ಮಮ್ಮಿ ಸಮಾಧಿಯಲ್ಲಿ ಅಡಿಡಾಸ್ ಶೂ ಪತ್ತೆ

By Shwetha
|

ಮಧ್ಯ ಏಷ್ಯಾ ಪ್ರಾಂತ್ಯದಲ್ಲಿ ಮಮ್ಮಿಯ ಸಮಾಧಿಯೊಂದು ದೊರಕಿದ್ದು ಇದು ಅಡಿಡಾಸ್ ಶೂವನ್ನು ಧರಿಸಿದೆ. ಇದು ಟರ್ಕಿಕ್ ಸಮಾಧಿಯಾಗಿದ್ದು ಇದೇ ಮೊದಲ ಬಾರಿಗೆ ದೊರಕಿರುವಂಥದ್ದು. 800 ವರ್ಷಗಳಷ್ಟು ಹಳೆಯ ಮೊಬೈಲ್ ಫೋನ್ ದೊರಕಿ ಇಂಟರ್ನೆಟ್‌ನಲ್ಲಿ ಅದು ವೈರಲ್ ಆದಂತೆಯೇ ಮಮ್ಮಿಯ ಅಡಿಡಾಸ್ ಶೂ ಹೆಚ್ಚಿನ ಸಂಚಲನವನ್ನುಂಟು ಮಾಡಿದೆ.

ಬನ್ನಿ ಇಂದಿನ ಲೇಖನದಲ್ಲಿ ಮಮ್ಮಿಯೊಂದಿಗೆ ದೊರಕಿರುವ ಇತರ ವಸ್ತುಗಳ ಮಾಹಿತಿಯನ್ನು ನಾವು ನೀಡುತ್ತಿದ್ದು ಇದು ನಿಮಗೆ ಇನ್ನಷ್ಟು ಆಶ್ಚರ್ಯವನ್ನುಂಟು ಮಾಡಲಿದೆ.

#1

#1

ಇದು ಮಹಿಳೆಯ ಸಮಾಧಿಯಾಗಿದ್ದು ಸಮಾಧಿಯ ಮೇಲೆ ಯಾವುದೇ ಕಮಾನುಗಳಿಲ್ಲ ಇದರಿಂದ ಇದು ನಿಚ್ಚಳವಾಗಿ ಮಹಿಳೆಯದ್ದು ಎಂಬುದು ತಿಳಿಯುತ್ತದೆ. ಇದರೊಂದಿಗೆ ಕುದುರೆ ಕೂಡ ದೊರಕಿದ್ದು ಒಂದು ಕೈ ಮತ್ತು ಕಾಲು ತಜ್ಞರಿಗೆ ಪತ್ತೆಯಾಗಿದೆ.

#2

#2

ಇದೇ ಹಿಂದೆ 800 ವರ್ಷಗಳಷ್ಟು ಹಳೆಯ ಮೊಬೈಲ್ ಫೋನ್ ದೊರಕಿದ್ದು ಆಧುನಿಕ ನಾಗರೀಕತೆಗೆ ಇದೆಲ್ಲವೂ ಸಾಕ್ಷಿ ಎಂದೆನಿಸಿದೆ.

#3

#3

ನಾವೀಗ ದೊರಕಿರುವ ದೇಹವನ್ನು ಸೂಕ್ಷ್ಮವಾಗಿ ಅನಾವರಣಗೊಳಿಸುತ್ತಿದ್ದು ಇದು ಪೂರ್ಣಗೊಂಡ ಬಳಿಕ ಲಿಂಗದ ಬಗ್ಗೆ ತಜ್ಞರು ನಿಖರವಾಗಿ ತಿಳಿಸಲಿದ್ದಾರೆ ಎಂಬುದಾಗಿ ಸಂಶೋಧಕರು ಹೇಳಿದ್ದಾರೆ.

#4

#4

ಸಮಾಧಿಯಲ್ಲಿ ಜೀನು, ಕಡಿವಾಣ, ಮಣ್ಣಿನ ಹೂದಾನಿ, ಮರದ ಬಟ್ಟಲು, ತೊಟ್ಟಿ, ಕಬ್ಬಿಣದ ಪಾತ್ರೆ ಮತ್ತು ಸಂಪೂರ್ಣ ಕುದುರೆ ಇದೆ.

#5

#5

ತುರ್ಕಿಕ್ಸ್‌ಗಳ ನಂಬಿಕೆ ಮತ್ತು ಆಚರಣೆಗಳು ಇದರಿಂದ ವಿಷದವಾಗಿ ತಿಳಿಯುತ್ತಿದ್ದು ಸಮಾಧಿಯನ್ನು ಹೇಗೆ ಹೂಳುತ್ತಿದ್ದರು ಎಂಬುದು ಅರಿವಾಗುತ್ತದೆ.

#6

#6

ಕುದುರೆಯನ್ನು ಉದ್ದೇಶಪೂರ್ವಕಾಗಿ ತ್ಯಾಗಮಾಡಲಾಗಿದೆ ಎಂಬುದು ತಿಳಿಯುತ್ತದೆ.

#7

#7

ಇದು ನಾಲ್ಕರಿಂದ ಎಂಟು ವರ್ಷದೊಳಗಿರುವ ಕುದುರೆ ಎಂಬುದು ತಿಳಿಯುತ್ತದೆ.

#8

#8

ಅಂತೂ ಈ ಚಿತ್ರಗಳು ಇಂಟರ್ನೆಟ್‌ನಲ್ಲಿ ಭಾರೀ ಸದ್ದುಗದ್ದಲವನ್ನುಂಟು ಮಾಡುತ್ತಿದೆ.

Best Mobiles in India

English summary
AN ANCIENT mummy unearthed in Mongolia has been discovered wearing apparently cutting-edge footwear.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X