ಅಚ್ಚರಿ ಅವಿಷ್ಕಾರ!.. ವೇಸ್ಟ್ ಟೊಮ್ಯಾಟೋದಲ್ಲಿ ಬೈಕ್ ಟೈರ್ ಉತ್ಪಾದನೆ!!

Written By:

ಹೆಚ್ಚು ಮಳೆ ಬಿದ್ದು ಟೊಮ್ಯಾಟೋ ಬೆಳೆ ಹಾಳಾಯಿತು, ಬೆಲೆ ಕಡಿಮೆಯಾಯಿತು ಎಂದು ಚಿಂತಿಸುವ ಅಥವಾ ರೂಡಿನಲ್ಲಿ ಚೆಲ್ಲುವ ಪರಿಸ್ಥಿತಿ ಭವಿಷ್ಯದ ದಿನಗಳಲ್ಲಿ ಬರುವುದಿಲ್ಲ.! ಏಕೆಂದರೆ ಸಂಶೋಧಕರು ತ್ಯಾಜ್ಯ ಟೊಮ್ಯಾಟೋಗಳಿಂದ ವಾಹನಗಳಿಗೆ ಬೇಕಾದ ಟೈರ್ ತಯಾರಿಸಿದ್ದಾರೆ.!!

ತ್ಯಾಜ್ಯ ಟೊಮ್ಯಾಟೋ ಹಾಗೂ ಮೊಟ್ಟೆಯ ಚಿಪ್ಪುಬಳಸಿಕೊಂಡು ರಬ್ಬರ್ ತಯಾರಿಸುವ ವಿಧಾನವನ್ನು ಕಂಡುಹಿಡಿದಿದ್ದು, ಟೈರ್ ಉತ್ಪಾದನೆಯನ್ನು ಪ್ರಮುಖವಾಗಿ ಬಳಸಲಾಗುವ ಪೆಟ್ರೋಲಿಯಂ ಆಧಾರಿತ ವಸ್ತುಗಳಿಗೆ ಬದಲಾಗಿ ಆಹಾರದ ತ್ಯಾಜ್ಯಗಳನ್ನು ಬಳಕೆ ಮಾಡಬಹುದು ಎಂಬ ಅಭಿಪ್ರಾಯವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ.

ಅಚ್ಚರಿ ಅವಿಷ್ಕಾರ!.. ವೇಸ್ಟ್ ಟೊಮ್ಯಾಟೋದಲ್ಲಿ ಬೈಕ್ ಟೈರ್ ಉತ್ಪಾದನೆ!!
ಸಾಂದರ್ಭಿಕ ಚಿತ್ರ.

ಸಲ್ಮಾನ್ ಖಾನ್ ಇನ್ನು "ಬೀಯಿಂಗ್ ಸ್ಮಾರ್ಟ್" ಮೊಬೈಲ್ ಕಂಪೆನಿ ಒಡೆಯ!!

ಅಮೆರಿಕದ ಓಹಿಯೋ ಸ್ಟೇಟ್ ವಿಶ್ವವಿದ್ಯಾನಿಲಯದ ಕತ್ರಿನಾ ಕಾರ್ನಿಷ್ ಮತ್ತು ಸಹೋದ್ಯೋಗಿಗಳು ಮೊಟ್ಟೆಯ ಮೇಲ್ಭಾಗ, ಟೊಮ್ಯಾಟೋ ಹಾಗೂ ಇತರ ತ್ಯಾಜ್ಯ ಆಹಾರ ಪದಾರ್ಥಗಳನ್ನು ಬಳಸಿಕೊಂಡು ಟೈರ್ ಉತ್ಪಾದನೆಗೆ ಸಹಕಾರಿಯಾಗುವ ಕಾರ್ಬನ್ ಅನ್ನು ತಯಾರಿಸುವ ವಿಧಾನವನ್ನು ಕಂಡು ಹಿಡಿದಿದ್ದಾರೆ.

ಅಚ್ಚರಿ ಅವಿಷ್ಕಾರ!.. ವೇಸ್ಟ್ ಟೊಮ್ಯಾಟೋದಲ್ಲಿ ಬೈಕ್ ಟೈರ್ ಉತ್ಪಾದನೆ!!
ಸಾಂದರ್ಭಿಕ ಚಿತ್ರ.

ನೂತನ ಸಂಶೋಧನಾ ರಬ್ಬರ್ ಗುಣಗಳನ್ನು ಪಡೆಯುವುದಕ್ಕೆ ತ್ಯಾಜ್ಯ ಟೊಮ್ಯಾಟೋ, ಮೊಟ್ಟೆಯ ಮೇಲ್ಭಾಗದ ಪದರವನ್ನು ಬಳಕೆ ಪರ್ಯಾಯವಾಗಿದ್ದು, ಕೈಗಾರಿಕಾ ಗುಣಮಟ್ಟಕ್ಕಿಂತ ಹೆಚ್ಚಿನ ರಬ್ಬರ್ ತಯಾರಿಕೆಗೆ ಹೊಸ ಮಾದರಿ ಸಿಕ್ಕಂತಾಗಿದೆ. ತ್ಯಾಜ್ಯಗಳ ಮರು ಬಳಕೆಗೆ ನಾಂದಿ ಆಗಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Read more about:
English summary
The research discovered that food waste can partially replace carbon black. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot