2G, 3G ಗ್ರಾಹಕರಿಗೂ ಜಿಯೋ ಸೇವೆ: ಅಂಬಾನಿ ಕೊಟ್ಟ ಹೊಸ ಆಫರ್ ಇದು..!!
ಜಿಯೋ ತನ್ನ 4G ಸೇವೆಯನ್ನು ಈಗಾಗಲೇ ಜನರ ಮನಸದಲ್ಲಿ ಉಳಿಸಿದೆ.

ರಿಲಯನ್ಸ್ ಮಾಲೀಕತ್ವದ ಜಿಯೋ ದೇಶದಲ್ಲಿ ಸೇವೆಯನ್ನು ಆರಂಭಿಸಿದ ಸಂದರ್ಭದಲ್ಲಿ ಉಚಿತ ಸೇವೆಯನ್ನು ಗುಣಮಟ್ಟದಲ್ಲಿ ನೀಡಲು ಮುಂದಾಗಿತು. ಆದಾದ ನಂತರದಲ್ಲಿ ಸಣ್ಣ ಪ್ರಮಾಣದ ದರವನ್ನು ವಿಧಿಸಲು ಮುಂದಾಯಿತು. ಜಿಯೋ ತನ್ನ 4G ಸೇವೆಯನ್ನು ಈಗಾಗಲೇ ಜನರ ಮನಸದಲ್ಲಿ ಉಳಿಸಿದೆ. ಈಗ ಇದೇ ಮಾದರಿಯಲ್ಲಿ ತನ್ನ ಜಿಯೋ ವೈ-ಫೈ ಡಿವೈಸ್ ಅನ್ನು ಹಿಟ್ ಮಾಡಲು ಮುಂದಾಗಿದೆ.

ಇದಕ್ಕಾಗಿಯೇ ಜಿಯೋ ಫೈ ರೌಟರ್ ಅನ್ನು 100% ಕ್ಯಾಷ್ ಬ್ಯಾಕ್ ಘೋಷಣೆಯನ್ನು ಮಾಡಿದೆ. ಈ ಹಿನ್ನಲೆಯಲ್ಲಿ ಜಿಯೋ ಸೇವೆಗಳನ್ನ ಮತ್ತೇ ಉಚಿತವಾಗಿ ಪಡೆಯುವ ಅವಕಾಶವನ್ನು ಮಾಡಿಕೊಡುತ್ತಿದೆ. ಈ ಹಿನ್ನಲೆಯಲ್ಲಿ ಕ್ಯಾಷ್ ಬ್ಯಾಕ್ ಪಡೆಯುವುದು ಹೇಗೆ ಎಂಬುದನ್ನು ತಿಳಿಯುವ.

ನಿಮ್ಮ ಹಳೇಯ ಡಾಂಗಲ್ ವಾಪಸ್ ಮಾಡಿ:
ನಿಮ್ಮ ಬಳಿ ಇರುವಂತಹ ಹಳೇಯ ರೌಟರ್ ಅನ್ನು ಜಿಯೋ ಸ್ಟೋರಿನಲ್ಲಿ ಹೋಗಿ ನೀಡಿದರೆ ನಿಮಗೆ ಹೊಸ ಜಿಯೋ ರೌಟರ್ ದೊರೆಯಲಿದೆ, ಅದುವೇ ರೂ.1005ಗಳಿಗೆ ಮಾತ್ರ. ಯಾವುದೇ ಡಾಂಗಲ್ ನೀಡಿದರು ಸಹ ನಿಮಗೆ ಹೊಸ 4G ಡಾಂಗಲ್ ದೊರೆಯಲಿದೆ.

ಇಲ್ಲೂ ಲಭ್ಯ ಧನ್ ಧನಾ ಧನ್ ಆಫರ್:
ಜಿಯೋ ಫೈ ಪಡೆದ ಗ್ರಾಹಕರಿಗೆ ಈಗಲೂ ಧನ್ ಧನಾ ಧನ್ ಆಫರ್ ನೀಡುತ್ತಿದೆ. ಅದರಲ್ಲಿ ಮೊದಲ 84 ದಿನಗಳ ಕಾಲ ಉಚಿತ ಸೇವೆಯೂ ದೊರೆಯಲಿದ್ದು, ಎರಡು ಆಫರ್‌ಗಳು ಇಲ್ಲಿಯೂ ಗ್ರಾಹಕರಿಗೆ ದೊರೆಯಲಿದೆ.

ಇನ್ನೂ ಅನೇಕ ಆಫರ್‌ಗಳಿದೆ:
ಕೇವಲ ಧನ್ ಧನಾ ಧನ್ ಆಫರ್ ಮಾತ್ರವಲ್ಲದೇ ಇನ್ನು ಅನೇಕ ಆಫರ್‌ಗಳು ಇಲ್ಲಿ ಲಭ್ಯವಿದ್ದು, ನಿಮಗೆ ಹೆಚ್ಚು ಡೇಟಾವನ್ನು ಬಯಸಿದರೆ ಅದಕ್ಕಾಗಿಯೇ ಆಫರ್‌ಗಳನ್ನು ಜಿಯೋ ನೀಡಲು ಮುಂದಾಗಿದೆ.

2G-3G ಗ್ರಾಹಕರು ಜಿಯೋ ಸೇವೆ ಪಡೆಯಬಹುದು:
ಜಿಯೋ ಫೈ ರೌಟರ್ ಪಡೆಯುವ ಮೂಲಕ 2G-3G ಗ್ರಾಹಕರು ಜಿಯೋ ಸೇವೆಯನ್ನು ಅನುಭವಿಸಬಹುದಾಗಿದೆ. ಎಲ್ಲಿ ಬೇಕಾದರು ಹೇಗೆ ಬೇಕಾದರು. ಇದಕ್ಕಾಗಿ 4G ಫೋನ್ ಬೇಕು ಎನ್ನುವ ಅವಶ್ಯಕತೆಯೇ ಇಲ್ಲ.


Click it and Unblock the Notifications








