Home
ಫೀಚರ್ ಸ್ಟೋರೀಸ್

ಕೃಷಿ ಕ್ಷೇತ್ರದ ಮೇಲೂ ಹ್ಯಾಕರ್‌ಗಳ ಕಣ್ಣಿದೆ!?..ನಿಮಗೆ ಆಶ್ಚರ್ಯ ಎನಿಸಬಹುದು!!

ಕೃಷಿ ಕ್ಷೇತ್ರದ ಮೇಲೂ ಹ್ಯಾಕರ್‌ಗಳ ಕಣ್ಣು ಬೀಳಬಹುದು. ಇಂತಹ ಸಾಧ್ಯತೆಗಳು ಇವೆ ಎಂದು ತಂತ್ರಜ್ಞಾನ ತಜ್ಞರು ಎಚ್ಚರಿಸುತ್ತಿದ್ದಾರೆ.!!

By Bhaskar N J

ಆನ್‌ಲೈನ್ ಬ್ಯಾಂಕಿಂಗ್ ಜಗತ್ತಿಗೆ ಮಾತ್ರ ಹ್ಯಾಕಿಂಗ್ ಸಮಸ್ಯೆ ಎದುರಾಗಿರುವುದು ಎಂದು ನೀವಂದುಕೊಂಡಿದ್ದೀರಾ? ಹಾಗಾದರೆ ಇಂದಿನ ಸ್ಟೋರಿ ನಿಮಗೆ ಆಶ್ಚರ್ಯ ಎನಿಸಬಹುದು.! ಏಕೆಂದರೆ ಕೃಷಿ ಕ್ಷೇತ್ರದ ಮೇಲೂ ಹ್ಯಾಕರ್‌ಗಳ ಕಣ್ಣು ಬೀಳಬಹುದು. ಇಂತಹ ಸಾಧ್ಯತೆಗಳು ಇವೆ ಎಂದು ತಂತ್ರಜ್ಞಾನ ತಜ್ಞರು ಎಚ್ಚರಿಸುತ್ತಿದ್ದಾರೆ.!!

ಹೌದು, ಕೈಷಿ ಕ್ಷೇತ್ರದಲ್ಲಿ ಕಂಪ್ಯೂಟರ್‌ ಲಗ್ಗೆ ಇಟ್ಟಿದೆ. ಮನೆಯಿಂದಲೇ ಕಂಪ್ಯೂಟರ್ ಅಥವಾ ಮೊಬೈಲ್ ಸಹಾಯದಿಂದ ಹೊಲಕ್ಕೆ ನೀರು ಹರಿಸಬಹುದಾದ ತಂತ್ರಜ್ಞಾನದಿಮದ ಹಿಡಿದು ಹಲವು ತಂತ್ರಜ್ಞಾನಗಳು ಅಭಿವೃದ್ದಿಯಾಗಿದ್ದು, ಇದರಿಂದ ಹ್ಯಾಕರ್‌ಗಳ ಕಣ್ಣು ಕೃಷಿ ಮೇಲೂ ಬೀಳಬಹುದು ಎಂದು ಹೇಳಿದ್ದಾರೆ.!! ಹಾಗಾದರೆ, ಕೃಷಿ ಮೇಲೆ ಹ್ಯಾಕರ್‌ಗಳ ಕನ್ಣು ಹೇಗಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಕೃಷಿ ವಿವರಗಳನ್ನು ಹ್ಯಾಕ್ ಮಾಡಬಹದು.!!

ಕೃಷಿ ವಿವರಗಳನ್ನು ಹ್ಯಾಕ್ ಮಾಡಬಹದು.!!

ಭೂಸಾರ, ಮಣ್ಣಿನ ಫಲವತ್ತತೆ ಇತ್ಯಾದಿ ಕೃಷಿಗೆ ಸಂಬಂಧಿಸಿದ ಸಂಶೋಧನೆಗಳು, ಪರೀಕ್ಷೆಗಳ ವಿವರಗಳನ್ನು ಅಂತರ್ಜಾಲ ಆಧಾರಿತ ಸರ್ವರ್‌ಗಳಲ್ಲಿ ಸಂಗ್ರಹಿಸಿ ಇಡಲಾಗುತ್ತಿದೆ. ಇಂತಹ ಸರ್ವರ್‌ಗಳ ಮೇಲೆಹ್ಯಾಕರ್‌ಗಳ ಕಣ್ಣು ಬಿದ್ದರೆ ಅದರಲ್ಲಿರುವ ಅಮೂಲ್ಯವಾದ ಮಾಹಿತಿಯನ್ನು ಕದಿಯಬಹುದು ಅಥವಾ ಬದಲಾಯಿಸಬಹುದು.!!

ಕೃಷಿ ಮಾಹಿತಿ ಕದಿಯುವುದರಿಂದ ಏನು ಲಾಭ?

ಕೃಷಿ ಮಾಹಿತಿ ಕದಿಯುವುದರಿಂದ ಏನು ಲಾಭ?

ದೊಡ್ಡ ದೊಡ್ಡ ಬೃಹತ್ ಕಂಪೆನಿಗಳು ಕೃಷಿ ತಂತ್ರಜ್ಞಾನ ಉತ್ಪನ್ನಗಳ ತಯಾರಿಕೆಯಲ್ಲಿ ಮುಂದಾಗಿವೆ. ಇಂತಹ ಕಂಪೆನಿಗಳಿಗೆ ಭೂ ಪ್ರದೇಶಗಳು ಮತ್ತು ಅಲ್ಲಿ ಬೆಳೆಯುವ ಬೆಳೆಗಳ ಮಾಹಿತಿ ಬೇಕಾಗಿರುವುದರಿಂದ ಅವು ಮಾಹಿತಿಗಾಗಿ ಹಣವನ್ನು ನೀಡಲು ಮುಂದಾಗುತ್ತವೆ. ಇದರಿಂದ ಕೃಷಿ ಮಾಹಿತಿ ಕದ್ದು ಹಣಕ್ಕೆ ಮಾರಿಕೊಳ್ಳುವ ದುರುದ್ದೇಶ ಹ್ಯಾಕರ್‌ಗಳದ್ದು.!!

ತಂತ್ರಜ್ಞಾನದ ಮೇಲೆ ವಕ್ರದೃಷ್ಟಿ!!

ತಂತ್ರಜ್ಞಾನದ ಮೇಲೆ ವಕ್ರದೃಷ್ಟಿ!!

ಕೃಷಿ ಕ್ಷೇತ್ರದ ಕೆಲಸಗಳನ್ನು ಸರಳಗೊಳಿಸಲು ಅಭಿವೃದ್ಧಿಯಾಗಿರುವ ತಂತ್ರಜ್ಞಾನಗಳ ಮೇಲೆ ಹ್ಯಾಕರ್‌ಗಳ ವಕ್ರದೃಷ್ಠಿ ಬಿದ್ದರೆ ಅಪಾಯ ತಪ್ಪಿದ್ದಲ್ಲ. ಇಂತಹ ತಂತ್ರಜ್ಞಾನಗಳಿಗೆ ನಕಲಿ ಮಾಹಿತಿ ಅಳವಡಿಸಿದರೆ, ಅದನ್ನು ಆಧರಿಸಿ ಕೃಷಿ ಮಾಡುವ ರೈತರು ಕೈಸುಟ್ಟುಕೊಳ್ಳುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎನ್ನುತ್ತಾರೆ ತಜ್ಞರು!!

ಅಪಾಯಗಳು ತಪ್ಪಿದ್ದಲ್ಲ.!!

ಅಪಾಯಗಳು ತಪ್ಪಿದ್ದಲ್ಲ.!!

ಕೃಷಿ ಕ್ಷೇತ್ರದ ಸಂಶೋಧನೆ, ಮಾಹಿತಿ ಇತ್ಯಾದಿಗಳಿಗೆ ಸಂಬಂಧಿಸಿದ ಕಂಪ್ಯೂಟರ್, ಸರ್ವರ್‌ ವ್ಯವಸ್ಥೆಯ ಭದ್ರತೆ, ಸುರಕ್ಷತೆ ವಿಷಯದಲ್ಲಿ ಎಚ್ಚರವಹಿಸದಿದ್ದರೆ ಭವಿಷ್ಯದಲ್ಲಿ ಇಂತಹ ಅಪಾಯಗಳು ತಪ್ಪಿದ್ದಲ್ಲ. ಕೃಷಿಯನ್ನು ಉದ್ಯಮವಾಗಿಯೆ ಪರಿಗಣಿಸಿರುವ ಕಂಪೆನಿಗಳಿಗೆ ಇದು ಕಷ್ಟವೂ ಅಲ್ಲ ಎನ್ನಲಾಗಿದೆ!!

Best Mobiles in India

English summary
The threat of cybercrime in farming is expected to continue to rise. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+