರು ಗುಂಡಿಗೆ.!!

ಬೆಂಗಳೂರಿಗೆ ಬರುತ್ತಿದ್ದೇನೆ. ಅಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ಎಂದು ರಚನಾ ಕರಂ ವೈದ್ಯ ಹೇಳಿದಾದ ಇದಕ್ಕೆ ತನ್ನ ಬಳಿ ಸದ್ಯ ಹಣವಿಲ್ಲ ಎಂದು ರಮೇಶ್ ಪ್ರತಿಕ್ರಿಯಿಸಿದ್ದಾರೆ.! ನಂತರ ನಿಮಗೆ ಡಾಲರ್‌ಗಳನ್ನು ಕಳುಹಿಸುತ್ತೇನೆ ಅದನ್ನು ಡಾಲರ್‌ಗಳನ್ನು ರೂಪಾಯಿಗೆ ಬದಲಾಯಿಸಿಕೊಳ್ಳಿ ಎಂದು ಹೇಳಿದಕ್ಕೆ ರಮೇಶ್ ಒಪ್ಪಿದ್ದಾರೆ.!.ಅಂದರೆ ಗುಂಡಿಗೆ ಬಿದ್ದಿದ್ದಾರೆ.!!

ಬಂತು ಕಸ್ಟಮ್ಸ್ ಅಧಿಕಾರಿ ಫೋನ್!!

ಬಂತು ಕಸ್ಟಮ್ಸ್ ಅಧಿಕಾರಿ ಫೋನ್!!

ನಿಮ್ಮ ಹೆಸರಿಗೆ ಪಾರ್ಸಲ್ ಬಂದಿದೆ. ನೀವು 38,000 ಕಸ್ಟಮ್ಸ್ ಶುಲ್ಕವನ್ನು ನಿಲ್ದಾಣದ ಅಧಿಕಾರಿ ಸುಮನ್ ದೇವಿ ಅವರ ಎಸ್‌ಬಿಐ ಖಾತೆಗೆ ವರ್ಗಾಯಿಸಿ ಎಂದು ನಿಶಾಕುಮಾರಿ ಎನ್ನುವ ಯುವತಿ ಕರೆ ಮಾಡಿ ಹೇಳಿದ್ದಾಳೆ.! ಆ ನಂತರ ಇದನ್ನು ನಿಮ್ಮ ವಿಳಾಸಕ್ಕೆ ತಲುಪಿಸುತ್ತೇವೆ ಎಂದಾಗ ಅದನ್ನು ನಂಬಿದ ರಮೇಶ್ ಹಣ ಪಾವತಿಸಿ, ಇ-ಮೇಲ್ ಮೂಲಕ ರಶೀದಿ ಸಹ ಪಡೆದಿದ್ದಾರೆ.!!

ಪಾರ್ಸಲ್‌ನ ತೂಕ ಜಾಸ್ತಿ ಇದೆ.!!

ಪಾರ್ಸಲ್‌ನ ತೂಕ ಜಾಸ್ತಿ ಇದೆ.!!

ಮತ್ತೆ ಎರಡು ದಿನಗಳ ನಂತರ 38,000 ಹಣ ಪೀಕಿದ ಯುವತಿಯೇ ಸರ್ವಿಸ್ ಕ್ಲಿಯರೆನ್ಸ್ ನೆಪದಲ್ಲಿ 1,62 ಲಕ್ಷ ಹಾಕಿಸಿಕೊಂಡಿದ್ದಾರೆ.! ಇನ್ನು ಪಾರ್ಸಲ್‌ನ ತೂಕ ಜಾಸ್ತಿ ಇದೆ. ಇದನ್ನು ನಿಲ್ದಾಣದಿಂದ ಹೊರಗೆ ಕಳುಹಿಸಲು ಟ್ಯಾಕ್ಸ್‌ ಕೋಡ್ ಬೇಕಾಗುತ್ತದೆ. ಅದನ್ನು ಪಡೆಯಲು ಆ ವಿಭಾಗದ ಅಧಿಕಾರಿ ಮಾನ್‌ಸಿಂಗ್ ಅವರ ಖಾತೆಗೆ 2.70 ಲಕ್ಷ ವರ್ಗಾಯಿಸಿ ಎಂದರು. ಆ ಮಾತನ್ನೂ ನಂಬಿ ಹಣ ಜಮೆ ಮಾಡಿದ್ದಾರೆ.!!

ಮತ್ತೆ ಫೋನ್ ಬಂದಿದ್ದು ಆರ್‌ಬಿಐನಿಂದ.!!

ಮತ್ತೆ ಫೋನ್ ಬಂದಿದ್ದು ಆರ್‌ಬಿಐನಿಂದ.!!

ಇಷ್ಟೆಲ್ಲಾ ಆದ ನಂತರ ಕೂಡ ಆರ್‌ಬಿಐನ ಮುಖ್ಯ ಪ್ರಧಾನ ವ್ಯವಸ್ಥಾಪಕ ಸ್ವರಭ್ ಜೋಷಿ ಹೆಸರಿನಲ್ಲಿ ರಮೇಶ್‌ಗೆ ಕಾಲ್ ಬಂದಿದ್ದು, ನೀವು ಅಮೆರಿಕದಿಂದ ಬಂದಿರುವ ಪಾರ್ಸಲ್ ಪಡೆಯುವ ಸಲುವಾಗಿ ವಿವಿಧ ಖಾತೆಗಳಿಗೆ ಹಾಕಿರುವ ಹಣ ಜಮೆ ಆಗಿಲ್ಲ. ನೀವು ಮತ್ತೆ 4.70 ಲಕ್ಷವನ್ನು ಆ ಖಾತೆಗಳಿಗೆ ಹಾಕಬೇಕು ಎಂದಾಗಲೇ ರಮೇಶ್ ತಾಳ್ಮೆ ಕಳೆದುಕೊಂಡಿದ್ದಂತೆ!!

ದೂರು ದಾಖಲಾಗಿದೆ.!!

ದೂರು ದಾಖಲಾಗಿದೆ.!!

ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿ ತಾನು ಹಣ ಕಳುಹಿಸಿರುವುದಾಗಿ ಚೆಂದದ ಮಾತುಗಳ ಮೂಲಕ ರಮೇಶ್ ಅವರನ್ನು ನಂಬಿಸಿದ್ದು, ರಮೇಶ್ 4.70 ಲಕ್ಷ ಕಳೆದುಕೊಂಡಿದ್ದಾರೆ.! ಈ ಬಗ್ಗೆ ಅವರು ಅಶೋಕನಗರ ಠಾಣೆಗೆ ದೂರು ಸಹ ದಾಖಲಿಸಿದ್ದು, ಅವರ ಪತ್ತೆಗೆ ಸೈಬರ್ ಅಧಿಕಾರಿಗಳ ನೆರವು ಕೋರಿದ್ದಾರೆ. ಹಾಗಾಗಿ, ನೀವು ಎಷ್ಟೇ ಬುದ್ದಿವಂತರಾಗಿದ್ದರೂ ಸಹ ಎಚ್ಚರಿಕೆಯಿಂದ ಇರುವುದು ಒಳಿತು!!

Best Mobiles in India

English summary
If you think the internet could provide relief to your lovelorn heart, beware!to know more visit to kannada.gibot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+