ಆಗಸ್ಟ ನಿಂದ ಫೇಸ್ಬುಕ್ ಟಿವಿ ಶೋಗಳ ಪ್ರಾರಂಭ ಸಂಭವ
ಹಲವಾರು ಮೀಡಿಯಾ ಕಂಪೆನಿಗಳ ಪಾರ್ಟ್ನರ್ಶಿಪ್ ನೊಂದಿಗೆ ಫೇಸ್ಬುಕ್ ಆಗಸ್ಡ್ನಿಂದ ಫೇಸ್ಬುಕ್ ಟಿವಿ ಪ್ರಾರಂಭಿಸಲಿದೆ.
ಫೇಸ್ಬುಕ್ ಟಿವಿ ಶೋಗಳನ್ನು ಪ್ರಾರಂಭಿಸುವ ಸಲುವಾಗಿ ಹಾಲಿವುಡ್ ಸ್ಟುಡಿಯೋಸ್ ಜೊತೆ ಮಾತುಕತೆ ನಡೆಸುತ್ತಿರುವ ಸುದ್ದಿ ಜೂನ್ ತಿಂಗಳಲ್ಲಿ ಕೇಳಿ ಬಂದಿತ್ತು.ಸೆಪ್ಟೆಂಬರ್ ತಿಂಗಳಲ್ಲಿ ತನ್ನ ಸ್ವಂತ ಕಾರ್ಯಕ್ರಮಗಳನ್ನು ಲಾಂಚ್ ಮಾಡುವ ಗುರಿಯನ್ನು ಫೇಸ್ಬುಕ್ ಹೊಂದಿದೆ ಎಂದು ಹೇಳಲಾಗುತ್ತಿತ್ತು.

ಇದೀಗ ಬ್ಲೂಂಬರ್ಗ್ ವರದಿಯೊಂದರ ಪ್ರಕಾರ ಆಗಸ್ಟ್ ತಿಂಗಳಲ್ಲಿ ಬರಲಿದೆ ಫೇಸ್ಬುಕ್ ಟಿವಿ. ಈ ವರದಿಯ ಅನುಸಾರ ಫೇಸ್ಬುಕ್ ಕಂಪೆನಿಯು ಟಿವಿ ಪಾರ್ಟ್ನರ್ ಗಳಿಗೆ ಈ ಹೊಸ ಶೋಗಳ ಮೊದಲ ಸಂಚಿಕೆಗಳನ್ನು ಸಲ್ಲಿಸಲು ತಿಳಿಸಿದೆ.ಆರಂಭದಲ್ಲಿ ಈ ಶೋಗಳು 5-10 ನಿಮಿಷಗಳ ಚಿಕ್ಕ ಕಾರ್ಯಕ್ರಮಗಳಾಗಿರುತ್ತವೆ. ಕಡಿಮೆ ವೆಚ್ಚದಲ್ಲಿ ತಯಾರಾಗಲಿರುವ ಈ ಶೋಗಳ ಜವಾಬ್ದಾರಿ ಫೇಸ್ಬುಕ್ ನ ಪಾರ್ಟನರ್ಗಳಾದ ಮೀಡಿಯಾ ಕಂಪೆನಿಗಳದ್ದಾಗಿರುತ್ತದೆ.ಹಾಗೆಯೇ ಈ ಶೋಗಳ ಜಾಹೀರಾತುಗಳಿಂದ ಬರುವ ಆದಾಯದ 45% ಫೇಸ್ಬುಕ್ ಪಾಲಾಗಲಿದೆ.
ಫೇಸ್ಬುಕ್ ಟಿವಿ ಶೋ ಕುರಿತಾಗಿ ಫೇಸ್ಬುಕ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ ಇನ್ನು ಹದಿನೈದು ದಿನಗಳೊಳಗೆ ಫೇಸ್ಬುಕ್ ಟಿವಿ ಶೋ ಆರಂಭವಾಗುವುದು ಬಹುತೇಕ ಖಚಿತ ಎನ್ನುತ್ತದೆ ಬ್ಲೂಂಬರ್ಗ್ ವರದಿ. ಭವಿಷ್ಯದಲ್ಲಿ ಫೇಸ್ಬುಕ್ ಕಂಪೆನಿಯು ತನ್ನ ಫೇಸ್ಬುಕ್ ಟಿವಿಯಲ್ಲಿ ತನ್ನದೇ ಮಾಲಕತ್ವದ 20-30 ನಿಮಿಷಗಳ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ. ಕೆಲವು ಶೋಗಳು ಫೇಸ್ಬುಕ್ ನ ಪಾರ್ಟ್ನರ್ ಗಳಾದ ATTN, ವಾಕ್ಸ್ ಮೀಡಿಯಾ, ಬಝ್ ಫೀಡ್, ಗ್ರೂಪ್ ನೈನ್ ಮೀಡಿಯಾ ಮೊದಲಾದ ಮೀಡಿಯಾ ಕಂಪೆನಿಗಳಿಗೆ ಸೇರಿದ್ದಾಗಿರುತ್ತವೆ.
ಮೊದಲಿಗೆ ಈ ಟಿವಿ ಶೋಗಳನ್ನು ಜೂನ್ ತಿಂಗಳಲ್ಲಿ ಬಿಡುಗಡೆ ಮಾಡುವ ಅಂದಾಜು ಇತ್ತಾದರೂ ಈಗ ಅದು ಆಗಸ್ಟ್ ಗೆ ಮುಂದೂಡಲ್ಪಟ್ಟಿದೆ. ಫೇಸ್ಬುಕ್ ಟಿವಿ ಯ ತಯಾರಿ ಕೆಲಸಗಳ ಬಗ್ಗೆ ಪರಿಚಿತರಾಗಿರುವ ಕೆಲವರು ಇದರ ಬಿಡುಗಡೆ ಇನ್ನೂ ವಿಳಂಬವಾದೀತು ಎನ್ನುವ ಅಭಿಪ್ರಾಯ ಹೊಂದಿದ್ದಾರೆ.
ಫೇಸ್ಬುಕ್ ಟಿವಿಯ ಶೋಗಳು ಹೋಮ್ ಮೇಡ್ ಯೂಟ್ಯೂಬ್ ವೀಡಿಯೋಗಳಿಗಿಂತ ಮೇಲ್ಮಟ್ಟದ್ದಾಗಿದ್ದರೂ HBO ಮತ್ತು ನೆಟ್ ಫ್ಲಿಕ್ಸ್ ನ ಕಾರ್ಯಕ್ರಮಗಳಂತೆ ಇರುವುದಿಲ್ಲ. ಹೋಮ್ ಮೇಡ್ ಯೂಟ್ಯೂಬ್ ವೀಡಿಯೋ ಮತ್ತುHBO/ನೆಟ್ ಫ್ಲಿಕ್ಸ್ ಗಳ ಮಧ್ಯದ ಅಂತರವನ್ನು ಫೇಸ್ಬುಕ್ ಟಿವಿ ತುಂಬಲಿದೆ.

ಫೇಸ್ಬುಕ್ ನ್ಯೂಸ್ ಫೀಡ್ ಗಿಂತ ಜಾಹೀರಾತುದಾರರಿಗೆ ಹೆಚ್ಚಿನ ಸ್ಪೇಸ್ ನೀಡುವ ಕುರಿತು ಯೋಚಿಸುತ್ತಿದ್ದಾರೆ, ಲಾಂಗ್-ಫಾರ್ಮ್ ಎಂಟರ್ಟೈನ್ಮೆಂಟ್ ಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುವ ಅವರ ಗುರಿಗೆ ಈ ಹೆಜ್ಜೆ ಆವಶ್ಯಕ ಎಂದು ಫೇಸ್ಬುಕ್ ಸ್ಪಷ್ಟೀಕರಿಸಿದೆ.


Click it and Unblock the Notifications








