ಲಿಕೋ ದಿಂದ ಅತೀ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿ ಲಾಂಚ್...!

Posted By: Lekhaka

ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡಿದ ಲಿಕೋ ಕಂಪನಿಯೂ ಸ್ಮಾರ್ಟ್ ಟಿವಿಯನ್ನು ಲಾಂಚ್ ಮಾಡಿದೆ. ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಮುಂದಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಬೇಡಿಕೆಯನ್ನು ಇಲ್ಲಿ ಬಳಕೆ ಮಾಡಿಕೊಳ್ಳಲು ಮುಂದಾಗಿದೆ ಎನ್ನಲಾಗಿದೆ.

ಲಿಕೋ ದಿಂದ ಅತೀ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿ ಲಾಂಚ್...!

ಈ ಹಿಂದೆಯೇ ಹೊಸ ಸ್ಮಾರ್ಟ್ ಫೋನ್ ಬಿಡುಗಡೆಯ ಸುದ್ಧಿ ಲೀಕ್ ಆಗಿತ್ತು, ಆದರೆ ಫೋನ್ ಇನ್ನು ಲಾಂಚ್ ಆಗಿಲ್ಲ. ಆದರೆ ಒಟ್ಟು ಲಿಕೋ 10 ಉತ್ಪನ್ನಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಿದ್ದು, ಸ್ಮಾರ್ಟ್ ಡಿಜಿಟಲ್ ಟಿವಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹೊಸ ಸ್ಮಾರ್ಟ್ ಫೋನ್ ಗಾಗಿ ಕಾಯುತ್ತಿದ್ದವರು ಹೊಸ ಟಿವಿ ಬಿಡುಗಡೆಗೆ ಸಾಕ್ಷಿಯಾಗಿದ್ದಾರೆ. ಈ ಸ್ಮಾರ್ಟ್ ಟಿವಿಗಳು ಸಹ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಎನ್ನಲಾಗಿದೆ.

ಲಿಕೋ ದಿಂದ ಅತೀ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿ ಲಾಂಚ್...!

40 ಇಂಚಿನಿಂದ ಹಿಡಿದು 65 ಇಂಚಿನ ಟಿವಿಗಳನ್ನು ಲಾಂಚ್ ಮಾಡಿದ್ದು, ಇದರಲ್ಲಿ ಒಪನ್ ಸೋರ್ಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಬಳಕೆ ಮಾಡಿಕೊಂಡು ತನ್ನ ಅಭಿಮಾನಿಗಳಿಗೆಂದೆ ವಿಶೇಷವಾಗಿ ವಿನ್ಯಾಸವನ್ನು ಮಾಡಿದೆ. ಟಿವಿಗಳಲ್ಲಿ ಎರಡು ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, L ಮತ್ತು N ಸರಣಿಯ ಸ್ಮಾರ್ಟ್ ಟಿವಿಗಳು ಕಾಣಿಸಿಕೊಂಡಿದೆ.

L ಸರಣಿಯಲ್ಲಿ X40L / X43L / X50L / X55L / X65L ಮಾಡಲ್ ಗಳನ್ನು ಕಾಣಬಹುದಾಗಿದೆ. ಇದೇ ಮಾದರಿಯಲ್ಲಿ N ಸರಣಿಯಲ್ಲಿ 40N / X43N / X50N / X55N / X65N ಮಾಡಲ್ ಟಿವಿಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಲಾಗಿದೆ. ಇವುಗಳ ಬೆಲೆಯೂ ರೂ. 18,5870 ರಿಂದ ಆರಂಭವಾಗಲಿದ್ದು, ರೂ. 56,708 ವರೆಗೂ ಲಭ್ಯವಿರಲಿದೆ ಎನ್ನಲಾಗಿದೆ.

ಮತ್ತೊಂದು ಹೊಸ ಅವತಾರದಲ್ಲಿ ನೋಕಿಯಾ ಸ್ಮಾರ್ಟ್‌ಫೋನ್..!

'ಈ ಸ್ಮಾರ್ಟ್ ಟಿವಿಗಳಲ್ಲಿ HDR ಟೆಕ್ನಾಲಜಿಯನ್ನು ಅಳವಡಿಸಲಾಗಿದ್ದು, ಕ್ವಾಡ್ ಕೋರ್ ಮೋಟರ್ ಪ್ರೋಸೆಸರ್ ಅನ್ನು ನೀಡಲಾಗಿದೆ. 16GB ಇಂಟರ್ನಲ್ ಮೆಮೊರಿಯ ಜೊತೆಯಲ್ಲಿ ಲಿಕೋ ಅಭಿವೃದ್ಧಿ ಪಡಿಸಿರುವ EUI 6.5 ಅನ್ನು ಕಾಣಬಹುದಾಗಿದೆ. ಶೀಘ್ರವೇ ಈ ಟಿವಿಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ.

Source

Read more about:
English summary
LeEco has announced TV's ranging from 40 - 65 inches and the company claims that the new range has been designed for family use.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot