Subscribe to Gizbot

ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಲಂಚ ನೀಡಬೇಕಾಗಿಲ್ಲ: ಅದಕ್ಕಾಗಿ ಇಲ್ಲಿದೇ ಸುಲಭ ಉಪಾಯ..!!

Written By:

ಸಾರಿಗೆ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಬುಡಮಟ್ಟದಿಂದಲೇ ಕಿತ್ತು ಹಾಕುವ ಸಲುವಾಗಿ ಕೇಂದ್ರ ಸರಕಾರವೂ ಹೊಸದೊಂದು ಕ್ರಮಕ್ಕೆ ಮುಂದಾಗಲಿದ್ದು, ಇದಕ್ಕಾಗಿ ಯೋಜನೆಯೊಂದನ್ನು ರೂಪಿಸಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ರಾಧಕೃಷ್ಣನ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಲಂಚ ನೀಡಬೇಕಾಗಿಲ್ಲ

ಓದಿರಿ: ನೀವಿನ್ನು ಜಿಯೋ ಪ್ರೈಮ್ ಸದಸ್ಯರಾಗಿಲ್ಲವೇ..? ಹಾಗಿದ್ದರೆ ನೀವು ಈ ಸ್ಟೋರಿ ಓದಲೇ ಬೇಕು

ಸದ್ಯ ಡಿಜಿಟಲ್ ಇಂಡಿಯಾ ಯೋಜನೆಯ ಅಂಗವಾಗಿ ಡಿಎಲ್ ಪಡೆಯುವುದು ಸೇರಿದಂತೆ ವಾಹನ ನೋಂದಣಿ ಮುಂತಾದವುಗಳನ್ನು ಆನ್‌ಲೈನ್ ಮೂಲಕವೇ ವಿತರಿಸಲು ಮುಂದಾಗಿದೆ. ಇದಕ್ಕಾಗಿ ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದ್ದು, ಇದರಿಂದಾಗಿ ಏಜೆಂಟ್ ಗಳ ಹಾವಳಿಯು ಕಡಿಮೆಯಾಗಲಿದೆ ಎನ್ನಲಾಗಿದೆ.

ಓದಿರಿ: ಆನ್‌ಲೈನ್‌ನಲ್ಲಿ 30 ರೂ.ಗೆ ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದು ಹೇಗೆ? ಫುಲ್‌ ಡೀಟೆಲ್ಸ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ಮಾದರಿಯ ಆಪ್‌ ಬಳಕೆ:

ಹೊಸ ಮಾದರಿಯ ಆಪ್‌ ಬಳಕೆ:

ಇದಕ್ಕಾಗಿ ಹೊಸ ಮಾದರಿಯ ಅಪ್ಲಿಕೇಷನ್ ಗಳನ್ನು ಡೆವಲಪ್ ಮಾಡಿದ್ದು, ಇದರಿಂದಾಗಿ ಸಾರ್ವಜನಿಕರು ಸುಲಭವಾಗಿ ಮತ್ತು ಯಾವುದೇ ಲಂಚವನ್ನು ನೀಡದೇ ಲೈಸೆನ್ಸ್ ಪಡೆಯಬಹುದಾಗಿದೆ. ಈ ಹಿಂದಿನಂತೆ ಅರ್ಜಿ ತುಂಬುವುದು ಸೇರಿದಂತೆ ಡಿಎಲ್ ಮುಂತಾದವುಗಳನ್ನು ಸರಳೀಕೃತಗೊಳಿಸಲಾಗವುದು ಎನ್ನಲಾಗಿದೆ.

ಆನ್‌ಲೈನ್‌ನಲ್ಲೇ ವಾಹನ ನೋಂದಣಿ, ಲೈಸೆನ್ಸ್:

ಆನ್‌ಲೈನ್‌ನಲ್ಲೇ ವಾಹನ ನೋಂದಣಿ, ಲೈಸೆನ್ಸ್:

ಆರ್‌ಟಿಓ ಕಚೇರಿಗೆ ಅಲೆದು ಇಲ್ಲವೇ ಏಜೆಂಟ್‌ಗಳಿಗೆ ಕೇಳಿದಷ್ಟು ಹಣವನ್ನು ನೀಡಿ ಡಿಎಲ್‌ ಪಡೆಯುವ ದಿನಗಳು ಇನ್ನು ಮುಂದೆ ಇರುವುದಿಲ್ಲ. ಕಾರಣ ಆನ್ ಲೈನ್‌ನಲ್ಲೇ ವಾಹನ ನೋಂದಣಿ, ಲೈಸೆನ್ಸ್ ಪಡೆಯಬಹುದಾಗಿದ್ದು, ಇದರಿಂದ ಸಾರ್ವಜನಿಕರು ನೆಮ್ಮದಿಯಿಂದ ಇರಬಹುದಾಗಿದೆ.

ವಾಹನ ನೋಂದಣಿಗೆ 'ವಾಹನ್ 4.0':

ವಾಹನ ನೋಂದಣಿಗೆ 'ವಾಹನ್ 4.0':

ಆನ್‌ಲೈನಿನಲ್ಲಿ ವಾಹನಗಳನ್ನು ನೋಂದಣಿ ಮಾಡಿಸಿಕೊಳ್ಳುವ ಸಲುವಾಗಿ ಸರಕಾರವೂ 'ವಾಹನ್ 4.0' ಎಂಬ ಆಪ್ಲೀಕೆಷನ್ ಡೆವಲಪ್ ಮಾಡಿದ್ದು, ಇದರಿಂದ ವಾಹನಗಳ ನೋಂದಣಿಯೂ ಆನ್‌ಲೈನ್‌ ಮೂಲಕ ಸುಲಭ ಸಾಧ್ಯವಾಗಲಿದೆ. ಇದರಿಂದ ಏಜೆಂಟ್ ಗಳಿಗೆ ಹಣ ನೀಡುವುದು, ಸರದಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ.

ಲೈಸೆನ್ಸ್ ಪಡೆಯಲು ಸಾರಥಿ 4.0:

ಲೈಸೆನ್ಸ್ ಪಡೆಯಲು ಸಾರಥಿ 4.0:

ಏಜೆಂಟ್‌ಗಳ ಹಾವಳಿಯನ್ನು ತಪ್ಪಿಸುವ ಸಲುವಾಗಿ ಸಾರಥಿ 4.0 ಎಂಬ ಆಪ್ಲೀಕೆಷನ್ ಡೆವಲಪ್ ಮಾಡಲಾಗುತ್ತಿದ್ದು, ಇದರಿಂದ ಸವಾರರು ಸುಲಭ ಮತ್ತು ಸರಳವಾಗಿ ಡಿಎಲ್ ಪಡೆಯಬಹುದಾಗಿದೆ. ಅದುವೇ ಪಾರದರ್ಶಕವಾಗಿ. ಯಾವುದೇ ಲಂಚ ನೀಡದೆ.

ಆನ್‌ಲೈನ್‌ನಲ್ಲಿ ಆಧಾರ್ ಜೊತೆ ಪಾನ್‌ಕಾರ್ಡ್ ಲಿಂಕ್ ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
government has introduced new online systems for vehicle registration and driving licences, aimed at simplifying the issuance process and curbing corruption. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot