ಮೊಬೈಲ್ ವ್ಯಸನದ ಬಗ್ಗೆ ನಿಮ್ಹಾನ್ಸ್ ಅಧ್ಯಯನ ಹೇಳಿರುವುದೇನು ಗೊತ್ತಾ?!
2017 ರ ನವೆಂಬರ್ ತಿಂಗಳಿನಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ಸಮ್ಮೇಳನದಲ್ಲಿ ಮೊಬೈಲ್ ಹಾಗೂ ಅಂತರ್ಜಾಲದ ವ್ಯಸನದ ಕುರಿತು ಗಂಭೀರವಾದ ಚರ್ಚೆಯಾಗಿತ್ತು. ಮುಂದಿನ ಜನಾಂಗವನ್ನೇ ಮಾನಸಿಕ ರೋಗಿಗಳನ್ನಾಗಿ ಮಾಡುವ ತೀವ್ರತೆಯನ್ನು ಮೊಬೈಲ್ ಹಾಗೂ ಅಂತರ್ಜಾಲ ಹೊಂದಿದೆ ಎಂದು ಈ ಚರ್ಚೆಯಲ್ಲಿ ಪ್ರಮುಖ ವಿಷಯವಾಗಿತ್ತು.!!
ಹೌದು, ತಂತ್ರಜ್ಞಾನ ನಮ್ಮ ಸಮಾಜದಲ್ಲಿರುವ ಅನೇಕ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಅದೇ ತಂತ್ರಜ್ಞಾನ ಹೊಸ ಸಮಸ್ಯೆಗಳನ್ನು ತರುತ್ತದೆ, ಮತ್ತೆ ಆ ಸಮಸ್ಯೆಗೆ ಪರಿಹಾರವನ್ನು ಮತ್ತೊಂದು ತಂತ್ರಜ್ಞಾನ ನೀಡುತ್ತದೆ ಎನ್ನುವ ಮಾತು ಮೊಬೈಲ್ ಹಾಗೂ ಅಂತರ್ಜಾಲ ಬಳಕೆಯಲ್ಲಿ ಅಕ್ಷರಶಃ ನಿಜವಾಗಿದೆ.!!
ಮೊಬೈಲ್‌ನಲ್ಲಿ ಆಡುವ ವ್ಯಸನವನ್ನು ವಿಶ್ವ ಆರೋಗ್ಯ ಸಂಸ್ಥೆಯು 'ಆಡುವ ಅಸ್ವಸ್ಥತೆ' ಎಂದು ಗುರುತಿಸಿದೆ. ಇತ್ತೀಚೆಗಿನ ನಿಮ್ಹಾನ್ಸ್ ಅಧ್ಯಯನದ ಪ್ರಕಾರ 15 ನಿಮಿಷಕ್ಕೆ 150 ಸೆಲ್ಫೀ ತೆಗೆಯುವ ಗೀಳಿರುವ ಯುವಜನ ಇದ್ದಾರಂತೆ!! ಹಾಗಾದರೆ, ಈ ಮೊಬೈಲ್ ವ್ಯಸನದಿಂದ ಮುಕ್ತಿ ಹೊಂದುವುದು ಹೇಗೆ? ವ್ಯಸನ ಮುಕ್ತಿಗೆ ಅಡ್ಡಿ ಬರುತ್ತಿರುವುದು ಏನು? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಖಿನ್ನತೆ, ಭಯ, ಆತಂಕ!!
ಮೊಬೈಲ್‌ನಲ್ಲಿ ಆಡುವ ವ್ಯಸನವನ್ನು 'ಆಡುವ ಅಸ್ವಸ್ಥತೆ' ಎಂದು ವಿಶ್ವ ಆರೋಗ್ಯ ಸಂಸ್ಥೆಯು ಗುರಿತಿಸುವ ಮುನ್ನವೇ ಮೊಬೈಲ್ ಗೇಮ್ ಮತ್ತು ಅಂತರ್ಜಾಲದ ವ್ಯಸನವಿರುವವರಲ್ಲಿ ಶೇಕಡಾ 7 ರಷ್ಟು ಮಂದಿ ಖಿನ್ನತೆ, ಭಯ, ಆತಂಕ ಹಾಗು ನಡವಳಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತೋರ್ಪಡಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ.!!

ಅಂತರ್ಜಾಲ ಆಧುನಿಕ ರೋಗ.!!
ತಂತ್ರಜ್ಞಾನ ಹೊಸ ಸಮಸ್ಯೆಗಳನ್ನು ತರುತ್ತದೆ, ಮತ್ತೆ ಆ ಸಮಸ್ಯೆಗೆ ಪರಿಹಾರವನ್ನು ಮತ್ತೊಂದು ತಂತ್ರಜ್ಞಾನ ನೀಡುತ್ತದೆ ಎನ್ನುವ ಮಾತಿನಂತೆ ಮೊಬೈಲ್ ಹಾಗೂ ಅಂತರ್ಜಾಲ ಆಧುನಿಕ ರೋಗಗಳಾಗಿವೆ. ಇವು ಮುಂದಿನ ಜನಾಂಗವನ್ನೇ ಮಾನಸಿಕ ರೋಗಿಗಳನ್ನಾಗಿ ಮಾಡುವ ತೀವ್ರತೆಯನ್ನು ಹೊಂದಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.!!

ಸಮಸ್ಯೆಗಳು ಹಲವು!!
ಮೊಬೈಲ್ ಹಾಗೂ ಅಂತರ್ಜಾಲದ ವ್ಯಸನದಿಂದ ವಯಸ್ಕರು ಮಾನಸಿಕ ಆರೋಗ್ಯ ಕೆಡಿಸಿಕೊಂಡರೆ, ಮಕ್ಕಳು ಇತರೆ ಮಕ್ಕಳೊಂದಿಗೆ ಬೆರೆಯದೆ ಏಕಾಂಗಿಯಾಗಿರುವುದು, ಕಲಿಕೆಯಲ್ಲಿ ಹಿಂದುಳಿಯುವುದು, ಸ್ಥೂಲಕಾಯ, ಏಕಾಗ್ರಹೀನತೆ ಮುಂತಾದ ವಿವಿಧ ಸಮಸ್ಯೆಗಳಿಂದ ಬಳಲುತ್ತಾರೆ.! ಈ ದುಷ್ಪರಿಣಾಮಗಳು ಗೋಚರಿಸುವಾಗ ಸಮಯ ಬಹಳ ಮೀರಿರುತ್ತದೆ.!!

ಸೆಲ್ಫೀಯೂ ಗೀಳೆ!!
ಚಾಟ್ ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲೇ ವಿಹರಿಸುತ್ತಿರುವತಂಹ ಮುಂತಾದ ಅನೇಕ ಸಮಸ್ಯೆಗಳು ಇತ್ತೀಚೆಗೆ ಯುವ ಜನತೆಯಲ್ಲಿ ಕಾಣಿಸುತಿದೆ. ಮೊಬೈಲ್ ಅನ್ನು ಆಗಾಗ ಸುಮ್ಮನೇ ಆನ್ ಮಾಡಿ ನೋಡುವುದೂ ಮತ್ತು ಸೆಲ್ಫೀ ತೆಗೆದುಕೊಳ್ಳುವುದು ಗೀಳಾಗಿ ಬದಲಾಗಿದೆ.! ಇದು ಎಲ್ಲರ ಸಮಸ್ಯೆಯಾಗಿ ಬದಲಾಗಿದೆ.!!

ವ್ಯಸನ ಎಂಬುದನ್ನು ಒಪ್ಪಿಕೊಳ್ಳಿ!!
ಮೊಬೈಲ್ ಹಾಗೂ ಅಂತರ್ಜಾಲದ ಬಳಕೆ ಇತರೆ ಮಾನಸಿಕ ರೋಗಗಳಿಗೆ ಎಡೆಮಾಡಿಕೊಡಬಹುದಾದಂತಹ ವ್ಯಸನ ಎಂಬುದನ್ನು ಒಪ್ಪಿಕೊಳ್ಳಲೇಬೇಕಿದೆ. ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಯಮಿತಗೊಳಿಸಿ ನಾವೇ ಲಗಾಮು ಹಾಕಿಕೊಂಡರಹಷ್ಟೆ ಇವುಗಳ ವ್ಯಸನದಿಂದ ನಾವು ಪಾರಾಗಬಹುದಾಗಿದೆ.!!


ಮೊಬೈಲ್ ನಿಯಂತ್ರಿಸಿ.!!
ಬಹುತೇಕ ಸಂದರ್ಭದಲ್ಲಿ ಮೊಬೈಲ್ ಅನ್ನು ನಿಯಂತ್ರಿಸಿ. ಏಕಾಗ್ರತೆಗೆ ಭಂಗಬರುವಹಾಗೆ ಮೊಬೈಲ್ ಬಳಕೆ ಬೇಡವೇಬೇಡ.!! ಕೆಲವೊಂದು ಕರೆಗಳನ್ನು ಸ್ವೀಕರಿಸಲಾಗದಿದ್ದರೂ ಚಿಂತೆಯಿಲ್ಲ ಎಂಬ ಮನಸ್ಥಿತಿಯನ್ನು ಮೂಡಿಸಿಕೊಂಡು ಈ ಬಗ್ಗೆ ನಿಮ್ಮ ಆಪ್ತರಿಗೂ ತಿಳಿಸಿ. ಇದರಿಂದ ನಿಮ್ಮ ವ್ಯಸನಕ್ಕೆ ಸ್ವಲ್ಪ ಬ್ರೇಕ್ ಸಿಗಬಹುದು!! ಏನಂತಿರಾ?


Click it and Unblock the Notifications








