ತಾನೆ ದುಡಿದು ವಿಶ್ವದ ಕಿರಿಯ ನಂಬರ್ 1 ಶ್ರೀಮಂತನಾದ 26 ವರ್ಷದ ಯುವಕ!!..ಆಸ್ತಿ ಎಷ್ಟು?
ಪ್ರಸ್ತುತ ಜಗತ್ತಿನ ಅತಿ ಕಿರಿಯ ವಯಸ್ಸಿನ ಶ್ರೀಮಂತನಾಗಿ ಬೆಳೆದಿರುವ ಯುವಕನೋರ್ವನು ಶಿಕ್ಷಣಕ್ಕೆ ಅರ್ಧಕ್ಕೆ ಗುಡ್ ಬೈ ಹೇಳಿ ಟೆಕ್ ಪ್ರಪಂಚದಲ್ಲಿ ಹೇಗೆಲ್ಲಾ ಬೆಳೆದುಬಂದ?. ಅವನು ಮಾಡಿದ ಸಾಹಸವೇನು?.
ಶಿಕ್ಷಣವನ್ನು ಅರ್ಧಕ್ಕೆ ತ್ಯಜಿಸಿದ ಹಲವು ಸಾಧಕರು ಇಂದು ಬ್ಯುಸಿನೆಸ್ ಮ್ಯಾನ್, ಮಾಹಾನ್ ವ್ಯಕ್ತಿಗಳು ಹಾಗೂ ವಿಶ್ವ ಶ್ರೇಷ್ಟರಾದ ಎಷ್ಟು ಉದಾಹರಣೆಗಳನ್ನು ನೀವು ಕೇಳಿಯೇ ಇರುತ್ತಿರಾ ಅಲ್ಲವೇ?. ಅಂತಹುದೇ ಮತ್ತೊಂದು ಯಶೋಗಾಥೆಯ ಟೆಕ್ ಬ್ಯುಸಿನೆಸ್ ಮ್ಯಾನ್ ಕಥೆಯನ್ನು ನಾವು ಇಂದು ನಿಮಗೆ ತಿಳಿಸಲಿದ್ದೇವೆ.!!
ಇಂದು ಪ್ರಸ್ತುತ ಜಗತ್ತಿನ ಅತಿ ಕಿರಿಯ ವಯಸ್ಸಿನ ಶ್ರೀಮಂತನಾಗಿ ಬೆಳೆದಿರುವ ಯುವಕನೋರ್ವನು ಶಿಕ್ಷಣಕ್ಕೆ ಅರ್ಧಕ್ಕೆ ಗುಡ್ ಬೈ ಹೇಳಿ ಟೆಕ್ ಪ್ರಪಂಚದಲ್ಲಿ ಹೇಗೆಲ್ಲಾ ಬೆಳೆದುಬಂದ?. ಅವನು ಮಾಡಿದ ಸಾಹಸವೇನು?. ನೀವು ಸಹ ಉಧ್ಯಮಿಯಾಗಲು ಈ ಕಥೆ ಹೇಗೆ ಸ್ಪೂರ್ತಿಯಾಗಬಹುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ವಿಶ್ವದ ಕಿರಿಯ ಶ್ರೀಮಂತರ ಜಾನ್.!!
ಜಾಗತಿಕ ಸಂಸ್ಥೆ ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ವಿಶ್ವದ ಕಿರಿಯ ವಯಸ್ಸಿನ ನಂಬರ್ ಒನ್ ಶ್ರೀಮಂತ ಆಗಿ ಹೊರಹೊಮ್ಮಿರುವ, ಹಾರ್ವರ್ಡ್‌ನಲ್ಲಿ ಶಿಕ್ಷಣ ಪಡೆಯುತ್ತಾ ಅರ್ಧಕ್ಕೆ ಗುಡ್ ಬೈ ಹೇಳಿದ ಜಾನ್ ಕೊಲ್ಲಿಸನ್ ಅವರು ಈ ಯಶೋಗಾಥೆಯ ಹೀರೊ.!!

ಪೇಮೆಂಟ್ ಕಂಪೆನಿ ಒಡೆಯ!!
ಜಾನ್ ಕೊಲ್ಲಿಸನ್ ಐರ್ಲೆಂಡ್ ದೇಶದ ಮೂಲದವನಾಗಿದ್ದು, ತನ್ನದೇ ಇಂಟರ್‌ನೆಟ್ ಆಧಾರಿತ ಪೇಮೆಂಟ್ ಕಂಪೆನಿಗೆ ಒಡೆಯನಾಗಿದ್ದಾನೆ.!ಇಂದು ವಿಶ್ವದಲ್ಲಿ ಬೃಹದ್ದಾಕಾರವಾಗಿ ಬೆಳೆದುನಿಂತಿರುವ 'ಸ್ಟ್ರೈಪ್' ಕಂಪೆನಿಯ ಸ್ಥಾಪಿಸಿ ಬೆಳೆಸಿದ ಈತ ಇದೀಗ ಪ್ರಪಂಚದ ನಂಬರ್ ಒನ್ ಕಿರಿಯ ಶ್ರೀಮಂತ.!!

ಜಾನ್ ಆಸ್ತಿ ಎಷ್ಟು?
'ಸ್ಟ್ರೈಪ್' ಅನ್ನು ಸ್ಥಾಪಿಸಿ ಅದರಿಂದ ಕಿರಿಯ ವಯಸ್ಸಿನ ನಂಬರ್ ಒನ್ ಶ್ರೀಮಂತ ಎಂದು ಹೆಸರು ಗಳಿಸಿದ್ದರೆ ಪ್ರಸ್ತುತ ಅವನ ಆಸ್ತಿ ಎಷ್ಟಿರಬಹುದು. ನಿಮಗೆ ಗೊತ್ತಾ? ಜಾನ್ ಕೊಲ್ಲಿಸನ್ 7.76 ಲಕ್ಷ ಕೋಟಿ ರೂಪಾಯಿಯಷ್ಟು ಅಷ್ಟು ಆಸ್ತಿ ಹೊಂದಿದ್ದಾನೆ.!! ಅಂದರೆ, ಭಾರತದ ನಂಬರ್ ಒನ್ ಶ್ರೀಮಂತ ಅಂಬಾನಿಗಿಂತ ಮೂರುಪಟ್ಟು.!!

ಸ್ಟೈಪ್ ಕಂಪೆನಿ ಹುಟ್ಟಿದ್ದು ಹೇಗೆ?
ಜಾನ್ ಮತ್ತು ಆತನ ಸಹೋದರ ಪ್ಯಾಟ್ರಿಕ್ ಕೊಲ್ಲಿಸನ್ ಅವರಿಗೆ ಪೇಮೆಂಟ್ ಕಂಪೆನಿ ಶುರುಮಾಡುವ ಆಲೋಚನೆ ಹುಟ್ಟಿದ್ದು, ಅವರು ದಕ್ಷಿಣ ಆಫ್ರಿಕಾಗೆ ಪ್ರವಾಸಕ್ಕೆ ಹೋಗಿದ್ದಾಗಂತೆ. ಅವರ ಪ್ರವಾಸದಲ್ಲಿ ಪೇಮೆಂಟ್ ಆಪ್ ಅನುಕೂಲತೆ ಬಗ್ಗೆ ತಿಳಿದು ಸ್ಟೈಪ್ ಕಂಪೆನಿ ಹುಟ್ಟಿಹಾಕಿದ್ದಾರೆ. ಈ ಕಂಪೆನಿ ಇದೀಗ 25 ಬೇರೆಬೇರೆ ದೇಶಗಳಲ್ಲಿ , ವಾರ್ಷಿಕ 9.2 ಶತಕೋಟಿ ಯುಎಸ್ ಡಾಲರ್ ವಹಿವಾಟು ನಡೆಸುತ್ತಿದೆ.!!

ನಿಮಗೂ ಸ್ಪೂರ್ತಿಯಾಗಬಹುದು!!
ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದವರು ತಮ್ಮ ಬುದ್ದಿ ಶಕ್ತಿಯಿಂದ ಬೆಳೆದುನಿಂದ್ದಾರೆ. ನಮ್ಮಲ್ಲಿಯೂ ಬುದ್ದಿವಂತರಿದ್ದರೂ ಸಹ ಅವರಿಗೆ ಸರಿಯಾದ ಅವಕಾಶ ಸಿಗುವುದಿಲ್ಲ ಎನ್ನುವ ಕೊರಗಿದೆ.! ಆದರೆ, ನಿಮ್ಮ ಬುದ್ದಿಶಕ್ತಿ ಎಂದೂ ಸೂಲುವುದಿಲ್ಲ. ಸರಿಯಾದ ದಾರಿಯಲ್ಲಿ ಹೆಜ್ಜೆಯನ್ನಿಡಿ.!!


Click it and Unblock the Notifications








