ಭೂಮಿಗೆ ಭೇಟಿ ಕೊಟ್ಟ ಏಲಿಯನ್‌ಗಳ ಮರಣ ರಹಸ್ಯ
ಏಲಿಯನ್‌ಗಳು ಭೂಮಿಗೆ ಆಗಾಗ್ಗೆ ಭೇಟಿ ಕೊಡುತ್ತಿವೆ ಎಂಬುದಕ್ಕೆ ಸಾಕ್ಷಿಯಾಗಿ ಅವುಗಳು ಹಲವಾರು ಪಳೆಯುಳಿಕೆಗಳನ್ನು ಇಲ್ಲಿ ಬಿಟ್ಟು ಹೋಗುತ್ತಿರುತ್ತವೆ. ಇವುಗಳನ್ನು ಒಮ್ಮೆಗೆ ನಂಬಲು ಕಷ್ಟವಾದರೂ ಇಂತಹ ಪಳೆಯುಳಿಕೆಗಳು ಹೆಚ್ಚು ಸಿಕ್ಕಿದಂತೆಲ್ಲಾ ನಾವು ಅದನ್ನೇ ನಂಬಲೇಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಮಾನವ ನಿರ್ಮಿತವಲ್ಲದ ಈ ಗುರುತುಗಳು ಏಲಿಯನ್‌ಗಳು ಭೂಮಿಯಲ್ಲಿ ಈ ಹಿಂದೆ ಇದ್ದವು ಅಂತೆಯೇ ಆಗಾಗ್ಗೆ ಅವುಗಳು ಭೇಟಿ ಕೂಡ ನೀಡುತ್ತಿರುತ್ತವೆ ಎಂಬುದನ್ನು ಸಾಧಿಸುವ ಅಂಶಗಳು ಇಲ್ಲಿವೆ.
ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಏಲಿಯನ್‌ಗಳು ಬಿಟ್ಟು ಹೋಗಿದ್ದವು ಎಂದು ತಿಳಿಸಿರುವ ಕೆಲವು ಪಳೆಯುಳಿಕೆಗಳನ್ನು ನಾವು ತಿಳಿಸುತ್ತಿದ್ದೇವೆ.

#1
ರಷ್ಯಾದ ವ್ಯಕ್ತಿಯೊಬ್ಬನಿಗೆ ಹಲ್ಲಿನ ತುಂಡೊಂದು ಸಿಕ್ಕಿದ್ದು ಇದು ಕಲ್ಲಿದ್ದಲಿನ ಮಾದರಿಯಲ್ಲಿದೆ. ಅಂತೆಯೇ ವಿಜ್ಞಾನಿಗಳ ಬಳಿಗೆ ಇದನ್ನು ಕೊಂಡೊಯ್ದು ಪರಿಶೀಲಿಸಿದಾಗ ಇದನ್ನು ಅಲ್ಯುಮಿನಿಯಮ್‌ನಿಂದ ತಯಾರಿಸಲಾಗಿದೆ ಎಂಬುದು ಪತ್ತೆಯಾಗಿದ್ದು ಇದು ಕೃತಕವಾಗಿದೆ ಎಂಬುದಾಗಿ ತಿಳಿದು ಬಂದಿದೆ.

#2
ಇದು 300 ವರ್ಷಗಳಷ್ಟು ಹಳೆಯದಾಗಿದ್ದು, 1825 ರಲ್ಲಿ ಮಾನವರು ಈ ಮಾದರಿಯ ಲೋಹವನ್ನು ತಯಾರಿಸುವುದು ಕಷ್ಟಾಸಾಧ್ಯ ಎಂಬುದು ಸಾಬೀತಾಗಿದೆ. ಆದ್ದರಿಂದಲೇ ಇದು ಹೆಚ್ಚು ಆಸಕ್ತಿಕರವಾಗಿದ್ದು ಇದರ ಹಿನ್ನಲೆ ಏನಿರಬಹುದು ಎಂಬ ಜಾಡನ್ನು ಅನ್ವೇಷಿಸುವಂತೆ ಇದು ಮಾಡಿದೆ.

#3
1930 ರಲ್ಲಿ ಗೋಟೆಮಾಲಾ ಅರಣ್ಯದಲ್ಲಿ ಈ ಕಲ್ಲಿನ ತಲೆ ಕಂಡುಬಂದಿದೆ. ಮಾಯಾ ಅಥವಾ ಇತರೆ ಯಾವುದೇ ಪ್ರಸಿದ್ಧ ಜನರುಗಳನ್ನು ಈ ತಲೆ ಹೋಲುತ್ತಿರಲಿಲ್ಲ. ಅಂತೆಯೇ ಯಾವುದೇ ಇತಿಹಾಸ ಪುಸ್ತಕದಲ್ಲಿ ಈ ಕಲ್ಲಿನ ತಲೆಯ ಕುರಿತು ಮಾಹಿತಿ ಇರಲಿಲ್ಲ.

#4
ಸಂಶೋಧಕರು ಹೇಳುವಂತೆ ಈ ತಲೆಯು ಯಾವುದೇ ಪುರಾತನ ಏಲಿಯನ್ ನಾಗರೀಕತೆಯದ್ದಾಗಿರಬೇಕು ಎಂದಾಗಿದೆ. ಅದಾಗ್ಯೂ ಇದರ ಮೂಲವನ್ನು ಪತ್ತೆಹಚ್ಚಲು ಇದುವರೆಗೂ ಸಾಧ್ಯವಾಗಿಲ್ಲ.

#5
1998 ರಲ್ಲಿ ಪಾದಯಾತ್ರಿ ಆದ ಜಾನ್ ಜೆ ವಿಲಿಯಮ್ಸ್ ಕಲ್ಲಿನ ಹೊರಚಾಚುವಿಕೆಯನ್ನು ಕೊಳಕಿನಿಂದ ಹೊರತೆಗೆದಿದ್ದಾರೆ. ವಿಚಿತ್ರವಾಗಿರುವ ಈ ಕಲ್ಲನ್ನು ಆತ ಹೊರತೆಗೆದಿದ್ದು ಅದನ್ನು ಸ್ವಚ್ಛಗೊಳಿಸಿದಾಗ ಒಂದು ಇಲೆಕ್ಟ್ರಿಕ್ ಭಾಗ ಅದರಲ್ಲಿ ಅಂಟಿರುವುದು ಕಂಡುಬಂದಿದೆ. ಈ ಇಲೆಕ್ಟ್ರಿಕ್ ಡಿವೈಸ್ ಸಂಪೂರ್ಣವಾಗಿ ಮಾನವ ನಿರ್ಮಿತವಾಗಿದ್ದು ಇಲೆಕ್ಟ್ರಿಕ್ ಪ್ಲಗ್‌ನಂತಿದೆ.

#6
ಯುಎಫ್‌ಒ ವಲಯದಲ್ಲಿ ಈ ಕಲ್ಲು ಒಂದು ಹೆಸರಾಂತ ರಹಸ್ಯವಾಗಿದೆ. ಇಲೆಕ್ಟ್ರಿಕ್ ಇಂಜಿನಿಯರ್ ಆಗಿದ್ದ ವಿಲಿಯಮ್ಸ್ ಹೇಳುವಂತೆ ಕಲ್ಲಿನಲ್ಲಿರುವ ಈ ಇಲೆಕ್ಟ್ರಿಕ್ ಭಾಗವನ್ನು ಅಂಟಿಸಿರುವುದಲ್ಲ. ಡಿವೈಸ್‌ನ ಸುತ್ತಲೂ ಈ ಕಲ್ಲು ರಚನೆಯಾಗಿದೆ ಎಂದಾಗಿದೆ.

#7
ಪುರಾತನ ವಿಮಾನಗಳು ಗಾತ್ರದಲ್ಲಿ ಚಿಕ್ಕದಾಗಿದ್ದು, ಚಿನ್ನದ ಬಣ್ಣದಲ್ಲಿವೆ. ಈಗಿನ ಜೆಟ್ ಪ್ಲೇನ್‌ಗಳ ಮಾದರಿಯಲ್ಲಿವೆ. ಇವುಗಳು ಪುಟ್ಟದಾಗಿದ್ದರೂ ಅಂದಿನ ಕಾಲದಲ್ಲೇ ವಿಮಾನಗಳ ಕಲ್ಪನೆಯನ್ನು ರೂಪಿಸಲಾಗಿತ್ತು ಎಂಬುದು ಇದರಿಂದ ತಿಳಿದು ಬರುತ್ತದೆ.

#8
ಪುರಾತತ್ವಜ್ಞರು ಮತ್ತು ಇತಿಹಾಸಕಾರರಿಗೆ ಇರಾಕ್‌ನಲ್ಲಿರುವ ಪುರಾತತ್ವ ಸೈಟ್ ಚಿನ್ನದ ಗಣಿಯಾಗಿದೆ. ಇಲ್ಲಿ ಏಲಿಯನ್‌ಗಳಿಗೆ ಸಂಬಂಧಿಸಿದ ಹಲವಾರು ದಾಖಲೆಗಳು ದೊರಕಿವೆ.

#9
ಶ್ರೀಲಂಕಾದಲ್ಲಿ ಬಿದ್ದಿರುವ ಕಲ್ಲುಗಳು ಸಾಧಾರಣ ಕಲ್ಲುಗಳಾಗಿರದೆ ಅವರುಗಳಿಗೆ ಸಂಬಂಧಿಸಿದ ಶಿಲೆಗಳಾಗಿವೆ ಎಂಬುದಾಗಿ ಪತ್ತೆಯಾಗಿದೆ.

#10
ಸಮ್ಮರ್ಸ್ ಟ್ರಿಯಂಪ್ ಎಂದು ಕರೆಯಲಾದ ವಸ್ತ್ರವೊಂದು ದೊರೆತಿದ್ದು ಇದನ್ನು ಬೆರಿಶಸ್ ನ್ಯಾಶನಲ್ ಮ್ಯೂಸಿಯಮ್‌ನಲ್ಲಿ ಇರಿಸಲಾಗಿದೆ. ಆಕಾಶದಲ್ಲಿ ಹಾರುವ ಏಲಿಯನ್‌ಗಳು ಈ ವಸ್ತ್ರಗಳನ್ನು ಬಳಸುತ್ತಿದ್ದರು ಎಂಬ ಮಾತಿದ್ದು ಇದರಿಂದ ಇದು ಪುರಾತನ ಪಳೆಯುಳಿಕೆ ಎಂದೆನಿಸಿದೆ.

#11
ಇಟಾಲಿಯನ್ ಚಿತ್ರ ಕಲಾವಿದ ವೆಂಚುರಾ ಸಲಿಂಬೆನಿ ಇತಿಹಾಸದಲ್ಲೇ ಹೆಚ್ಚು ರೋಚಕ ಎಂದೆನಿಸಿರುವ ಚಿತ್ರಕಲೆಯ ಮಾಲೀಕ ಎಂದೆನಿಸಿದ್ದಾನೆ. 16 ನೇ ಶತಮಾನದ ಚಿತ್ರಕಲೆಯಾಗಿರುವ ಇದು ಮೂರು ಭಾಗಗಳನ್ನು ಹೊಂದಿದೆ.

#12
2012 ರಲ್ಲಿ ಮೆಕ್ಸಿಕನ್ ಸರಕಾರವು ಈ ಮಾಯಾ ಚಿತ್ರಕಲೆಯನ್ನು ಬಿಡುಗಡೆ ಮಾಡಿದ್ದು 80 ವರ್ಷಗಳ ರಾಜ್ಯ ರಹಸ್ಯ ಎಂಬುದಾಗಿ ಇದನ್ನು ಕರೆಯಲಾಗಿತ್ತು. ಇದು ಹೆಚ್ಚು ಶಕ್ತಿಶಾಲಿ ಪುರಾತನ ಮಾಯಾ ನಗರಗಳಲ್ಲಿ ಒಂದಾಗಿದೆ.

#13
20 ಸೆಂಟಿಮೀಟರ್‌ಗಳ ಈ ಸಿಲ್ವರ್ ಗೋಲವು ಮೃದುವಾಗಿದ್ದು ತ್ರಿಕೋನ ಚಿಹ್ನೆಯಲ್ಲಿದೆ. ಇದು ನಾಸಾ ಗ್ಯಾಜೆಟ್ ಆಗಿರಬಹುದು ಅಥವಾ ಸೋವಿಯತ್ ಸ್ಪೈ ಸ್ಯಾಟಲೈಟ್ ಕೂಡ ಆಗಿರಬಹುದು ಎಂಬ ವದಂತಿ ಕೂಡ ಹಬ್ಬಿದೆ.



Click it and Unblock the Notifications








