Just In
Don't Miss
- News
ದುರಂತ ಸೋಲು; ಶತಕೋಟಿ ಒಡೆಯ ಎಂಟಿಬಿ ಹೇಳಿದ್ದೇನು?
- Education
KPSC Admit Card 2019: ಗ್ರೂಪ್ "ಬಿ" ಮತ್ತು "ಸಿ" ಹುದ್ದೆಗಳ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ
- Sports
ಇಂದಿನಿಂದ ರಣಜಿ ಆರಂಭ: ಕರ್ನಾಟಕಕ್ಕೆ ತಮಿಳುನಾಡು ಎದುರಾಳಿ
- Movies
ಹನುಮ ಜಯಂತಿಗೆ ಹೊಸ ಕಾರ್ ಖರೀದಿ ಮಾಡಿದ ಧ್ರುವ ಸರ್ಜಾ
- Automobiles
ಬಿಎಸ್-6 ಎಂಜಿನ್ ಪ್ರೇರಿತ ಯಮಹಾ ಆರ್15 ವಿ3.0 ವರ್ಷನ್ ಬಿಡುಗಡೆ
- Finance
ಮೊಬೈಲ್ ಚಾರ್ಜ್ಗೆ ಹಾಕೋಕೆ ಮುನ್ನ ಎಚ್ಚರ, ನಿಮ್ಮ ಬ್ಯಾಂಕ್ ಹಣಕ್ಕೆ ಬೀಳುತ್ತೆ ಕನ್ನ!
- Lifestyle
ವಿಶ್ವ ಸುಂದರಿ ಸ್ಪರ್ಧಿಗಳಲ್ಲಿ ಈ ಸಲಿಂಗಿಯದ್ದೇ ಸದ್ದು
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ನಾಸಾ ವಿಜ್ಞಾನಿಗಳಿಗೆ ನಿಗೂಢ ಎನಿಸಿದೆಯಂತೆ ಮಂಗಳ ಗ್ರಹದ ಈ ಜಾಗ!!
ನಾಸಾದ ಕ್ಯೂರಿಯಾಸಿಟಿ ರೋವರ್ ನೌಕೆ ಈ ವರೆಗೂ ಮಂಗಳನಲ್ಲಿ ಸತ್ತಾಡಿದ ಎಲ್ಲ ಜಾಗಗಳನ್ನು ಗಮನಿಸಿದಾಗ ಒಂದು ಪೈಕಿ ಈ ಜಾಗ ಅತ್ಯಂತ ವಿಭಿನ್ನವಾಗಿ ಕಂಡುಬಂದಿದೆ. ಈ ಸ್ಥಳ ಹೇಗೆ ರೂಪುಗೊಂಡಿದೆ ಎಂಬುದನ್ನು ಪತ್ತೆಹಚ್ಚಬೇಕಿದ್ದು, ನಿಗೂಢ ಎನಿಸಿದೆ ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ರೇ ಅರ್ವಿಡ್‌ಸನ್ ಹೇಳಿದ್ದಾರೆ.!!
ಜನವರಿ 2004ರಂದು ಕೆಂಪು ಗ್ರಹಕ್ಕೆ ಅಡಿಯಿಟ್ಟ ರೋವರ್ ನೌಕೆ ಈಗ 'ಪರ್ಸೀವರೆನ್ಸ್ ವ್ಯಾಲಿ' ಎಂಬ ಜಾಗದಲ್ಲಿ ಈಗ ಕಾರ್ಯಾಚರಣೆ ನಡೆಸುತ್ತಿದೆ. ಈ ಜಾಗವು ಎಂಡಿವರ್ ಕುಳಿಯ ದಕ್ಷಿಣ ಇಳಿಜಾರಿನಲ್ಲಿದ್ದು ವಿಜ್ಞಾನಿಗಳಿಗೆ ಆಶ್ಚರ್ಯವನ್ನುಂಟು ಮಾಡಿದೆ.! ಹಾಗಾದರೆ, ಏನಿದು ವರದಿ? ಈ ಜಾಗ ವಿಜ್ಞಾನಿಗಳಿಗೆ ನಿಗೂಢವಾಗಿರುವುದೇಕೆ? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

5 ಸಾವಿರದಿನ ಪೂರೈಕೆ!!
2004ರಂದು ಮಗಂಳ ಗ್ರಹಕ್ಕೆ ಕಾಲಿಟ್ಟಿರುವ ರೋವರ್ ನೌಕೆ 5 ಸಾವಿರ ‘ಮಂಗಳ ದಿನ'ಗಳನ್ನು ಪೂರೈಸಿದೆ. ವಾಷಿಂಗ್ಟನ್ ವಿಶ್ವವಿದ್ಯಾಲಯದ ರೇ ಅರ್ವಿಡ್‌ಸನ್ ಹೇಳಿರುವಹಾಗೆ ಇಷ್ಟು ದಿನಗಳ ನಂತರ ರೋವರ್ ನೌಕೆ ಈಗ ಕಾರ್ಯಾಚರಣೆ ನಡೆಸುತ್ತಿರುವ ‘ಪರ್ಸೀವರೆನ್ಸ್ ವ್ಯಾಲಿ' ಎಂಬ ಜಾಗ ವಿಜ್ಞಾನಿಗಳಿಗೆ ನಿಗೂಢ ಎನಿಸಿದೆ.!!

‘ಪರ್ಸೀವರೆನ್ಸ್ ವ್ಯಾಲಿ’!!
ರೋವರ್ ಈವರೆಗೆ ಸುತ್ತಾಡಿದ ಎಲ್ಲ ಜಾಗಗಳನ್ನು ಗಮನಿಸಿದಾಗ ಅವುಗಳ ಪೈಕಿ 'ಪರ್ಸೀವರೆನ್ಸ್ ವ್ಯಾಲಿ' ಜಾಗ ಅತ್ಯಂತ ವಿಭಿನ್ನವಾಗಿ ಕಂಡುಬಂದಿರುವ ಜಾಗವಾಗಿದೆ. ಇಲ್ಲಿ ನೀರು, ಗಾಳಿ ಅಥವಾ ಮಂಜುಗಡ್ಡೆಯ ಪ್ರಕ್ರಿಯೆ ನಡೆದಿರಬಹುದು ಎಂಬ ಸುಳಿವು ಆಧರಿಸಿ ರೋವರ್ ಸಂಶೋಧಕರು ಈಗಾಗಲೇ ವಿಶ್ಲೇಷಣೆ ನಡೆಸುತ್ತಿದ್ದಾರೆ.!!

ಶಿಲಾಪದರಗಳಿಂದ ರೂಪುಗೊಂಡಿದೆ.!!
ಭೂಮಿಯ ಕೆಲವು ಪರ್ವತಗಳ ಇಳಿಜಾರಿನಲ್ಲಿ ಕಂಡುಬರುವ ಶಿಲಾಪದರವನ್ನೇ ಮಂಗಳ ಗ್ರಹದ 'ಪರ್ಸೀವರೆನ್ಸ್ ವ್ಯಾಲಿ' ಜಾಗದಲ್ಲಿ ಕಾಣಲಾಗಿದೆ. ತೇವದಿಂದ ಕೂಡಿದ ಮಣ್ಣು ನಿರಂತರವಾಗಿ ಘನೀಕರಣಕ್ಕೆ ಒಳಗಾದಾಗ ಶಿಲಾಪದರಗಳು ರೂಪುಗೊಂಡಿರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.!!

ಮಂಗಳನಲ್ಲಿ ಮೊದಲು ನೀರು ಇತ್ತೇ?
ಈ ವಿನ್ಯಾಸಗಳು ಗ್ರಹದ ಆಧುನಿಕ ರಚನೆಗಳೇ ಅಥವಾ ಹಳೆಯವೇ ಎಂಬ ಬಗ್ಗೆ ಖಚಿತತೆ ಇಲ್ಲ. ಆದರೆ, ಅಲ್ಲಿ ನೀರು, ಗಾಳಿ ಅಥವಾ ಮಂಜುಗಡ್ಡೆಯ ಪ್ರಕ್ರಿಯೆ ನಡೆದಿರಬಹುದು ಎಂಬ ಸುಳಿವು ಆಧರಿಸಿ ಕೆಲವು ವಿವರಣೆಗಳನ್ನೂ ವಿಜ್ಞಾನಿಗಳು ಸಿದ್ಧಪಡಿಸುತ್ತಿದ್ದಾರೆ.!


ವಿಜ್ಞಾನಿಗಳ ವಾದ ಏನು?
‘ಮಂಗಳ ಗ್ರಹ ಧ್ರುವ ಪ್ರದೇಶಗಳಲ್ಲಿನ ನೀರು ಆವಿಯಾಗಿ ವಾತಾವರಣ ಸೇರಿ, ಬಳಿಕ ಹಿಮ ಅಥವಾ ಮಂಜುಗಡ್ಡೆ ರೂಪದಲ್ಲಿ ಸಮಭಾಜಕ ವೃತ್ತದ ಸಮೀಪ ಶೇಖರಣೆಗೊಂಡಿದೆ. ಇದು ಕಾಲಾಂತರದಲ್ಲಿ ಶಿಲಾಪದರವಾಗಿ ರೂಪಾಂತರಗೊಂಡಿರಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.!!
-
22,990
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090