ಪ್ಲೂಟೋ 9 ಗ್ರಹವೆಂಬುವುದರಲ್ಲಿ ಅನುಮಾನವೇ ಇಲ್ಲ!..ಸೌರವ್ಯೂಹಕ್ಕೆ ಮತ್ತೆ ಪ್ಲೂಟೋ!!
ಹಲವು ಕಾರಣಗಳಿಂದ ಕ್ರಿ.ಶ.2006ರಲ್ಲಿ ಸೌರವ್ಯೂಹದಿಂದ ಹೊರಹೋಗಿದ್ದ ಪ್ಲೂಟೋ ಮತ್ತೆ ನಮ್ಮ ಸೌರವ್ಯೂಹದ ಅತ್ಯಂತ ಕೊನೆಯ ಗ್ರಹ ಎಂಬ ಪಡೆಯುವ ಸಾರ್ಧಯತೆಗಳು ಹೆಚ್ಚಾಗಿವೆ. ಇತ್ತೀಚಿಗೆ ಪ್ಲೂಟೋ ಸಮೀಪ ಹಾದುಹೋಗುತ್ತಿದ್ದ 'ನ್ಯೂ ಹೊರೈಜನ್' ಎಂಬ ನೌಕೆ ಅದರ ಎಲ್ಲಾ ರೀತಿಯ ವಿವರಗಳನ್ನು ನೀಡುವುದರ ಮೂಲಕ ಅದು ಗ್ರಹವೆಂಬ ನಿರ್ಧಾರಕ್ಕೆ ಬರಲಾಗಿದೆ.
ನಾಸಾ ವಿಜ್ಞಾನಿಗಳ ಪ್ರಕಾರ ಪ್ಲೂಟೋ ಗ್ರಹವೆಂಬುವುದರಲ್ಲಿ ಅನುಮಾನವೇ ಇಲ್ಲ ಎಂಬ ಸೂಚನೆ ಸಿಕ್ಕಿದ್ದೇ ತಡ,ಪ್ಲೂಟೋವನ್ನು ಸೌರವ್ಯೂಹದ ಒಳಕ್ಕೆ ಸೇರಿಸಿಕೊಳ್ಳಲು ಒತ್ತಡ ಹೆಚ್ಚಾಗುತ್ತಿದೆ. ಜಾನ್ಸ್ ಹಾಫಕಿನ್ಸ್ ವಿಶ್ವವಿದ್ಯಾಲಯದ ಖಗೋಳ ವಿಜ್ಞಾನಿಗಳುಸೇರಿದಂತೆ ಪ್ಲೂಟೋ ಗ್ರಹವೆಂಬ ಅಪಾರ ಅಭಿಮಾನವಿಟ್ಟುಕೊಂಡಿದ್ದ ಅಭಿಮಾನಿಗಳಿಗೆ ಇದೀಗ ತುಂಬಾ ಸಂತೋಷವಾಗಿದೆ.

ನಮ್ಮ ಭೂಮಿಯಲ್ಲಿ ಮಾತ್ರ ನೀರಿದೆ ಎಂಬುದು ಸಹ ಸುಳ್ಳಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಪ್ಲೂಟೋದಲ್ಲಿಯೂ ನೀರಿರುವ ಸಂಗತಿ ತಿಳಿದಿದೆ. ಭೂಮಿಯಿಂದ ಸುಮಾರು 575 ಕೋಟಿ ಕಿ.ಮೀ.ದೂರವಿರುವ ಅತ್ಯಂತ ಪುಟ್ಟ ಗ್ರಹ ಪ್ಲೂಟೋದಲ್ಲಿ ಭೂಮಿಯಲ್ಲಿರುವ ಎಲ್ಲಾ ಸಮುದ್ರಗಳ ನೀರಿಗಿಂತ ಸಾಕಷ್ಟು ಪಟ್ಟು ಹೆಚ್ಚಿದೆ ಎಂದು ತಿಳಿದುಬಂದಿದೆ.
ಪ್ಲೂಟೋ ಗ್ರಹದ ಭ್ರಮಣೆಯ ಅವಧಿ 6 ದಿನಗಳಾಗಿದ್ದು, ಪರಿಭ್ರಮಣೆಯ ಅವಧಿ ಸುಮಾರು 250 ವರ್ಷಗಳಾಗಿವೆ. ಕೇಂದ್ರದಲ್ಲಿ ಗಟ್ಟಿಯಾದ ಶಿಲೆಯಿಂದ ಸುತ್ತ ಹೆಪ್ಪುಗಟ್ಟಿದ ನೀರಿನ ಮಂಜುಗಡ್ಡೆಯಿಂದ ಆವೃತವಾಗಿದೆ. ಇದಕ್ಕೆ ಚಾರನ್ ಎಂಬ ಪುಟ್ಟ ಚಂದ್ರನಿದ್ದು ಇವೆರಡೂ ಜೋಡಿ ಆಕಾಶಕಾಯಗಳ ಹಾಗೇ ಕಂಡುಬರುತ್ತವೆ.

ಪ್ಲೂಟೋ ದುಂಡನೆಯ ಆಕಾರವನ್ನು ಹೊಂದಿಲ್ಲ ಮತ್ತು ಪ್ಲೂಟೋ ಗ್ರಹದ ಕಕ್ಷೆ ನೆಫ್ಚೂನ್ ಗ್ರಹದ ಕಕ್ಷೆಯನ್ನು ಹಾದು ಹೋಗಿದೆ ಎಂಬಕಾರಣಗಳನ್ನು ಕೊಟ್ಟು ಪ್ಲೂಟೋವನ್ನು ಸೌರವ್ಯೂಹದಿಂದ ಹೊರಗಿಡಲಾಗಿತ್ತು. ಇದೀಗ ಪ್ಲೂಟೋ, ಗ್ರಹದ ಲಕ್ಷಣಗಳನ್ನು ಹೊಂದಿದೆ ಎಂಬ ಇತ್ತೀಚಿನ ವರದಿಯಿಂದ ಮತ್ತೆ ಸೌರವ್ಯೂಹದ ಒಳಕ್ಕೆ ನುಸುಳುವ ಸಾಧ್ಯತೆ ಇದೆ ಎಂಬ ಸುಳಿವು ಸಿಕ್ಕಿದೆ.


Click it and Unblock the Notifications








