ಮೊಬೈಲ್ ಇನ್ಸುರೆನ್ಸ್ ಮಾಡಿಸಿದ್ದರೂ ಕ್ಷುಲ್ಲಕ ಕಾರಣಕ್ಕೆ ಪರಿಹಾರ ನೀಡಲಿಲ್ಲ!!.ಕೊನೆಗೆ ಆಗಿದ್ದು?
ಮೊಬೈಲ್ ಕಳೆದುಕೊಂಡಿದ್ದ ಗ್ರಾಹಕರೋರ್ವರಿಗೆ 37,499 ರೂ ಪರಿಹಾರದ ಹಣ ಪಾವತಿಸುವಂತೆ ಕೋರ್ಟ್ ಆದೇಶಿಸಿದೆ.!!
ಹೊಸ ಮೊಬೈಲ್ ಖರೀದಿಸುವಣಾಗ ಮೊಬೈಲ್ ಇನ್ಸುರೆನ್ಸ್ ಮಾಡಿಸಲು ಒತ್ತಡ ಹೇರುವ ವಿಮಾ ಕಂಪನಿಗಳು, ಮೊಬೈಲ್ ಇನ್ಸುರೆನ್ಸ್ ಮಾಡಿಸಿದ ನಂತರ ಮೊಬೈಲ್ ಹಾಳಾದರೂ ಪರಿಹಾರ ನೀಡುವಲ್ಲಿ ಹಿಂದೇಟು ಹಾಕುತ್ತವೆ ಎಂಬುದು ಸಾಮಾನ್ಯ ವಿಷಯವಾಗಿಬಿಟ್ಟಿದೆ.! ಆದರೆ, ಇಂತಹ ಒಂದು ಪ್ರಕರಣದಲ್ಲಿ ಎರಡು ವಿಮಾ ಕಂಪೆಗಳಿಗೆ ಕೋರ್ಟ್ ಶಾಕ್ ನೀಡಿದೆ.!!
ಹೌದು, ಇಲ್ಲಸಲ್ಲದ ಕಾರಣಗಳನ್ನು ನೀಡಿ ಮೊಬೈಲ್ ಇನ್ಸುರೆನ್ಸ್ ಮಾಡಿಸಿದ್ದರೂ ಅದರ ಪರಿಹಾರ ಕೊಡದೇ ಸತಾಯಿಸುವ ವಿಮಾ ಕಂಪೆನಿಗಳು ಹಲವಷ್ಟಿವೆ.! ಅಂತಹ ಕಂಪೆನಿಗಳಿಗೆ ಕೋರ್ಟ್ ಚಾಟಿ ಬೀಸಿದ್ದು, ಮೊಬೈಲ್ ಇನ್ಸುರೆನ್ಸ್ ಮಾಡಿಸಿ, ಮೊಬೈಲ್ ಕಳೆದುಕೊಂಡಿದ್ದ ಗ್ರಾಹಕರೋರ್ವರಿಗೆ 37,499 ರೂ ಪರಿಹಾರದ ಹಣ ಪಾವತಿಸುವಂತೆ ಕೋರ್ಟ್ ಆದೇಶಿಸಿದೆ.!!ಹಾಗಾದರೆ ಏನಿದು ಪ್ರಕರಣ? ಮೊಬೈಲ್ ಇನ್ಸುರೆನ್ಸ್ ಕಂಪೆಗಳು ಹೇಗೆ ಆಟವಾಡಿಸುತ್ತವೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.!!

ಏನಿದು ಮೊಬೈಲ್ ಪ್ರಕರಣ?
2014 ರಲ್ಲಿ ರಮೇಶ್ ಎಂಬುವವರು 32,499 ರೂ ಹಣ ಪಾವತಿಸಿ ಸೋನಿ ಎಕ್ಸ್‌ಪೀರಿಯಾ ಝಡ್1 ಮೊಬೈಲ್ ಖರೀದಿಸಿದ್ದು, ಮಾರಾಟಗಾರರ ಸಲಹೆಯಂತೆ ಹೆಚ್ಚುವರಿ ಹಣ ನೀಡಿ ಇನ್ಶೂರೆನ್ಸ್ ಮಾಡಿಸಿದ್ದಾರೆ. ನಂತರ ಕೆಲವೇ ದಿವಸಗಳಲ್ಲಿ ರಮೇಶ್‌ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಮೊಬೈಲ್ ಕಳೆದುಕೊಂಡಿದ್ದಾರೆ.!!

ಇನ್ಶೂರೆನ್ಸ್ ಕ್ಲೈಮ್‌ಗೆ ಅರ್ಜಿ!!
ಮೊಬೈಲ್ ಕಳೆದುಹೋದ ನಂತರ ರಮೇಶ್ ಅವರು ಇನ್ಶೂರೆನ್ಸ್ ಕ್ಲೇಮ್ ಮಾಡುವುದಕ್ಕಾಗಿ 2014ರ ಡಿಸೆಂಬರ್ 29ರಂದು ಎಫ್‌ಐಆರ್ ಪ್ರತಿಯ ಸಹಿತ ಎಲ್ಲ ದಾಖಲೆಗಳನ್ನು ಇನ್ಶೂರೆನ್ಸ್ ಕಂಪೆನಿಗೆ ನಿಡಿದ್ದಾರೆ. 15ದಿನಗಳೊಳಗೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದು ವಿಮಾ ಕಂಪನಿಯವರು ಹೇಳಿದ್ದಾರೆ.!!

ಇನ್ಶೂರೆನ್ಸ್ ಕ್ಲೈಮ್ ಮಾಡಿಲ್ಲ.!!
ನಿಮ್ಮ ಕ್ಲೇಮ್ ಅರ್ಜಿಯಲ್ಲಿ ಕಳವು ಬದಲು ನಷ್ಟ ಎಂದು ನಮೂದಿಸಿದ ಕಾರಣ ಇನ್ಶೂರೆನ್ಸ್ ಹಣವನ್ನು ಕ್ಲೇಮ್ ಮಾಡಲು ಸಾಧ್ಯವಿಲ್ಲ ಎಂಬ ಕ್ಷುಲ್ಲಕ ಕಾರಣವನ್ನು ಇನ್ಶೂರೆನ್ಸ್ ಕಂಪನಿ ಅಧಿಕಾರಿಗಳು ರಮೇಶ್ ಅವರಿಗೆ ಪತ್ರ ಬರೆದಿದ್ದಾರೆ.! ನಂತರ ಕಂಪನಿ ಪ್ರಕರಣವನ್ನು ಮುಚ್ಚಿಹಾಕಿದೆ.!!

29 ತಿಂಗಳ ಕಾಲ ವಾಜ್ಯ!!
ಇದರಿಂದ ಆಘಾತಗೊಂಡ ರಮೇಶ್ ಅವರು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದು, 29 ತಿಂಗಳ ಕಾಲ ನಡೆದ ವ್ಯಾಜ್ಯದಲ್ಲಿ ನ್ಯಾಯಾಲಯ ರಮೇಶ್ ಪರವಾಗಿ ತೀರ್ಪು ನೀಡಿದೆ.ವಿಮಾ ನೀತಿಯ ಪ್ರಕಾರ ಕಳವಾದ ಫೋನಿಗೆ ಪರಿಹಾರ ನೀಡಲು ತಕರಾರು ಮಾಡಿದ ಕಂಪನಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.!!

37,499 ರೂ ಪರಿಹಾರ!!
29 ತಿಂಗಳ ಕಾಲ ನಡೆದ ವ್ಯಾಜ್ಯದಲ್ಲಿ ನ್ಯಾಯಾಲಯ ರಮೇಶ್ ಪರವಾಗಿ ತೀರ್ಪು ನೀಡಿದ್ದು, ವಿಮಾ ಕಂಪನಿಗಳು 32,499 ರೂ.ಗಳ ಪರಿಹಾರವನ್ನು ಹಾಗೂ ವ್ಯಾಜ್ಯದ ವೆಚ್ಚವಾಗಿ 5,000 ರೂ.ಗಳ ಹೆಚ್ಚುವರಿ ಪರಿಹಾರ ನೀಡುವಂತೆ ಕೋರ್ಟ್ ಆದೇಶ ನೀಡಿದ್ದು, ಕ್ಷುಲ್ಲಕ ಕಾರಣಕ್ಕಾಗಿ ವಿಮೆ ಕ್ಲೇಮ್ ಮಾಡದ ಕಂಪೆನಿಗಳು ಈಗಲಾದರೂ ಪಾಠಕಲಿಯಬೇಕಿದೆ.!!


Click it and Unblock the Notifications








