ತಲೆ ಕತ್ತರಿಸಿದರೂ 2 ವರ್ಷ ಬದುಕಿದ ಹುಂಜ 'ದಿ ಮೈಕ್'
ವಿಜ್ಞಾನ ವಿಸ್ಮಯಗಳು ನಮ್ಮ ಸುತ್ತಮುತ್ತಲೇ ಆಗುತ್ತಿರುತ್ತವೆ. ಆದರೆ ಅದನ್ನ ಸೂಕ್ಷ್ಮವಾಗಿ ಗುರುತಿಸಬೇಕಷ್ಟೆ.
ಕೇವಲ ಕಪಾಳಕ್ಕೆ ಜೋರಾಗಿ ಹೊಡೆದ್ರೆ ಮನುಷ್ಯ ಬದುಕೋದಿಲ್ಲ. ಆದ್ರೆ ಹುಂಜವೊಂದು ಅದರ ಕತ್ತನ್ನು ಕತ್ತರಿಸಿದರು ಸಹ 2 ವರ್ಷಗಳ ಕಾಲ ಬದುಕಿತ್ತು. ಅಂದಹಾಗೆ ಈಗ ಸಾಮಾಜಿಕ ತಾಣಗಳಲ್ಲಿ ಅದೇ ಸುದ್ದಿ ಹೆಚ್ಚು ಓಡಾಡುತ್ತಿದೆ. ಅದರ ಹೆಸರು "ಮೈಕ್ ದಿ ಹೆಡ್‌ಲೆಸ್ ಚಿಕನ್ (Mike the Headless Chicken)" ಎಂದೇ ಪ್ರಖ್ಯಾತಿ.
ವಿಸ್ಮಯಗಳು ಅಂದ್ರೆ ಯಾರಿಗೆ ತಾನೆ ಇಷ್ವವಾಗಲ್ಲ. ಅಟ್ ಲೀಸ್ಟ್ ಭೂಮಿ ಮೇಲೆ ಇಂತ ವಿಸ್ಮಯ ನಡೆದಿರುವುದನ್ನಾದರೂ ತಿಳಿಯೋಣ ಎಂಬ ಕುತೂಹಲ ಇರುತ್ತೆ. ಈ ಲೇಖನದಲ್ಲಿ ವೈರಲ್ ಆಗಿರುವ ಕತ್ತು ಕತ್ತರಿಸಿದರು 2 ವರ್ಷಗಳ ಕಾಲ ಬದುಕಿದ್ದ ಹುಂಜದ ಬಗ್ಗೆ ಮಾಹಿತಿಯ ಜೊತೆಗೆ ವೀಡಿಯೊವನ್ನು ತೋರಿಸುತ್ತೇವೆ. ಮುಂದೆ ಓದಿ..
ವಿಶ್ವವನ್ನೇ ನಿಬ್ಬೆರಗುಗೊಳಿಸಿದ 11 ರ ಹರೆಯದ ಭಾರತೀಯ ಬಾಲಕಿ

1
ಅಮೆರಿಕದ ಕೊಲೊರಾಡೊದಲ್ಲಿ ರೈತ 'ಲಾಯ್ಡ್ ಓಲ್ಸೆನ್' ಎಂಬುವವರು ತನ್ನ ಅತ್ತೆಗೆ ಕೋಲಿ ಸಾರು ಮಾಡಲೆಂದು ಕಾಕ್‌ಕೆರಲ್ ಹೆಸರಿನ ಮೈಕ್ ಕೋಳಿಯನ್ನು ಹಿಡಿದು ಅದರ ತಲೆ ಕತ್ತರಿಸಿದರು. ಆದರೆ ಕೋಳಿ ತಲೆ ಕತ್ತರಿಸಿದಾಗ ಮೆದುಳಿಗೆ ಸಂಪರ್ಕಿಸುವ 'ಜುಗುಲಾರ್ ನರ (jugular vein)' ತಪ್ಪಿಸಿಕೊಂಡಿತ್ತು.

2
ಜುಗುಲಾರ್ ನರ ಕಟ್ ಆಗದೆ ತಪ್ಪಸಿಕೊಂಡ ಕಾರಣದಿಂದ ಬದುಕುಳಿದ 'ಮೈಕ್' ಹುಂಜವು 18 ತಿಂಗಳು ಕಾಲ ಬದುಕಿತ್ತು.

3
ಕತ್ತು ಕತ್ತರಿಸಿದರು ಬದುಕಿದ್ದನ್ನು ನೋಡಿದ ರೈತ 'ಲಾಯ್ಡ್ ಓಲ್ಸೆನ್' ಹುಂಜವನ್ನು ಬದುಕುಳಿಯಲು ಬಿಟ್ಟ. ಅಂದಹಾಗೆ ನಂತರ ಅದಕ್ಕೆ 'ಮೈಕ್' ಎಂದು ನಂತರ ಹೆಸರು ಇಟ್ಟ. ಅಂದಿನಿಂದ ತಲೆ ಇಲ್ಲದ 'ಮೈಕ್' ವಿದೇಶ ಪ್ರಯಾಣ ಮಾಡಲು ಪ್ರಾರಂಭಿಸಿತು.

4
ಮೈಕ್ ಹೆಚ್ಚು ಪ್ರಚಾರ ಪಡೆದು ಪ್ರಖ್ಯಾತ ಟೈಮ್ ಮತ್ತು ಲೈಫ್ ನಿಯತಕಾಲಿಕೆಗಳನ್ನು ಮಿಂಚಿತು.

5
ಮೈಕ್ ಪ್ರಖ್ಯಾತತೆ ಹೆಚ್ಚಾಗಿದ್ದನ್ನು ಬಳಸಿಕೊಂಡ ರೈತ 'ಲಾಯ್ಡ್ ಓಲ್ಸೆನ್' ಅದರ ಪ್ರದರ್ಶನಕ್ಕೆ ಶುಲ್ಕ ನಿಗದಿಸಿ ತಿಂಗಳಿಗೆ ಸುಮಾರು 17 ಲಕ್ಷ ( $25 ಸಾವಿರ ಡಾಲರ್ ) ಸಂಪಾದನೆ ಮಾಡುತ್ತಿದ್ದನು.

6
'ಅತಿ ಆಸೆ ಗತಿ ಗೇಡು' ಎಂದ ಹಾಗೆ 'ಮೈಕ್' ಹುಂಜ ಕತ್ತಿಲ್ಲದಿದ್ದರೂ ಬದುಕಿದ್ದನ್ನೂ ನೋಡಿದ ಇತರರು ತಾವು ಸಾಕಿದ ಕೋಳಿಗಳ ತಲೆ ಕತ್ತರಿಸಲು ಪ್ರಾರಂಭಿಸಿದ್ದರು. ಆದರೆ ಮೈಕ್ ಏಪ್ರಿಲ್ 1945 ರಲ್ಲಿ ಜನಿಸಿ ಮಾರ್ಚ್ 1947 ರಲ್ಲಿ ಮರಣ ಹೊಂದಿತು. ಮುಂದೆ ಓದಿ.

7
ಮೈಕ್‌ಗೆ 'ಐಡ್ರಾಪರ್ ಬಳಸಿ ನೀರು ಮತ್ತು ಆಹಾರ ನೀಡಲಾಗುತ್ತಿತಂತೆ. ಲಾಯ್ಡ್ ಓಲ್ಸೆನ್ ಕ್ಯಾಲಿಫೋರ್ನಿಯಾ ಮತ್ತು ಅರಿಜೊನಾಗೆ ಪ್ರವಾಸ ಹೋಗಿದ್ದಾಗ ಅರಿಜೊನಾದಲ್ಲಿ 'ಮೈಕ್' ಆಹಾರ ಕೊಡುವುದನ್ನು ಮರೆತದ್ದರಿಂದ ಮೈಕ್ ಸಾವನ್ನಪ್ಪಿತು. ಮೈಕ್ ಬದುಕಿದ್ದು ಹೇಗೆ ತಿಳಿಯಲು ಮುಂದೆ ಓದಿ

8
'ಮೈಕ್' ತಲೆಯಿಲ್ಲದಿದ್ದರು ಬದುಕಿದ ಪ್ರಯುಕ್ತ ಪ್ರತಿ ವರ್ಷ 'ಮೇ' ತಿಂಗಳಲ್ಲಿ 'ಮೈಕ್ ದಿ ಹೆಡ್‌ಲೆಸ್ ಚಿಕನ್ ಡೇ' ಎಂದು ಆಚರಿಸಲಾಗುತ್ತದೆ. ಅಲ್ಲದೇ ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲೂ ಪಬ್ಲಿಕ್ ಫಿಗರ್ ಆದ 'ಮೈಕ್' ತನ್ನ ಅದಿಕೃತ ಪೇಜ್ ಹೊಂದಿದ್ದು 16,611 ಜನರು ಪೇಜ್ ಲೈಕ್ ಮಾಡಿದ್ದಾರೆ. ನೀವು ಆ ಪೇಜ್ ಲೈಕ್ ಮಾಡಲು ಕ್ಲಿಕ್ ಮಾಡಿ "Mike The Headless Chicken"
ಮುಂದಿನ ಸ್ಲೈಡರ್‌ನಲ್ಲಿ ವೀಡಿಯೊ ನೋಡಿ.
9
"ಹುಂಜನ ತಲೆ ಕತ್ತರಿಸಿದಾಗ ಮೊದಲೇ ಹೇಳಿದಂತೆ ಮೆದುಳಿಗೆ ಸಂಪರ್ಕಿಸುವ 'ತಲೆಯಿಂದ ರಕ್ತವನ್ನೊಯ್ಯುವ' ನರ ತಪ್ಪಿಸಿಕೊಂಡಿತ್ತು. ಮೆದುಳಿನಿಂದ ಇನ್‌ಪುಟ್ ಬರದಿದ್ದರು ಸಹ ನರತಂತುಗಳು ಸಕ್ರಿಯವಾಗಿ ಇರಬಲ್ಲವು, ಕಾಲುಗಳು ಚಲಿಸಬಲ್ಲವು" ಎಂದು ನ್ಯೂಕ್ಯಾಸಲ್ ವಿಶ್ವವಿದ್ಯಾಲಯದ 'ಡಾ . ಟಾಮ್ ಸ್ಮುಲ್ಡರ್ಸ್' ಹೇಳಿದ್ದರು. ವೀಡಿಯೊ ನೋಡಿ.
ವೀಡಿಯೊ ಕೃಪೆ: godofmars



Click it and Unblock the Notifications








