ಮೇಧಾವಿಗಳಲ್ಲಿರುವ ಈ ಸಾಮಾನ್ಯ 8 ಲಕ್ಷಣಗಳು ಅವರಿಗೇ ತಿಳಿದಿರುವುದಿಲ್ಲವಂತೆ!!
ನೀವು ಮೇಧಾವಿಗಳಾಗಿದ್ದು, ಮನೋ ದೌರ್ಬಲ್ಯದಿಂದ ಏನನ್ನೂ ಸಾಧಿಸಲು ಸಾಧ್ಯವಾಗದಿದ್ದರೆ, ಮೇಧಾವಿಗಳಲ್ಲಿ ಕಾಣುವ ಸಾಮಾನ್ಯ ಲಕ್ಷಣಗಳೂ ನಿಮ್ಮಲ್ಲೂ ಇವೆಯಾ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!
ಪ್ರಪಂಚದಲ್ಲಿ ಎಲ್ಲರೂ ಮೇಧಾವಿಗಳಾಗಲು ಸಾಧ್ಯವಿಲ್ಲ. ಆದರೆ, ಮೇಧಾವಿಗಳು ಹುಟ್ಟು ಪ್ರಪಂಚದಲ್ಲಿ ಎಂದೂ ಕಡಿಮೆಯಾಗಿಲ್ಲ ಎನ್ನುವ ಮಾತು ನೂರಕ್ಕೆ ನೂರರಷ್ಟು ನಿಜ ಎನ್ನಬಹುದು.! ಏಕೆಂದರೆ, ಎಲ್ಲರಿಗಿಂತ ವಿಭಿನ್ನವಾಗಿ ಅಸಮಾನ್ಯ ಬುದ್ದಿವಂತಿಕೆ ಹೊಂದುವವರ ಸಂಖ್ಯೆ ಭೂಮಿ ಮೇಲೆ ಹುಟ್ಟುತ್ತಲೇ ಇರುತ್ತದೆ.!
ಆದರೆ, ಹೀಗೆ ಹುಟ್ಟುವ ಎಷ್ಟೋ ಮೇಧಾವಿಗಳಲ್ಲಿ ಕೆಲವರು ಮಾತ್ರ ಬೆಳಕಿಗೆ ಬಂದರೆ, ಇನ್ನು ಕೆಲವರು ಬೆಳೆಯುತ್ತಾ ತಮ್ಮ ಮೇಧಾವಿ ಶಕ್ತಿಯನ್ನು ಅಡಗಿಸಿಟ್ಟಿಕೊಳ್ಳುತ್ತಾರಂತೆ.! ಇದರಿಂದ ಮೇಧಾವಿಯಾಗಿದ್ದವನೂ ಕೂಡ ಸಮಾಜದಲ್ಲಿ ಎಂದೂ ಗುರುತಿಸಿಕೊಳ್ಳದೇ ಉಳಿದುಕೊಳ್ಳುತ್ತಾನೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.!!

ಎಷ್ಟೋ ಮೇಧಾವಿಗಳು ಹೆಚ್ಚು ಬುದ್ದಿವಂತರಾಗಿದ್ದರೂ ಕೂಡ ಅವರು ಮರೆಯಲ್ಲಿರುವುದಕ್ಕೆ ಅವರ ಮನೋ ದೌರ್ಬಲ್ಯವೇ ಕಾರಣವಂತೆ.! ಹಾಗಾಗಿ, ನೀವು ಮೇಧಾವಿಗಳಾಗಿದ್ದು, ಮನೋ ದೌರ್ಬಲ್ಯದಿಂದ ಏನನ್ನೂ ಸಾಧಿಸಲು ಸಾಧ್ಯವಾಗದಿದ್ದರೆ, ಮೇಧಾವಿಗಳಲ್ಲಿ ಕಾಣುವ ಸಾಮಾನ್ಯ ಲಕ್ಷಣಗಳೂ ನಿಮ್ಮಲ್ಲೂ ಇವೆಯಾ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ತಮ್ಮೊಳಗೆ ತಾವು ಮಾತನಾಡುವುದು!!
ಮೇಧಾವಿಗಳು ಹೆಚ್ಚು ಬುದ್ದಿವಂತರಾಗಿದ್ದರೂ ಕೂಡ ಅವರು ಯಾವಾಗಲೂ ಒಂದು ವಿಷಯದ ಬಗ್ಗೆ ತಮ್ಮಲ್ಲಿ ತಾವು ಮಾತನಾಡುತಿರುತ್ತಾರಂತೆ. ಅದೇ ಸಮಯದಲ್ಲಿ ಆ ವಿಷಯದ ಬಗ್ಗೆ ಹತ್ತಾರು ರೀತಿಯಲ್ಲಿ ಯೋಚಿಸುತ್ತಿರುತ್ತಾರಂತೆ.!!

ಯಾವಾಗಲೂ ಒಂಟಿಯಾಗಿ, ಶಾಂತವಾಗಿರಬೇಕು
ಮೇಧಾವಿಗಳು ಯಾವಾಗಲೂ ಒಂಟಿಯಾಗಿ, ಶಾಂತವಾಗಿರಬೇಕು ಎಂದು ಬಯಸುತ್ತಾರಂತೆ. 10 ಜನರೊಂದಿಗೆ ಹೋಗುತ್ತಿದ್ದರೂ ಸಹ ತನ್ನ ಭಾವನೆಯಲ್ಲಿ ಬಹುಮಟ್ಟಿಗೆ ಒಂಟಿಯಾಗಿರಲು ಪ್ರಯತ್ನಿಸುತ್ತಾರೆ. ಅಂದರೆ ಇವ ಸಂಘ ಜೀವಿಯಲ್ಲ.!!

ನಿರುದ್ಯೋಗಿಗಳೂ ಇವರು!!
ಮೇಧಾವಿಗಳಿಗೆ ಯಾರ ಬಳಿಯೂ ಕೆಲಸ ಮಾಡಲು ಇಷ್ಟ ಇರುವುದಿಲ್ಲವಂತೆ.! ಒಂದು ವೇಳೆ ಹಣಕ್ಕಾಗಿ ಕೆಲಸ ಮಾಡುತ್ತಿದ್ದರೂ ಸಹ ಮಾಡುತ್ತಿರುವ ಉಧ್ಯೋಗದ ಮೇಲೆ ಅವರಿಗೆ ಶ್ರದ್ದೆ ಇರುವುದಿಲ್ಲವಂತೆ.!! ಅವರು ತನ್ನದೇ ಕಲ್ಪನೆಗಳಲ್ಲಿರುವಾಗ ಕೆಲಸದ ಬಗ್ಗೆ ಚಿಂತಿಸುವುದಿಲ್ಲವಂತೆ.!!

ಊಹಾತ್ಮಕ ಶಕ್ತಿ, ಸೃಜನಶೀಲತೆ
ಮೇಧಾವಿಗಳು ಯಾವುದೇ ವಿಷಯಗಳನ್ನಾದರೂ ಸಹ ಊಹೆ ಮಾಡಿಕೊಳ್ಳುವ ಊಹಾತ್ಮಕ ಶಕ್ತಿ ಹೊಂದಿರುತ್ತಾರಂತೆ. ಊಹೆ ಮಾಡಿದ ವಿಷಯಗಳನ್ನು ಸೃಜನಾತ್ಮಕವಾಗಿ ರೂಪಿಸಿ ಕಾರ್ಯ ರೂಪಕ್ಕೆ ತರಬಲ್ಲ ಶಕ್ತಿ ಅವರಿಗೆ ಇರುತ್ತದೆಯಂತೆ.!!

ಫ್ಯಾಷನ್ ಇಷ್ಟವಿಲ್ಲದಿರುವುದು!!
ಹೆಚ್ಚು ಮೇಧಾವಿಗಳಿಗೆ ಫ್ಯಾಷನ್ ಎಂಬುದರ ಮೇಲೆ ಕಾಳಜಿಯೇ ಇರುವುದಿಲ್ಲವಂತೆ. ಕನಿಷ್ಠ ಗಡ್ಡ ಮಾಡುವಿಕೆ ಕೂಡ ಟೈಮ್ ವೇಸ್ಟ್ ಎಂದು ಪರಿಗಣಿಸುವ ಅವರು ಯಾವುದೇ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳರು.! ಏಕೆಂದರೆ, ಅವರ ಮೆದುಳು ಆ ಸಮಯದಲ್ಲಿ ಅತಿ ಹೆಚ್ಚು ಕೆಲಸ ಮಾಡುತ್ತಿರುತ್ತದೆಯಂತೆ.!!

ಹೆಚ್ಚು ಕೇಳಿಸಿಕೊಳ್ಳುತ್ತಾರೆ.!!
ಮೇಧಾವಿಗಳು ಪ್ರಪಂಚವನ್ನು ನೋಡಿ, ಕೇಳಿ ಕಲಿಯುತ್ತಾರೆ. ಇವರಿಗೆ ಹೊಸ ಹೊಸ ವಿಷಯ ಕಲಿಯಲು ಆಸಕ್ತಿ. ಆದ್ದರಿಂದ ಇವರಿಗೆ ಹೆಚ್ಚು ಮಾತನಾಡುವ ಉತ್ಸಾಹ ಇರುವುದಿಲ್ಲವಂತೆ. ಇವರ ಬಳಿ ಯಾರೂ ಏನೇ ವಾದ ಮಾಡಿದರೂ ಸಹ ಅವರ ಬಳಿ ಹೆಚ್ಚು ವಾದ ಮಾಡಲು ಮೇಧಾವಿಗಳು ಇಷ್ಟಪಡುವುದಿಲ್ಲವಂತೆ.!!

ಕಲ್ಮಶ ಇಲ್ಲದೆ ನಗುತ್ತಾರಂತೆ!!
ಮೇಧಾವಿಗಳ ನಗು ತುಂಬಾ ಪರಿಪೂರ್ಣವಾಗಿ ಕಲ್ಮಶವಿರದ ನಗುವಾಗಿರುತ್ತದೆಯಂತೆ. ಚಿಕ್ಕ ಚಿಕ್ಕ ಜೋಕ್ಸ್ಗಳಿಗೂ ಸಹ ಚೆನ್ನಾಗಿ ಖುಷಿಪಡುವ ಇವರು ಖಿನ್ನತೆ ಇಲ್ಲದೆ ಶಾಂತವಾಗಿರುತ್ತಾರೆ.!! ಆದರೆ, ಭಾವನಾ ಪ್ರಪಂಚಕ್ಕೆ ಹೆಚ್ಚು ಬೆಲೆಯನ್ನು ನೀಡುತ್ತಿರುತ್ತಾರೆ.!!

ಬೇರೆಯವರ ಅವಲಂಬನೆ!!
ತಮ್ಮ ಕೆಲಸವನ್ನು ತಾವೆ ಮಾಡದವರು ಎಂದರೆ ಮೇಧಾವಿಗಳು ಮಾತ್ರ.! ಇವರು ಇವರ ಕೆಲಸಕ್ಕಾಗಿ ಬೇರೆಯವರನ್ನು ಅವಲಂಬಿಸುತ್ತಾರಂತೆ. ತನ್ನ ತಲೆಗೆ ಮೀರಿದ ಭಾದ್ಯತೆಯನ್ನು ತನ್ನ ತಲೆಯ ಮೇಲೆ ಹಾಕಿಕೊಳ್ಳಲು ಮೇಧಾವಿಗಳು ಎಂದೂ ಇಷ್ಟಪಡುವುದಿಲ್ಲವಂತೆ.!!

ಅವರಿಗೆ ಗೊತ್ತಿರುವುದಿಲ್ಲವಂತೆ.!!
ಮೇಧಾವಿಗೆ ತಾನು ಬುದ್ದಿವಂತ ಎಂದು ತಿಳಿದಿದ್ದರೂ ಸಹ ನಾನು ಏನಾದರೂ ಸಾಧಿಸುತ್ತೇನೆ ಎಂಬುದು ಅವರಿಗೆ ಗೊತ್ತಿರುವುದಿಲ್ಲವಂತೆ. ತನ್ನ ಸೋಂಬೇರಿತನದಿಂದ ಎಲ್ಲವನ್ನು ಆಲಕ್ಷ್ಯದಿಂದ ಕಾಣುವ ಮೇಧಾವಿಗೆ ಕಷ್ಟಗಳು ಎದುರಾದರೆ ಮಾತ್ರ ಸಾಧನೆಗೆ ಮುಂದಾಗುತ್ತಾನಂತೆ.!!


Click it and Unblock the Notifications








