ರೈಲ್ವೆ ಟಿಕೇಟ್ ಸಹ ಕ್ಯಾಷ್ ಆನ್ ಡೆಲಿವರಿಯಲ್ಲಿ ಲಭ್ಯ: ಮನೆ ಬಾಗಿಲಿಗೆ ಬರಲಿದೆ ರೈಲ್ವೆ ಟಿಕೇಟ್
IRCTC ಆಪ್ ಬಿಡುಗಡೆಯಾಗಿದ್ದು, ಸಾಕಷ್ಟು ಆಪ್‌ಡೇಟ್ ಆಗಿ ಹೊಸ ರೂಪದಲ್ಲಿ ಕಾಣಿಸಿಕೊಂಡಿದೆ.
ದೇಶದ ನರನಾಡಿಯಂತಿರುವ ರೈಲು ಸಾರಿಗೆಯೂ ದೇಶದ ಆರ್ಥಿಕತೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೊಡುಗೆಯನ್ನು ನೀಡುತ್ತಲೇ ಬಂದಿದೆ. ಈ ಹಿನ್ನಲೆಯಲ್ಲಿ ರೈಲ್ವೆ ಇಲಾಖೆಯೂ ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕ ಸ್ನೇಹಿಯಾಗುತ್ತಿದ್ದು, ಆಧುನಿಕತೆಯ ಕಡೆಗೆ ಹೆಜ್ಜೆ ಹಾಕುತ್ತಿದ್ದು, ತಂತ್ರಜ್ಞಾನವನ್ನು ತನ್ನದಾಗಿಸಿಕೊಂಡು, ಪ್ರಯಾಣಿಕರಿಗೆ ರೈಲು ಪ್ರಯಾಣವನ್ನು ಸುಖಕರಗೊಳಿಸುತ್ತಿದೆ.

ಇದೇ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನವೇ ಆನ್‌ಲೈನ್ ಟಿಕೇಟ್ ಬುಕಿಂಗ್ ವ್ಯವಸ್ಥೆಯನ್ನು ಸರಳಿಕೃತಗೊಳಿಸುವುದು. ಇದಕ್ಕಾಗಿಯೇ ಇರುವ IRCTC ತಾಣವನ್ನು ಸರಳಗೊಳಿಸುವುದರೊಂದಿಗೆ ಆಪ್ ಮೂಲಕವೂ ಪ್ರಯಾಣಿಕರನ್ನು ತಲುಪುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಇದರ ಮತ್ತೊಂದು ಅಂಶವೇ ಕ್ಯಾಷ್ ಆನ್ ಡೆಲಿವರಿ ರೈಲ್ವೆ ಟಿಕೇಟ್.

ಕ್ಯಾಷ್ ಆನ್ ಡಿಲಿವರಿ:
IRCTC ಇನ್ನು ಮುಂದೆ ಟಿಕೇಟ್ ಬುಕ್ ಮಾಡುವವರಿಗೆ ಹಣ ಪಾವತಿ ಮಾಡುವ ಸಂದರ್ಭದಲ್ಲಿ ಪ್ರಯಾಣಿಕರಿಗೆ ಆಯ್ಕೆಯನ್ನು ನೀಡಿದ್ದು, ಪೇಮೆಂಟ್ ಮೋಡ್ ಅನ್ನು ತಮಗೆ ಸೂಕ್ತವಾದದ್ದನ್ನು ಆರಿಸಿಕೊಳ್ಳಬಹುದಾಗಿದೆ. ಇದರಲ್ಲಿ ಕ್ಯಾಷ್ ಆನ್ ಡಿಲಿವರಿ ಸಹ ಒಂದಾಗಿದೆ.

ಆಪ್ ನಲ್ಲಿ ಕ್ಯಾಷ್ ಆನ್ ಡಿಲಿವರಿ:
IRCTC ಆಪ್ ಬಿಡುಗಡೆಯಾಗಿದ್ದು, ಸಾಕಷ್ಟು ಆಪ್‌ಡೇಟ್ ಆಗಿ ಹೊಸ ರೂಪದಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಸರಳಿಕೃತ ಸಹ ಆಗಿದೆ. ಇದೇ ಮೊದಲ ಬಾರಿಗೆ ವೆಬ್ ಮತ್ತು ಆಪ್ ಎರಡರಲ್ಲೂ ಪೇ ಆನ್ ಡೆಲಿವರಿ ಆಯ್ಕೆಯನ್ನು ನೀಡಿಲಾಗಿದೆ.

ಮನೆಬಾಗಿಲಿಗೆ ಬರಲಿದೆ ಟಿಕೇಟ್:
ಟಿಕೇಟ್ ಬುಕ್ ಮಾಡಿದ ಸಂದರ್ಭದಲ್ಲಿ ಪೇಮೆಂಟ್ ಮಾಡದೆ ಕ್ಯಾಷ್ ಆನ್ ಡೆಲಿವರಿ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡ ಸಂದರ್ಭದಲ್ಲಿ ಮನೆ ಬಾಗಿಲಿಗೆ ರೈಲ್ವೆ ಟಿಕೇಟ್ ಬರಲಿದ್ದು, ಟಿಕೇಟ್ ಪಡೆದು ಹಣವನ್ನು ಪಾವತಿ ಮಾಡಬಹುದಾಗಿದೆ.

ಕಡಿಮೆ ವೆಚ್ಚದಾಯಕ:
ಪೇ ಆನ್ ಡೆಲಿವರಿ ಆಯ್ಕೆಯನ್ನು ಪಡೆದುಕೊಳ್ಳುವ ಗ್ರಾಹಕರಿಗೆ ರೂ.5000ಗಳಿಗಿಂತ ಕಡಿಮೆ ಮೊತ್ತಕ್ಕೆ ರೂ. 90 ದರ ವಿಧಿಸಲಿದ್ದು, ರೂ.5000ಗಳಿಗಿಂತ ಹೆಚ್ಚಿನ ಮೊತ್ತಕ್ಕೆ ರೂ.120 ವಿಧಿಸಲಿದೆ.


Click it and Unblock the Notifications








