ಜೀವನ ಸುಲಭವಾಗಿಸಲು ಗೊತ್ತಿರಬೇಕಾದ ಹ್ಯಾಕ್ ಗಳು.
ತಂತ್ರಜ್ಞಾನದ ಮೇಲಿನ ವಿಪರೀತ ಅವಲಂಬನೆಯಿಂದಾಗಿ, ದಿನನಿತ್ಯ ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತ ಸಮಸ್ಯೆಗಳಿಗೆ ಸಿಲುಕುತ್ತಲೇ ಇರುತ್ತೇವೆ. ತುಂಬ ಸರಳವಾದ ಪರಿಹಾರವೂ ಕೆಲವೊಮ್ಮೆ ನಿಮಗೆ ಗೊತ್ತಿರದೇ ಹೋಗಬಹುದು.

ಉದಾಹರಣೆಗೆ, ನಿಮ್ಮ ಫೋನಿನ ಪರದೆಯ ಮೇಲೆ, ಸಿಡಿ ಅಥವಾ ಡಿವಿಡಿ ಮೇಲಿನ ಗೀರುಗಳು ನಿಮಗೆ ತೊಂದರೆ ಕೊಡುತ್ತಿರಬಹುದು. ಈ ರೀತಿಯ ತೊಂದರೆಗಳಿಗೆ ಸುಲಭದ ಪರಿಹಾರಗಳಿವೆ.
ಓದಿರಿ: ಏರ್‌ಟೆಲ್ ವರ್ಸಸ್ ಜಿಯೋ: 4ಜಿಗಳ ನಡುವೆಯೇ ಹಣಾಹಣಿ
ನಿಮ್ಮ ಜೀವನ ಸುಲಭವಾಗಿಸಲು ಇಂತಹ ಹಲವು ಹ್ಯಾಕ್ ಗಳಿವೆ. ಅಂತಹ ಹ್ಯಾಕ್ ಗಳನ್ನು ಕೆಳಗೆ ಓದಿ ನೋಡಿ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬ್ಯಾಟರಿಯ ಆಯಸ್ಸನ್ನು ಹೆಚ್ಚಿಸಿ.
ಬ್ಯಾಟರಿಗಳನ್ನು ಉಪಯೋಗಿಸುವ ಹಿಂದಿನ ದಿನ ಅವುಗಳನ್ನು ಫ್ರಿಡ್ಜಿನಲ್ಲಿಟ್ಟರೆ ಅವುಗಳ ದೀರ್ಘಕಾಲ ಬರುತ್ತದೆ.

ಗ್ಲಾಸನ್ನು ಸ್ಪೀಕರ್ ಆಗಿ ಪರಿವರ್ತಿಸಿ.
ನಿಮ್ಮ ಸ್ಮಾರ್ಟ್ ಫೋನಿನ ಸೌಂಡನ್ನು ಹೆಚ್ಚಿಸಬೇಕೆಂದಿದ್ದರೆ, ಸ್ಮಾರ್ಟ್ ಫೋನನ್ನು ಒಂದು ಗ್ಲಾಸಿನಲ್ಲಿಡಿ. ಇದು ಸ್ಪೀಕರ್ ಪರಿಣಾಮವನ್ನು ನೀಡುತ್ತದೆ.

ಸಿಡಿಗಳ ಮೇಲಿನ ಗೀರುಗಳನ್ನು ತೊಡೆದುಕೊಳ್ಳಿ.
ಸಿಡಿ ಅಥವಾ ಡಿವಿಡಿಗಳ ಮೇಲಿನ ಗೀರುಗಳನ್ನು ಬಾಳೆಹಣ್ಣಿನ ಸಿಪ್ಪೆಯ ಸಹಾಯದಿಂದ ನಿವಾರಿಸಿಕೊಳ್ಳಬಹುದು. ಸಿಪ್ಪೆಯ ಒಳಭಾಗದಿಂದ ಸಿಡಿ ಅಥವಾ ಡಿವಿಡಿಯ ಮೇಲೆ ಉಜ್ಜಿ ಮತ್ತು ನಂತರ ಹೊರ ಭಾಗದಿಂದ ಒಮ್ಮೆ ಸವರಿ. ಇದರ ಪರಿಣಾಮ ಅದ್ಭುತವಾಗಿರುತ್ತದೆ.

ಟೂಥ್ ಪೇಸ್ಟ್ ಕೂಡ ಪ್ರಯೋಜನಕಾರಿ.
ಗೀರುಗಳನ್ನು ಇಲ್ಲವಾಗಿಸಲು ನಿಮ್ಮ ಮನೆಯಲ್ಲಿರು ಟೂಥ್ ಪೇಸ್ಟನ್ನು ಸ್ವಲ್ಪ ಹಾಕಿ ವೃತ್ತಾಕಾರದಲ್ಲಿ ಮೆಲ್ಲಗೆ ಉಜ್ಜಿ. ನಂತರ ಮೆದುವಾದ ಹತ್ತಿಯ ಬಟ್ಟೆಯಿಂದ ಟೂಥ್ ಪೇಸ್ಟನ್ನು ಒರೆಸಿ. ಬದಲಾವಣೆ ನಿಮಗೇ ಗೋಚರಿಸುತ್ತದೆ.

ಸನ್ ಗ್ಲಾಸಿನ ಉಪಯೋಗ!
ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಫೋನುಗಳಿಗೆ ವಿವಿಧ ರೀತಿಯ ಸ್ಟ್ಯಾಂಡುಗಳು ಲಭ್ಯವಿದೆ. ಚಿತ್ರದಲ್ಲಿ ತೋರಿಸಿರುವಂತೆ ನಿಮ್ಮ ಸನ್ ಗ್ಲಾಸನ್ನು ಕೂಡ ಫೋನ್ ಸ್ಟ್ಯಾಂಡ್ ಆಗಿ ಬಳಸಬಹುದು.

ಉಚಿತ ಟ್ರಯಲ್ ಸಮಯವನ್ನು ವಿಸ್ತರಿಸಿಕೊಳ್ಳಿ.
ಆ್ಯಂಟಿ ವೈರಸ್ ಅಥವಾ ಇನ್ನಿತರೆ ಸಾಫ್ಟ್ ವೇರುಗಳ ಉಚಿತ ಟ್ರಯಲ್ ಅನ್ನು ನೀವು ಉಪಯೋಗಿಸುತ್ತಿರಬಹುದು. ಈ ಸಮಯವನ್ನು ವಿಸ್ತರಿಸಬೇಕೆಂದಿದ್ದಲ್ಲಿ, ನಿಮ್ಮ ಕಂಪ್ಯೂಟರಿನ ದಿನಾಂಕವನ್ನು ಬದಲಿಸಿದರೆ ಸಾಕು.

ಗೀರುಗಳನ್ನು ಇಲ್ಲವಾಗಿಸಲು ಇರೇಸರ್ ಬಳಸಿ.
ನಿಮ್ಮ ಲ್ಯಾಪ್ ಟಾಪ್ ಅಥವಾ ಟಿವಿಯ ಎಲ್.ಸಿ.ಡಿ ಪರದೆಯ ಮೇಲಿರುವ ಗೀರನ್ನು ತೆಗೆಯಲು ಎರೇಸರ್ ಬಳಸಿ ಉಜ್ಜುವ ಮೂಲಕ ಇಲ್ಲವಾಗಿಸಬಹುದು.


Click it and Unblock the Notifications








