Home
ಫೀಚರ್ ಸ್ಟೋರೀಸ್

ಮಂಗಳನಲ್ಲಿ ಮಾನವನ ವಾಸ- ಸಾಧ್ಯತೆಗಳು ಅಸಾಧ್ಯತೆಗಳು

By Shwetha

2030 ರಲ್ಲಿ ಮಾನವನ ವಾಸವನ್ನು ಮಂಗಳನಲ್ಲಿ ಸ್ಥಾಪಿಸಬೇಕು ಎಂಬುದು ನಾಸಾದ ಅತಿದೊಡ್ಡ ಗುರಿಯಾಗಿದೆ. ಹೆಚ್ಚಿನ ಸಂಶೋಧನೆ, ಪರಿಶೀಲನೆ ತಂತ್ರಜ್ಞಾನಗಳು ಮತ್ತು ಸುಧಾರಿತ ಮಾನವ ಆರೋಗ್ಯವನ್ನು ಇಲ್ಲಿನ ಹವಾಮಾನಕ್ಕೆ ಹೊಂದಿಸುವುದು ಮುಂದಿರುವ ಯೋಜನೆಯಾಗಿದೆ.

ಮಂಗಳ ಗ್ರಹವನ್ನು ತಲುಪುವ ತನ್ನ ಯೋಜನೆಗಳನ್ನು ಬಾಹ್ಯಾಕಾಶ ಸಂಸ್ಥೆ ಹೊರಹಾಕಿದ್ದು ಇದಕ್ಕೆ ಮಂಗಳನಲ್ಲಿ ನಾಸಾದ ಪ್ರಯಾಣ ಎಂಬ ತಲೆಬರಹವನ್ನು ನೀಡಲಾಗಿದೆ. ಹಾಗಿದ್ದರೆ ಸಾಮಾನ್ಯ ಮಾನವ ಮಂಗಳ ಯಾನಕ್ಕೆ ಪ್ರವಾಣವನ್ನು ಬೆಳೆಸಬೇಕು ಭೂಮಿಯಂತಹ ವಾತಾವರಣವನ್ನು ವಿಜ್ಞಾನಿಗಳು ಅಲ್ಲಿ ಪಡೆದುಕೊಳ್ಳಬೇಕೆಂಬ ಶತತ ಪ್ರಯತ್ನ ಏಕೆ ನಡೆಯುತ್ತಿದೆ ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ.

#1

#1

ಮಂಗಳನ ಯಾನ ಮಾನವರಿಗೆ ಹೊಸ ಹಾದಿಯ ಪ್ರಯಾಣವನ್ನು ತೋರಿಸುತ್ತದೆ. ಅಂದರೆ 60 ಮತ್ತು 70 ರ ದಶಕದಲ್ಲಿ ಅಪೋಲೋ ಬಾಹ್ಯಾಕಾಶಯಾನಿಗಳು ಮಾಡಿದ ಅದೇ ಹೆಜ್ಜೆ.

#2

#2

ಮಂಗಳನಲ್ಲಿ ಮಾನವತ್ವದ ಬ್ಯಾಕಪ್ ಅನ್ನು ನಾವು ಅಲ್ಲಿ ರಚಿಸುತ್ತಿದ್ದೇವೆ ಎಂದಾದಲ್ಲಿ ನಮ್ಮ ಪ್ರಯಾಣ ಮಂಗಳನಲ್ಲಿಗೆ ಅತ್ಯಗತ್ಯವಾಗಿದೆ.

#3

#3

ನೀರು, ಅತ್ಯಮೂಲ್ಯ ಲೋಹಗಳ ಅನ್ವೇಷಣೆ, ನಮ್ಮ ಮುಂದಿನ ಬದುಕಿಗೆ ಆಸರೆಯಾಗಿರಬಹುದಾದ ಕೆಲವೊಂದು ಅಂಶಗಳು ಕೆಂಪು ಗ್ರಹದಲ್ಲಿರಬಹುದು.

#4

#4

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಮಾರ್ಸ್ ಮುಂದಿನ ಗಮ್ಯಸ್ಥಾನ ಎಂದೆನಿಸಿದೆ. ಇನ್ನು ಮಾನವ ಸಂಕುಲವನ್ನು ರೇಡಿಯೇಶನ್‌ನಿಂದ ಕಾಪಾಡುವ ನೆಲದೊಳಗಿನ ನಿವಾಸವನ್ನಾಗಿ ಮಾರ್ಪಡಿಸಬಹುದಾದ ಗುಹೆ ವ್ಯವಸ್ಥೆಯ ಆಧಾರ ಮಂಗಳನ ನೆಲದಲ್ಲಿದೆ

#5

#5

ಮಾನವನನ್ನು ತಲುಪಿಸುವ ಮಂಗಳನಲ್ಲಿಗೆ ಮಾನವನನ್ನು ತಲುಪಿಸುವ ಸ್ಪೇಸ್ ಎಕ್ಸ್ ನಿರ್ಮಾಣ, ರಾಕೆಟ್‌ಗಳ ಕಟ್ಟುವಿಕೆ ಮತ್ತು ಇದಕ್ಕೆ ಬೆಂಬಲವನ್ನು ಒದಗಿಸುವ ಹಲವಾರು ಸಲಕರಣೆಗಳನ್ನು ವಿಜ್ಞಾನಿಗಳು ತಯಾರಿಸುತ್ತಿದ್ದಾರೆ.

#6

#6

ಮಂಗಳನ ಅಂಗಳ ಅತ್ಯಂತ ಸುಂದರ ಪ್ರದೇಶವಾಗಿದೆ. ಕಡಿಮೆ ಅಂದರೆ 80,000 ಜನರ ವಾಸ್ತವ್ಯವನ್ನು ಇಲ್ಲಿ ಹೂಡಬೇಕೆಂಬುದು ಸಂಶೋಧಕರ ಅಭಿಮತವಾಗಿದೆ. ನಮ್ಮ ಸೌರ ವ್ಯವಸ್ಥೆಯಲ್ಲೇ ವಾಸಯೋಗ್ಯ ನೆಲವಾಗಿದೆ.

#7

#7

ಇಷ್ಟೆಲ್ಲಾ ಸವಲತ್ತುಗಳನ್ನು ಮಂಗಳ ಹೊಂದಿದ್ದರೂ ಇಲ್ಲಿ ಬದುಕು ನಡೆಸುವುದು ಕಷ್ಟಾಸಾಧ್ಯವಾಗಿದೆ. ಮಾನವನ ಆವಾಸ ಸ್ಥಾನವನ್ನಾಗಿ ಮಂಗಳನನ್ನು ಬದಲಾಯಿಸಬೇಕೆಂಬ ನಿರ್ಧಾರವಾದಲ್ಲಿ ನಮ್ಮ ಭೂಮಿಯ ವ್ಯವಸ್ಥಕ್ಕೆ ತಕ್ಕಂತೆ ಅದನ್ನು ಬದಲಾಯಿಸಬೇಕು.

#8

#8

ಭೂಮಿಯಿಂದಲೇ ಮಂಗಳನ ಅಂಗಳಕ್ಕೆ ನಾವು ಪ್ರತಿಯೊಂದು ಪದಾರ್ಥವನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ದುಬಾರಿ ವ್ಯವಸ್ಥೆ ಎಂದೇ ಪರಿಗಣಿಸಲಾಗಿದೆ.

#9

#9

ಮಂಗಳನಲ್ಲಿಗೆ ಆಹಾರವನ್ನು ಆಮದು ಮಾಡಿಕೊಳ್ಳುವ ಬದಲಿಗೆ ಅಲ್ಲಿಯೇ ಆಹಾರವನ್ನು ನಾವು ಸಿದ್ಧಪಡಿಸಿಕೊಳ್ಳುತ್ತೇವೆ ಎಂದು ಹೊರಟಲ್ಲಿ ಇದು ಇನ್ನಷ್ಟು ತಲೆನೋವನ್ನುಂಟು ಮಾಡಬಹುದು.

#10

#10

ಬೆಳೆಗಳ ಬೆಳೆಸುವಿಕೆಗೆ ಮಂಗಳನ ಮಣ್ಣು ಯೋಗ್ಯವಿಲ್ಲ ಎಂದಾದಲ್ಲಿ ಅದರಲ್ಲಿರುವ ಪ್ರಬಲ ರಾಸಾಯನಿಕಗಳನ್ನು ತೆಗೆದುಹಾಕಬೇಕಾಗುತ್ತದೆ.

Best Mobiles in India

English summary
The fourth rock from the sun will pose extreme challenges to future explorers. Here's what they can expect, and what NASA's doing to prepare them for the ultimate off-Earth adventure.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+