ವಿಜ್ಞಾನ ಲೋಕವನ್ನೇ ಬೆಚ್ಚಿ ಬೀಳಿಸಿದ ಅಸಾಮಾನ್ಯ ವ್ಯಕ್ತಿಗಳು
ಈ ಸುಂದರ ವಿಶ್ವ ವಿಸ್ಮಯಗಳ ಖಜಾನೆಯನ್ನೇ ತನ್ನಲ್ಲಿ ಇರಿಸಿಕೊಂಡಿದೆ. ನೀವು ಆಳವಾಗಿ ಅಭ್ಯಸಿಸಿದಷ್ಟೂ ನಿಮಗೆ ನಿಗೂಢ ಜಗತ್ತೇ ತೆರೆದುಕೊಳ್ಳಬಹುದು. ಅಂತಹುದೇ ನಿಗೂಢತೆಯನ್ನೊಳಗೊಂಡ ಮಹಾನ್ ವ್ಯಕ್ತಿಗಳ ಬಗ್ಗೆ ನಾವಿಂದು ಇಂದಿನ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ. ತಮ್ಮ ಸಾಧನೆಯಿಂದ ಹೆಸರುವಾಸಿಯಾಗಿರುವ ಈ ಮಹಾನ್ ವ್ಯಕ್ತಿಗಳು ಅಸಾಧಾರಣರಾಗಿದ್ದು ತಮ್ಮ ಅದ್ಭುತ ಸಾಧನಗಳಿಂದ ಮಹಾನ್ ಎಂದೇ ಪ್ರಸಿದ್ಧರಾಗಿದ್ದಾರೆ.
ಓದಿರಿ: ಫನ್ನಿ ಫೋಟೋ ನೋಡಿ ಎಂಜಾಯ್ ಮಾಡಿ!
ವಿಜ್ಞಾನ ಲೋಕಕ್ಕೆ ಸವಾಲೆಸೆದಿರುವ ಆ ವ್ಯಕ್ತಿಗಳು ಮತ್ತು ಅವರ ಸಾಧನೆಗಳನ್ನು ನಾವಿಲ್ಲಿ ತಿಳಿಸುತ್ತಿದ್ದು ನೀವು ಅವರ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

#1
ವಿಫ್ ಹಾಫ್ ಮಾಡಿದಂತೆ ಮಂಜುಗಡ್ಡೆಯ ಮೇಲೆ ನೀವು ಕುಳಿತುಕೊಳ್ಳಲು ಹೋದರೆ ನಿಮಗೆ ಸಾವು ಖಂಡಿತ. ಹೌದು ಈತ ಮಂಜುಗಡ್ಡೆಯ ಮೇಲೆ ಕುಳಿತುಕೊಳ್ಳುವ ಸಾಮರ್ಥ್ಯಕ್ಕೆ ಇಡಿಯ ವಿಜ್ಞಾನವೇ ಬೆರಗಾಗಿ ಹೋಗಿದೆ. ಆತನ ಸಾಮರ್ಥ್ಯಕ್ಕೆ ಖಂಡಿತ ಬೆರಗಾಗಲೇಬೇಕು.

#2
ಅಂಬಾ ಮಠದ ಭಕ್ತನಾಗಿರುವ ಪ್ರಹ್ಲಾದ ಜಾನಿ 1940 ರಿಂದ ಆಹಾರವನ್ನು ಸೇವಿಸದೇ ಬದುಕಿತ್ತಿದ್ದಾನೆ ಎಂದು ತಿಳಿಸಿದ್ದಾನೆ. ಇವನು ಹೇಗೆ ಬದುಕುತ್ತಿದ್ದಾನೆ ಎಂಬುದು ನಿಗೂಢವಾಗಿದೆ. ನೀರು ಮತ್ತು ಆಹಾರವಿಲ್ಲದೆ ಈತ ಆರೋಗ್ಯವಂತನಾಗಿದ್ದಾನೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ.

#3
ಮಲೇಷಿಯಾದ ಈ ವ್ಯಕ್ತಿ ಎಲ್ಲಾ ಟೂತ್‌ಪೇಸ್ಟ್ ಜಾಹೀರಾತುಗಳಿಗೆ ಸಹಿ ಹಾಕಿದ್ದಾರೆ ಏಕೆಂದರೆ ಬಲಶಾಲಿ ಹಲ್ಲುಗಳನ್ನು ಈತ ಹೊಂದಿರುವುದಕ್ಕೆ. ಏಳು ಕೋಚ್ ರೈಲುಗಾಡಿಯನ್ನು ತನ್ನ ಹಲ್ಲಿನಿಂದ ಎಳೆದ ಸಾಧನೆಗೆ ರಥಾಕೃಷ್ಣನನ್ ಖ್ಯಾತರಾಗಿದ್ದಾರೆ.

#4
ಸಿಂಹಗಳೊಂದಿಗೆ ಮಾತನಾಡಬಲ್ಲ ಅದ್ಭುತ ಸಿದ್ಧಿ ಕೆವಿನ್‌ಗೆ ಇದೆ. ಸಿಂಹಗಳನ್ನು ಪಳಗಿಸುವುದು ಅವುಗಳೊಂದಿಗೆ ಇರುವುದು, ನೃತ್ಯಮಾಡಿಸುವುದು, ಆಟವಾಡಿಸುವುದು ಮೊದಲಾದುವನ್ನು ಈತ ಕರಾತಲಮಲಕವಾಗಿ ಮಾಡಬಲ್ಲ.

#5
ಡಾಲ್ಫಿನ್‌ಗಳಂತೆ ತನ್ನ ಕಣ್ಣುಗಳಿಲ್ಲದೆ ವಸ್ತುಗಳನ್ನು ನೋಡಬಲ್ಲವನು. ವಸ್ತು ಎಲ್ಲಿದೆ ಎಂಬುದನ್ನು ನಿಖರವಾಗಿ ಈತ ತಿಳಿಸಬಲ್ಲ. ಆದರೆ 2009 ರಲ್ಲಿ ಈತ ಕ್ಯಾನ್ಸರ್‌ನಿಂದ ಮರಣ ಹೊಂದಿದ.

#6
ಭೂಮಿಯ ಮೇಲಿರುವ ರಬ್ಬರ್ ಹುಡುಗ ಡೇನಿಯಲ್. ಈತ ತನ್ನ ದೇಹವನ್ನು ಹೇಗೆ ಬೇಕಾದರೂ ಮಡಚಬಲ್ಲ. ಅವನ ದೇಹದಲ್ಲಿ ಮೂಳೆಗಳೇ ಇಲ್ಲವೇನೋ ಎಂಬಂತೆ ತನ್ನ ಸಾಧನೆಯನ್ನು ಈತ ಮಾಡಬಲ್ಲ.

#7
ಅತ್ಯುನ್ನತ ಕಲಾವಿದನಾಗಿರುವ ಸ್ಟೀಫನ್ ಮನಸ್ಸಿನಲ್ಲಿ ಮೂಡಿರುವುದನ್ನು ಹಾಳೆಯಲ್ಲಿ ಬಿಡಿಸುವ ಕಲೆಯನ್ನು ಹೊಂದಿರುವಾತ. ಅದ್ಭುತ ಫೋಟೋಗ್ರಾಫಿಕ್ ಜ್ಞಾನವನ್ನು ಈತ ಹೊಂದಿದ್ದಾನೆ

#8
ವಿಯೆಟ್ನಾಮ್‌ನ ನಾಗೊಕ್ ಥಾಯ್ 1973 ರಿಂದ ನಿದ್ದೆಯೇ ಮಾಡಿಲ್ಲವಂತೆ. ಇನ್‌ಸೋಮ್ನಿಯಾ ಎಂದೇ ಕರೆಯಲಾಗಿರುವ ಈತನ ನಿದ್ದೆ ಮಾಡದ ಕಾಯಿಲೆಗೆ ಯಾವುದೇ ಮದ್ದೇ ಇಲ್ಲವಂತೆ ಹಾಗೂ ಈತ ಆರೋಗ್ಯವಂತನಾಗಿದ್ದಾನೆ ಕೂಡ. ಈತನಿಗೆ ಆಯಾಸವುಂಟಾಗುವುದೇ ಇಲ್ಲವಂತೆ.

#9
ಟುಮೊ ಎಂಬ ಸಿದ್ಧಿಯಿಂದ ಈ ಬೌದ್ಧ ಭಿಕ್ಷುಗಳು ತಮ್ಮ ಕಾಲ್ಬೆರಳುಗಳ ತಾಪಮಾನವನ್ನು ಹೆಚ್ಚಿಸಿಕೊಳ್ಳುವವರಂತೆ. ಸಿಕ್ಕೀಮ್‌ನ ಈ ಭಿಕ್ಷುಗಳು ಮನಸ್ಸಿನ ಹತೋಟಿಯ ಮೇಲೆ ಚಯಾಪಚಯ ಕ್ರಿಯೆಯನ್ನು ಕಡಿಮೆಗೊಳಿಸುವ ತಾಕತ್ತುಳ್ಳವರು. ಯೋಗ ಮತ್ತು ಧ್ಯಾನದಿಂದ ಈ ಸಿದ್ಧಿಯನ್ನು ಇವರು ಪಡೆದುಕೊಂಡಿದ್ದಾರೆ.

#10
ಈಕೆ ಎಕ್ಸರೇ ದೃಷ್ಟಿಯನ್ನು ಹೊಂದಿದ್ದು ಜನರ ತ್ವಚೆಯ ಮೂಲಕ ನೋಡಬಲ್ಲವಳಾಗಿದ್ದಾಳೆ. ಈ ರಷ್ಯಾದ ಹುಡುಗಿ ನಿಜಕ್ಕೂ ವಿಜ್ಞಾನ ಲೋಕಕ್ಕೆ ಸಡ್ಡುಹೊಡೆದಿದ್ದಾಳೆ.

#11
ಈತ ಅದ್ಭುತ ಮೆದುಳಿನ ಶಕ್ತಿಯನ್ನು ಪಡೆದುಕೊಂಡಿರುವ ವ್ಯಕ್ತಿಯಾಗಿದ್ದು ಯಾವುದೇ ಕ್ಲಿಷ್ಟಕರ ಸಮಸ್ಯೆಯನ್ನು ಸರಳವಾಗಿ ಬಿಡಿಸಬಲ್ಲವನಾಗಿದ್ದಾನೆ. ಈತ ಇಂಗ್ಲೀಷ್, ಫ್ರೆಂಚ್, ಫಿನ್ನಿಶ್, ಜರ್ಮನ್, ಸ್ಪ್ಯಾನಿಶ್, ಲಿಥುಯಾನಿಯನ್, ರೊಮಾನಿಯನ್, ಇಸ್ಟೋನಿಯನ್ ಭಾಷೆಗಳನ್ನು ಮಾತನಾಡಬಲ್ಲವನು.


Click it and Unblock the Notifications








