ಈ ಊರಲ್ಲಿ ಹುಡುಗಿಯರು ಮೊಬೈಲ್‌ನಲ್ಲಿ ಮಾತನಾಡಿದರೆ 21,000 ರೂ. ದಂಡ!!
ಮೊಬೈಲ್ ಫೋನ್ ಹಿಡಿದು ಮಾತನಾಡಿದರೆ 21,000 ಸಾವಿರ ರೂ. ದಂಡ ವಿಧಿಸುವ ನಿರ್ಣಯ ಕೈಗೊಂಡಿದ್ದಾಗಿ ಪಂಚಾಯತ್ ಸದಸ್ಯರು ಹೇಳಿದ್ದಾರೆ.!!
ಹುಡುಗಿಯರು ರಸ್ತೆಯಲ್ಲಿ ಅಡ್ಡಾಡುತ್ತಾ ಮೊಬೈಲ್ ಫೋನ್ ಹಿಡಿದು ಮಾತನಾಡಿದರೆ 21,000 ಸಾವಿರ ರೂ. ದಂಡ ವಿಧಿಸುವ ಹೊಸ ನಿಯಮವನ್ನು ಮಡೋರಾ ಎಂಬ ಗ್ರಾಮದಲ್ಲಿ ಜಾರಿ ಮಾಡಲಾಗಿದೆ.! ಈ ಬಗ್ಗೆ ಆ ಊರಿನ ಮುಖಂಡರೆಲ್ಲರೂ ಸೇರಿ ನಿರ್ಧರಿಸಿದ್ದಾರೆ.!!
ಹೌದು, ನೀವುಕೇಳಿದ್ದು ಸತ್ಯ.!! ಉತ್ತರ ಪ್ರದೇಶ ರಾಜ್ಯದ ಮಥುರಾದ ಮಡೋರಾ ಗ್ರಾಮದಲ್ಲಿ ಈ ರೀತಿಯ ನಿಯಮ ತಂದಿದ್ದು, ಗ್ರಾಮ ಪಂಚಾಯತ್‌ನಲ್ಲಿಯೇ ಈ ನಿರ್ಧಾರ ಕೈಗೊಂಡಿರುವುದಾಗಿ ವರದಿಯಾಗಿದೆ.!

ಹುಡುಗಿಯರ ಮೆಲಿನ ದೌರ್ಜನ್ಯ ತಡೆ ಮತ್ತು ಹುಡುಗಿಯರು ಓಡಿ ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ರಸ್ತೆಯಲ್ಲಿ ನಡೆದುಹೋಗುವಾಗ ಮೊಬೈಲ್ ಫೋನ್ ಹಿಡಿದು ಮಾತನಾಡಿದರೆ 21,000 ಸಾವಿರ ರೂ. ದಂಡ ವಿಧಿಸುವ ನಿರ್ಣಯ ಕೈಗೊಂಡಿದ್ದಾಗಿ ಪಂಚಾಯತ್ ಸದಸ್ಯರು ಹೇಳಿದ್ದಾರೆ.!!

ಇನ್ನು ಗ್ರಾಮಪಂಚಾಯಿತಿ ನಿರ್ಣಯದ ಬಗ್ಗೆ ಸಾಕಷ್ಟು ವಿರೋಧ ಕೇಳಿಬಂದಿದ್ದು, ಉತ್ತರ ಪ್ರದೇಶದ ಸಚಿವೆ ರೀಟಾ ಬಹುಗುಣ ಜೋಶೀ ನಿರ್ಣಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪಂಚಾಯತ್ ಅದಸ್ಯರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.!!


Click it and Unblock the Notifications








