Subscribe to Gizbot

ಜಿಯೋಗಿಂತ ಮೊದಲು ಭಾರತೀಯರ ಪರಿಸ್ಥಿತಿ ಹೇಗಿತ್ತು ಗೊತ್ತಾ? ಶಾಕಿಂಗ್!!

Written By:

ಮೊಬೈಲ್‌ ಕರೆಗಳಿಗೆ ಉಳಿದಿರುವ ಮೊತ್ತ ಮತ್ತು ದತ್ತಾಂಶದ ಬಳಕೆ ವಿವರ ಒದಗಿಸುವ ಟ್ರೂ ಬ್ಯಾಲನ್ಸ್ ನಡೆಸಿರುವ ಅಧ್ಯಯನದ ಪ್ರಕಾರ, ದೇಶದ ಮೊಬೈಲ್‌ ಬಳಕೆದಾರರ ಡೇಟಾ ಬಳಕೆ ಪ್ರಮಾಣವು 1 ಜಿಬಿಗೂ ಹೆಚ್ಚಾಗಿದೆ.!! ಹೌದು, ಪ್ರಿಪೇಯ್ಡ್‌ ಬಳಕೆದಾರರ ಒಂದು ಬಾರಿಯ ಸರಾಸರಿ ರೀಚಾರ್ಜ್‌ ಪ್ರಮಾಣವು 2016ರ ಫೆಬ್ರುವರಿ ತಿಂಗಳಲ್ಲಿ 400 ಎಂಬಿ ಇದ್ದರೆ , 2017ರ ಮಾರ್ಚ್‌ ತಿಂಗಳಲ್ಲಿ 1 ಜಿಬಿಗೆ ಏರಿಕೆಯಾಗಿತ್ತು. ಎಂದು ಟ್ರೂ ಬ್ಯಾಲನ್ಸ್ ವರದಿ ಮಾಡಿದೆ.!!

2016 ನೇವರ್ಷದ ಅಕ್ಟೋಬರ್‌ ತಿಂಗಳಲ್ಲಿ ಗರಿಷ್ಠ ಮಟ್ಟ 1.6 ಜಿಬಿ ಸರಾದರಿ ಡೇಟಾವನ್ನು ಭಾರತೀಯರು ಬಳಕೆ ಮಾಡಿದ್ದಾರೆ ಎಂದು ಟ್ರೂಕಾಲರ್ ವರದಿ ಹೇಳಿದ್ದು, ಪ್ರತಿ ದಿನದ ಸರಾಸರಿ ಡೇಟಾ ಬಳಕೆಯು 40 Mb ಯಿಂದ 55 Mb ಏರಿಕೆಯಾಗಿತ್ತು ಎಂದು ಟ್ರೂ ಬ್ಯಾಲನ್ಸ್ ನೀಡಿರುವ ವಿಶ್ಲೇಷಣೆಯಿಂದ ತಿಳಿದು ಬಂದಿದೆ.!! ಇನ್ನು ಭಾರತೀಯರು ಸರಾಸರಿ 7.5 ದಿವಸಗಳ ವರೆಗೂ ಬ್ಯಾಲೆನ್ಸ್ ಇಲ್ಲದೆ ಇರುತ್ತಿದ್ದರು ಎಂದು ಟ್ರೂ ಬ್ಯಾಲನ್ಸ್ ಹೇಳಿದೆ.!!

ಜಿಯೋಗಿಂತ ಮೊದಲು ಭಾರತೀಯರ ಪರಿಸ್ಥಿತಿ ಹೇಗಿತ್ತು ಗೊತ್ತಾ? ಶಾಕಿಂಗ್!!

ಟೆಲಿಕಾಂನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಡೇಟಾ ಪ್ಲ್ಯಾನ್‌ಗಳನ್ನು ನೀಡಿದ್ದರಿಂದ ದೇಶದಲ್ಲಿ ಡೇಟಾ ಪ್ರಮಾಣವು ಗಣನೀಯ ಏರಿಕೆ ದಾಖಲಿಸಲು ಕಾರಣವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ!! ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ 150ರಷ್ಟು ಏರಿಕೆ ದಾಖಲಿಸಿದೆಜಿಯೊದ ಉಚಿತ ಡೇಟಾ ಮತ್ತು ಅನ್‌ಲಿಮಿಟೆಡ್ ಡೇಟಾ ಆಫರ್ ಪ್ರಕಟಗೊಂಡ ನಂತರ ಬಳಕೆದಾರರು ಇಂಟರ್‌ನೆಟ್‌ ಸಂಪರ್ಕ ಪಡೆಯುವ ಸಂಖ್ಯೆಯು ಹೆಚ್ಚಾಗಿದೆ.!!

ಜಿಯೋಗಿಂತ ಮೊದಲು ಭಾರತೀಯರ ಪರಿಸ್ಥಿತಿ ಹೇಗಿತ್ತು ಗೊತ್ತಾ? ಶಾಕಿಂಗ್!!

ಟೆಲಿಕಾಂನಲ್ಲಿ ನಡೆಯುತ್ತಿರುವ ದರಸಮರಕ್ಕಿಂತ ಮೊದಲು ಭಾರತದ ಬಳಕೆದಾರರು ಹೆಚ್ಚು ಬೆಲೆ ಕಾರಣಕ್ಕೆ ತಮ್ಮ ಡೇಟಾ ಬಳಕೆಗೆ ಮಿತಿ ಹಾಕಿಕೊಂಡಿದ್ದರು. ಆದರೆ, ಟೆಲಿಕಾಂಗಳು ಕಡಿಮೆ ಬೆಲೆಗೆ ಡೇಟಾ ನೀಡಿದ್ದರಿಂದ ಭಾರತೀಯರು ಡೇಟಾ ಬಳಕೆಯನ್ನು ಹೆಚ್ಚಿಸಿದ್ದಾರೆ ಎಂದು ಟ್ರೂ ಬ್ಯಾಲನ್ಸ್‌ನ ನಿರ್ದೇಶಕ ಅಲೆಕ್ಸ್‌ ಸುಹ್ ಹೇಳಿದ್ದಾರೆ.!!

English summary
True Balance claims prepaid users in the country go without balance for 7.5 days every month.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot