ನೀವು ತಿಳಿದುಕೊಂಡಿರಲೆಬೇಕಾದ ಇನ್ ಸ್ಟಾಗ್ರಾಂ ಸ್ಟೋರಿ ಟ್ರಿಕ್ಸ್..!
ಕಳೆದ ನವೆಂಬರ್ ನಲ್ಲಿ 300 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಇನ್ಸ್ಟಾ ಗ್ರಾಂ, ತನ್ನ ಸ್ಟೋರಿಸ್ ಮೂಲಕ ಬಳಕೆದಾರರನ್ನು ಬುದ್ಧಿಬ್ರಮೆಗೊಳಿಸಿ, ಭದ್ರವಾಗಿ ಹಿಡಿದಿಟ್ಟುಕೊಳ್ಳುತ್ತಿದೆ. ಕೇವಲ ಒಂದು ಫೋಟೋವನ್ನೋ ಇಲ್ಲ ವೀಡಿಯೋವನ್ನು ಸೇರಿಸುವುದು ಭೂತಕಾಲದ ಕಥೆಯಾಯ್ತು, ಈಗ ಸ್ಟೋರಿಸ್ ಗಳು ವಿಕಾಸದ ಹಾದಿಯನ್ನು ಹಿಡಿದಿದೆ.
ಪ್ರತಿ ಎರಡು ಅಥವಾ ಮೂರು ವಾರಕ್ಕೊಮ್ಮೆ ಬರುವ ಹೊಸ ಆವೃತ್ತಿಯು, ಇನ್ನಷ್ಟು ಸ್ಟೋರಿಗಳನ್ನು ಪೋಸ್ಟ್ ಮಾಡಿ ಕಾಲಹರಣ ಮಾಡಲು ಮನಸ್ಸು ಹರಿಸುತ್ತೆ. ಹಾಗಾದ್ರೆ ಸ್ಟೋರೀಸ್ ಗೆ ಸೇರಿಕೊಳ್ಳುತ್ತಿರುವ ಇನ್ಸ್ಟಾ ಗ್ರಾಂನ ಹೊಸ ವೈಶಿಷ್ಟ್ಯದ ಬಗ್ಗೆ ತಿಳಿದುಕೊಳ್ಳೋಣ ಮತ್ತು ಅದನ್ನು ಹೇಗೆ ಬಳಸುವುದು ಎಂಬ ಬಗ್ಗೆ ನೋಡೋಣ.


ಸ್ಟೋರೀಸ್ ಗೆ ಪೋಸ್ಟ್ ಗಳನ್ನು ಶೇರ್ ಮಾಡಿ
ಕೆಲವು ಬಳಕೆದಾರರು ಸ್ಟೋರೀಸ್ ಗಳ ಮುಖಾಂತರ ನೇರವಾಗಿ ಅವರ ಪೋಸ್ಟ್ ಗಳಿಗೆ ಸಂಚರಿಸಿ ಬಿಡುತ್ತಾರೆ. ಅವರು ಮೆಸೇಜ್ ನಲ್ಲಿ "New post up, check it out" ಎಂದು ಹೇಳುತ್ತಾರೆ. ಅಂದರೆ ಹೊಸ ಪೋಸ್ಟ್ ಬಂದಿದೆ ಪರೀಕ್ಷಿಸಿ ಎಂದರ್ಥ. ಆದರೆ ಈಗ ಸ್ಟೋರೀಸ್ ಮತ್ತಷ್ಟು ಸರಳಗೊಂಡಿದೆ. ಪೋಸ್ಟ್ ಗಳನ್ನು ನೇರವಾಗಿ ಶೇರ್ ಮಾಡಲು ಆಗುವಂತ ಆಯ್ಕೆಯೊಂದಿಗೆ ಬರುತ್ತಿದೆ ಸ್ಟೋರೀಸ್. ಇದನ್ನು ಈ ಕೆಳಕಂಡ ಹಂತಗಳಲ್ಲಿ ಸಾಧಿಸಬಹುದು
ಹಂತ 1: ಇನ್ ಸ್ಟಾಗ್ರಾಂ ತೆರೆಯಿರಿ ಮತ್ತು ಪೋಸ್ಟ್ ಯುವರ್ ಚಾಯಿಸ್ ಗೆ ತೆರಳಿ. ಸೆಂಡ್ ಟು ಐಕಾನ್ ನ್ನು ಟ್ಯಾಪ್ ಮಾಡಿ
ಹಂತ 2: ಪಾಪ್ ಅಪ್ ನಲ್ಲಿ ‘Add post to your story'ಯನ್ನು ಟ್ಯಾಪ್ ಮಾಡಿ.
ಹಂತ 3: ಒಮ್ಮೆ ಸ್ಟೋರಿ ಸ್ಕ್ರೀನ್ ನಲ್ಲಿ , ಅಪ್ ಲೋಡ್ ಮಾಡಲು ‘Your Story' ಟ್ಯಾಪ್ ಮಾಡಿ.
ಒಂದು ವೇಳೆ ಅವರು ಪಬ್ಲಿಕ್ ಪ್ರೊಫೈಲ್ ಆಗಿದ್ದಲ್ಲಿ ,ಬೇರೆಯವರ ಪ್ರೊಫೈಲ್ ನಲ್ಲಿರುವ ಪೋಸ್ಟ್ ಗಳಲ್ಲೂ ಇದನ್ನು ಮಾಡಬಹುದು.

ನಿಮ್ಮ ಪೋಸ್ಟ್ ಗಳನ್ನು ಡ್ರೆಸ್ ಅಪ್ ಮಾಡಿ
ಖಂಡಿತವಾಗಿಯೂ ನೀವು ಇವುಗಳನ್ನು ಬಳಸಿರುತ್ತೀರಿ. ಸ್ಟಿಕ್ಕರ್ಸ್, ಟೆಕ್ಸ್ಟ್ ಗಳನ್ನು ನಾರ್ಮಲ್ ಸ್ಟೋರಿಗಳಲ್ಲಿ ಬಳಸುವುದು, ನೀವು ಪೋಸ್ಟ್ ಶೇರ್ ಮಾಡಿದ್ದಾಗಲೂ ಕೂಡ ಇದನ್ನೇ ಮಾಡಬಹುದು. ಪೋಸ್ಟ್ ಸ್ವತಃ ಒಂದು ಡೂಡಲ್ -ಫ್ರೂಫ್ ಆಗಿರುತ್ತದೆ. ಆದರೆ ನೀವು ಬ್ಯಾಕ್ ಗ್ರೌಂಡ್ ನಲ್ಲೂ ಇದನ್ನು ಮಾಡಬಹುದು. ಇನ್ಸ್ಟಾ ಗ್ರಾಂ ಪ್ರಮುಖ ಬಣ್ಣವನ್ನು ಪೋಸ್ಟ್ ನ ಬ್ಯಾಕ್ ಗ್ರೌಂಡ್ ಆಗಿ ಬಳಸುತ್ತೆ. ಆದರೆ ಅದನ್ನು ನೀವು ಸುಲಭದಲ್ಲೇ ಬದಲಿಸಬಹುದು. ಕೇವಲ ಸರಿಸುವ ಮುಖಾಂತರ ನೀವಿದನ್ನು ಸಾಧಿಸಬಹುದು ಮತ್ತು ಪಿಂಚ್ ಮಾಡಿ ಹೋಲ್ಡ್ ಮಾಡುವ ಮುಖಾಂತರ ರೀಸೈಜ್ ಕೂಡ ಮಾಡಬಹುದು.

ಸ್ಟೋರೀಸ್ ಗೆ ಪೋಸ್ಟ್ ಶೇರ್ ಆಗುವುದನ್ನು ಡಿಸೇಬಲ್ ಮಾಡುವುದು
ಕೆಲವು ಮಂದಿಗೆ ತಮ್ಮ ಪೋಸ್ಟ್ ವಯಕ್ತಿಕವಾಗಿರುವುದೆಂದರೇ ಇಷ್ಟ. ಅವರದ್ದು ಪಬ್ಲಿಕ್ ಪ್ರೊಫೈಲ್ ಆಗಿದ್ದರೂ ಕೂಡ ಬೇರೆಯವರ ಸ್ಟೋರಿಗಳನ್ನು ಪ್ರಸಾರ ಮಾಡುವುದು ಎಂದರೆ ಅವರಿಗೆ ಇಷ್ಟವಿಲ್ಲ, ಅಪ್ ಗ್ರೇಡ್ ನಲ್ಲಿ ಇನ್ಸ್ಟಾ ಗ್ರಾಂ ಇದನ್ನು ಪರಿಗಣಿಸಿದ್ದು,ನೀವು ಈ ರೀತಿ ಶೇರ್ ಮಾಡುವ ವಿಚಾರದಿಂದ ಆರಾಮದಾಯವಾಗಿಲ್ಲದಿದ್ದರೆ ಖಂಡಿತವಾಗಿಯೂ ಅದನ್ನು ಡಿಸೇಬಲ್ ಮಾಡಬಹುದು.
ಪ್ರೊಫೈಲ್ ಗೆ ತೆರಳಿ ಮತ್ತು ಸೆಟ್ಟಿಂಗ್ಸ್ ಓಪನ್ ಮಾಡಿ.ಪ್ರೈವೆಸಿ ಮತ್ತು ಸೆಕ್ಯುರಿಟಿಯನ್ನು ಸ್ಕ್ರೋಲ್ ಡೌನ್ ಮಾಡಿ. Allow others to reshare ಅನ್ನೋ ಆಯ್ಕೆಯೊಂದನ್ನು ನೀವು ಗಮನಿಸುತ್ತೀರಿ.ಅದನ್ನು ಟರ್ನ್ ಆಫ್ ಮಾಡಿ.

ವಿವಿದ ವೈಶಿಷ್ಟ್ಯತೆಗಳು
ನೀವು ಸ್ಟೋರಿಸ್ ಜೊತೆ ಸಂವಹನ ನಡೆಸಬಹುದು. ಉದಾಹರಣೆಗೆ ಶೇರ್ ಆಗಿರುವ ಪೋಸ್ಟ ನ್ನು ಟ್ಯಾಪ್ ಮಾಡಿದರೆ ನೇರವಾಗಿ ನೀವು ಒರಿಜಿನಲ್ ಪೋಸ್ಟ್ ಗೆ ತೆರಳುತ್ತೀರಿ.ನೀವು ಬಳಕೆದಾರರನ್ನು ಪೋಸ್ಟ್ ಮೇಲೆ ಟೈಪ್ ಮಾಡವ ಮುಖಾಂತರ ಟ್ಯಾಗ್ ಮಾಡಬಹುದು.ಒಮ್ಮೆ ನೀವು ಹೊಸ ಪೋಸ್ಟ್ ಅಪ್ ಲೋಡ್ ಮಾಡಿದರೆ, ಇನ್ಸ್ಟಾಗ್ರಾಂ ನಿಮ್ಮ ಸ್ಟೋರಿಯಲ್ಲಿ ಅದನ್ನು ಶೇರ್ ಮಾಡಲು ನೇರವಾಗಿ ಅವಕಾಶ ಕೊಡಲಿದೆ.ಎರಡೂ ಟಾಸ್ಕ್ ನ್ನು ಒಮ್ಮೆಲೆ ಮುಗಿಸಬಹುದು.


ಸ್ಟಿಕ್ಕರ್ಸ್, ಎಮೋಜಿ ಗಳನ್ನು ಸೇರಿಸಿ
ಇನ್ನೊಂದು ಕುತೂಹಲಕಾರಿ ವೈಶಿಷ್ಟ್ಯವೆಂದರೆ ಮೆಸೇಜ್ ಗಳ ಗ್ರಾಹಕೀಕರಣ. ಸೆಂಡ್ ಐಕಾನ್ ಮೇಲೆ ಟ್ಯಾಪ್ ಮಾಡಿ, ನಂತರ ಸ್ಟೋರಿಯನ್ನು ನಿಮ್ಮ ಪೋಸ್ಟ್ ನಲ್ಲಿ ಆಡ್ ಮಾಡಿ. ಸ್ಟಿಕ್ಕರ್ಸ್, ಎಮೋಜಿ ಗಳನ್ನು ಸೇರಿಸಿ ಇದನ್ನು ಕಸ್ಟಮೈಸ್ ಮಾಡಿ. ಆದರೆ ಸ್ಟೋರಿಸ್ ಗೆ ಇದನ್ನು ಆಡ್ ಮಾಡುವ ಬದಲು , ನೀವು "Send To" ಆಯ್ಕೆಯನ್ನು ಬಳಸಬಹುದು.ಇದಿಷ್ಟೇ ಅಲ್ಲದೇ ಇನ್ಸ್ಟಾಗ್ರಾಂ ಇನ್ನಷ್ಟು ವೈಶಿಷ್ಟ್ಯತೆಗಳನ್ನು ಪ್ರಯೋಗಗೊಳಿಸುತ್ತಿದ್ದು, ಇತರೆ ಆಪ್ ಗಳ ಮುಖಾಂತರ ಪೋಸ್ಟ್ ಗಳನ್ನು ಅನೇಬಲ್ ಮಾಡುವುದು, ಯಾವುದೇ ಲಿಂಕ್ ಇಲ್ಲದೆ ಸ್ಟೋರಿಗಳು ಅಕೌಂಟ್ ಸೇರುವುದು ಇತ್ಯಾದಿಗಳು.


Click it and Unblock the Notifications








