Home
ಫೀಚರ್ ಸ್ಟೋರೀಸ್

ಮಿನಿಮಮ್ ಬ್ಯಾಲೆನ್ಸ್ ಇಲ್ಲದ ಬ್ಯಾಂಕ್‌ಗಳು: ಇಲ್ಲಿ ದಂಡದ ಚಿಂತೆ ಇಲ್ಲ!

ಪ್ರತಿಯೋರ್ವರು ಬ್ಯಾಂಕ್ ಖಾತೆಯನ್ನು ತೆರೆಯುವಾಗ, "ಮಿನಿಮಮ್ ಬ್ಯಾಲೆನ್ಸ್" ಅಥವಾ ಕನಿಷ್ಠ ಮೊತ್ತದ ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ನಿಯಮಗಳು ನೀವು ನಿಮ್ಮ ಖಾತೆಯಲ್ಲಿ ಯಾವಾಗಲೂ ಎಷ್ಟು ಹಣವನ್ನು ಇರಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸುತ್ತವೆ. ಭಾರತದಲ್ಲಿನ ಪ್ರಮುಖ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು ಈ ಬಗ್ಗೆ ವಿಭಿನ್ನ ನಿಯಮಗಳನ್ನು ಹೊಂದಿವೆ. ಕೆಲವು ಬ್ಯಾಂಕ್‌ಗಳು ಶೂನ್ಯ (Zero) ಬ್ಯಾಲೆನ್ಸ್ ಖಾತೆಗಳನ್ನು ನೀಡಿದರೆ, ಇನ್ನು ಕೆಲವು ಬ್ಯಾಂಕ್‌ಗಳು ನಿರ್ದಿಷ್ಟ ಮೊತ್ತವನ್ನು ಖಾತೆಯಲ್ಲಿ ಕಡ್ಡಾಯವಾಗಿ ಇರಿಸುವಂತೆ ಹೇಳುತ್ತವೆ.

ಇತ್ತೀಚಿಗೆ, ಐಸಿಐಸಿಐ ಬ್ಯಾಂಕ್ ನಗರ ಪ್ರದೇಶಗಳಲ್ಲಿ ₹50,000 ಮಿನಿಮಮ್ ಬ್ಯಾಲೆನ್ಸ್ ಇರಿಸಿಕೊಳ್ಳಬೇಕು ಎಂಬ ಹೇಳಿದೆ. ಇಲ್ಲವಾದಲ್ಲಿ ದಂಡವನ್ನು ವಿಧಿಸುವುದಾಗಿ ತಿಳಿಸಿದೆ ಇದಕ್ಕೆ ಕೆಲವರು ಆಕ್ಷೇಪಣೆ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಇದು ಉನ್ನತ ಮಟ್ಟದ ಬ್ಯಾಂಕಿಂಗ್ ಸೇವೆ ಒದಗಿಸಲು ಸಹಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರ ಲಾಭ ನಷ್ಟಗಳನ್ನು ನಂತರ ಲೆಕ್ಕಚಾರ ಪಕ್ಕಕಿರಲಿ. ಇದಕ್ಕೂ ಮೊದಲು, ಭಾರತದ ಪ್ರಮುಖ ಬ್ಯಾಂಕ್‌ಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ನಿಯಮಗಳು ಹೇಗಿದೆ?, ಯಾವ ಬ್ಯಾಂಕ್‌ನಲ್ಲಿ ಎಷ್ಟು ಮಿನಿಮಮ್ ಬ್ಯಾಲೆನ್ಸ್ ಇರಬೇಕು ಎಂಬುದನ್ನು ನೋಡೋಣ ಬನ್ನಿ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (SBI)
ದೇಶದ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್ ಎಸ್‌ಬಿಐ ಖಾತೆದಾರರಿಗೆ ದೊಡ್ಡ ಅನುಕೂಲವಿದೆ. ಗ್ರಾಮೀಣ, ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿಯೂ ಉಳಿತಾಯ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ ಇರಿಸಿಕೊಳ್ಳಬಹುದಾಗಿದೆ. ಅಂದರೆ, ಖಾತೆಯಲ್ಲಿ ಹಣ ಇಲ್ಲದಿದ್ದರೂ ದಂಡ ವಿಧಿಸುವುದಿಲ್ಲ.

ಬ್ಯಾಂಕ್‌ ಆಫ್‌ ಇಂಡಿಯಾ
ಬ್ಯಾಂಕ್‌ ಆಫ್‌ ಇಂಡಿಯಾ ಗ್ರಾಹಕರಿಗೆ ಉತ್ತಮ ಸೌಲಭ್ಯ - ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳಲ್ಲಿ ಶೂನ್ಯ ಬ್ಯಾಲೆನ್ಸ್ ಖಾತೆ ಸಿಗುತ್ತದೆ.

ಎಚ್‌ಡಿಎಫ್‌ಸಿ ಬ್ಯಾಂಕ್
ಖಾಸಗಿ ಬ್ಯಾಂಕ್‌ಗಳಲ್ಲಿ ಜನಪ್ರಿಯ ಬ್ಯಾಂಕ್ ಎಚ್‌ಡಿಎಫ್‌ಸಿಯಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ₹2,500 ಮತ್ತು ನಗರಗಳಲ್ಲಿ ₹10,000 ಮಿನಿಮಮ್ ಬ್ಯಾಲೆನ್ಸ್ ಕಡ್ಡಾಯವಾಗಿದೆ.

ಮಿನಿಮಮ್ ಬ್ಯಾಲೆನ್ಸ್ ಇಲ್ಲದ ಬ್ಯಾಂಕ್‌ಗಳು: ಇಲ್ಲಿ ದಂಡದ ಚಿಂತೆ ಇಲ್ಲ!

ಐಸಿಐಸಿಐ ಬ್ಯಾಂಕ್
ಐಸಿಐಸಿಐ ಬ್ಯಾಂಕ್‌ನ ನಿಯಮಗಳು ಇದೀಗ ಇನ್ನಷ್ಟು ಕಠಿಣವಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ₹10,000 ಹಾಗೂ ನಗರ ಪ್ರದೇಶಗಳಲ್ಲಿ ₹50,000 ಮಿನಿಮಮ್ ಬ್ಯಾಲೆನ್ಸ್ ಇರಿಸಿಕೊಳ್ಳಬೇಕು.

ಎಕ್ಸಿಸ್‌ ಬ್ಯಾಂಕ್
ಎಕ್ಸಿಸ್ ಬ್ಯಾಂಕ್‌ನಲ್ಲಿ ಗ್ರಾಮೀಣ ಪ್ರದೇಶಗಳಿಗೆ ₹2,500 ಮತ್ತು ನಗರ ಪ್ರದೇಶಗಳಿಗೆ ₹12,000 ಕನಿಷ್ಠ ಬ್ಯಾಲೆನ್ಸ್ ಅಗತ್ಯ.

ಬ್ಯಾಂಕ್‌ ಆಫ್‌ ಬರೋಡಾ
ಬ್ಯಾಂಕ್‌ ಆಫ್‌ ಬರೋಡಾ ಸರ್ಕಾರಿ ಬ್ಯಾಂಕ್‌ ಆದರೂ ಗ್ರಾಮೀಣ ಪ್ರದೇಶಗಳಲ್ಲಿ ₹500 ಮತ್ತು ನಗರ ಪ್ರದೇಶಗಳಲ್ಲಿ ₹2,000 ಮಿನಿಮಮ್ ಬ್ಯಾಲೆನ್ಸ್ ಕಡ್ಡಾಯವಾಗಿದೆ.

ಕೆನರಾ ಬ್ಯಾಂಕ್
ಕೆನರಾ ಬ್ಯಾಂಕ್‌ನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ₹500 ಮತ್ತು ನಗರ ಪ್ರದೇಶಗಳಲ್ಲಿ ₹2,000 ಮಿನಿಮಮ್ ಬ್ಯಾಲೆನ್ಸ್‌ ಇರಿಸಿಕೊಳ್ಳಬೇಕು.

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ
ಈ ಬ್ಯಾಂಕ್‌ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಪ್ರಕಾರವು ಶಾಖೆಯ ಸ್ಥಳ ಮತ್ತು ಚೆಕ್‌ಬುಕ್‌ ಹೊಂದಿರುವುದರ ಮೇಲೆ ಅವಲಂಬಿತವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಚೆಕ್‌ಬುಕ್‌ ಇದ್ದರೆ ₹250 ಹಾಗೂ ನಗರ/ಪಟ್ಟಣಗಳಲ್ಲಿ ₹1,000 ಕನಿಷ್ಠ ಬ್ಯಾಲೆನ್ಸ್ ಅಗತ್ಯ. ಚೆಕ್‌ಬುಕ್‌ ಇಲ್ಲದಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ₹100 ಮತ್ತು ನಗರ ಪ್ರದೇಶಗಳಲ್ಲಿ ₹500 ಇರಿಸಿಕೊಳ್ಳಬೇಕು.

ಒಟ್ಟಾರೆಯಾಗಿ, ನಿಮ್ಮ ಬ್ಯಾಂಕ್ ಖಾತೆಗಾಗಿ ಆಯ್ಕೆ ಮಾಡುವಾಗ ನಿಮ್ಮ ಅಗತ್ಯತೆ ಮತ್ತು ಹಣಕಾಸಿನ ಸ್ಥಿತಿಯನ್ನು ಗಮನಿಸುವುದು ಉತ್ತಮ. ಕಡಿಮೆ ಅಥವಾ ಶೂನ್ಯ ಬ್ಯಾಲೆನ್ಸ್ ಬಯಸುವವರಿಗೆ ಸರ್ಕಾರಿ ಬ್ಯಾಂಕ್‌ಗಳಾದ ಎಸ್‌ಬಿಐ ಮತ್ತು ಬ್ಯಾಂಕ್ ಆಫ್ ಇಂಡಿಯಾ ಉತ್ತಮ ಆಯ್ಕೆಗಳಾಗಿವೆ. ಹೆಚ್ಚು ಸೌಲಭ್ಯಗಳು ಮತ್ತು ವಿಶೇಷ ಸೇವೆಗಳನ್ನು ಬಯಸುವವರು ಖಾಸಗಿ ಬ್ಯಾಂಕ್‌ಗಳನ್ನು ಪರಿಗಣಿಸಬಹುದು. ಆದರೆ, ಖಾತೆ ತೆರೆಯುವ ಮೊದಲು ಆಯಾ ಬ್ಯಾಂಕ್‌ನ ಕನಿಷ್ಠ ಬ್ಯಾಲೆನ್ಸ್ ನಿಯಮಗಳನ್ನು ಮತ್ತು ದಂಡದ ಶುಲ್ಕಗಳನ್ನು ಸರಿಯಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯ. ಇದು ಅನಗತ್ಯ ಶುಲ್ಕಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಸರಿಯಾದ ಬ್ಯಾಂಕ್ ಮತ್ತು ಖಾತೆಯ ಪ್ರಕಾರವನ್ನು ಆರಿಸಿಕೊಳ್ಳುವುದು ಹಣಕಾಸಿನ ಯೋಜನೆಗೆ ಒಂದು ಪ್ರಮುಖ ಹೆಜ್ಜೆ ಎನ್ನಬಹುದು.

Best Mobiles in India

English summary
Find out how much balance you need to maintain in major banks and which ones offer zero-balance accounts to avoid penalties.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+