ವಿಶ್ವದಲ್ಲೇ ಅತಿ ಸುಲಭ ಮತ್ತು ಕೆಟ್ಟ ಪಾಸ್‌ವರ್ಡ್ ಯಾವುದು ಗೊತ್ತಾ?..ಟಾಪ್ 10 ಲೀಸ್ಟ್ ಇಲ್ಲಿದೆ!!
ಆನ್‌ಲೈನ್ ಪ್ರಪಂಚದಲ್ಲಿ ಪಾಸ್‌ವರ್ಡ್‌ಗಳೇ ಕೀಲಿಕೈಗಳಾಗಿರುವುದರಿಂದ, ನೂರಾರು ಆನ್‌ಲೈನ್ ಸೇವೆಗಳನ್ನು ಬಳಸುತ್ತಿದ್ದರೂ ಕೂಡ ಪ್ರತಿಯೊಂದರ ಪಾಸ್‌ವರ್ಡ್‌ಗಳನ್ನು ನೆನಪಿಟ್ಟಿಕೊಳ್ಳುವುದೇ ಡಿಜಿಟಲ್ ಪ್ರಪಂಚದಲ್ಲಿ ಅತ್ಯಂತ ಸೇಫ್ ಬದುಕು ಎನ್ನಬಹುದು
ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್, ಎಟಿಎಂ, ಆನ್‌ಲೈನ್ ಬ್ಯಾಂಕಿಂಗ್, ಫೇಸ್‌ಬುಕ್, ಡಿಜಿ ಲಾಕರ್, ವೈ-ಫೈ, ಫೋನ್, ಲ್ಯಾಪ್‌ಟಾಪ್, ಇ-ಮೇಲ್, ಟ್ವಿಟರ್...ಹುಫ್ ಹೀಗೆ ಪಟ್ಟಿ ಮಾಡುತ್ತಾ ನಾವು ಬಳಸುವ ಡಿಜಿಟಲ್ ಪ್ರಪಂಚದ ವಿಸ್ತಾರಕ್ಕೆ ಮಿತಿಯಿಲ್ಲ. ಆದರೆ, ಈ ಸೇವೆಗಳನ್ನು ಬಳಸಲು ಮಾತ್ರ ಮನುಷ್ಯನಿಗೆ ಮಿತಿ ಇದೆ.!!
ಆನ್‌ಲೈನ್ ಪ್ರಪಂಚದಲ್ಲಿ ಪಾಸ್‌ವರ್ಡ್‌ಗಳೇ ಕೀಲಿಕೈಗಳಾಗಿರುವುದರಿಂದ, ನೂರಾರು ಆನ್‌ಲೈನ್ ಸೇವೆಗಳನ್ನು ಬಳಸುತ್ತಿದ್ದರೂ ಕೂಡ ಪ್ರತಿಯೊಂದರ ಪಾಸ್‌ವರ್ಡ್‌ಗಳನ್ನು ನೆನಪಿಟ್ಟಿಕೊಳ್ಳುವುದೇ ಡಿಜಿಟಲ್ ಪ್ರಪಂಚದಲ್ಲಿ ಅತ್ಯಂತ ಸೇಫ್ ಬದುಕು ಎನ್ನಬಹುದು.! ಆದರೆ, ಮನುಷ್ಯ ಎಷ್ಟೂ ಪಾಸ್‌ವರ್ಡ್ ಅಂತ ನೆನಪಿಟ್ಟುಕೊಳ್ಳಲು ಸಾಧ್ಯ?

ಹಾಗಾಗಿಯೇ, ಜನರು ಹಲವು ಪಾಸ್‌ವರ್ಡ್‌ಗಳನ್ನು ನೆನಪಿಡಲು ಸಾಧ್ಯವಾಗದೇ ಸುಲಭವಾಗಿ ನೆನಪಿಟ್ಟುಕೊಳ್ಳಲು ಸಾಧ್ಯವಿರುವಂತಹ ಪಾಸ್‌ವರ್ಡ್‌ಗಳನ್ನೇ ಹೆಚ್ಚಾಗಿ ಬಳಸುತ್ತಿದದ್ದಾರೆ.! ಇಂತ ಪಾಸ್‌ವರ್ಡ್‌ಗಳನ್ನು ವಿಶ್ವದಲ್ಲೇ ಅತಿ ಸುಲಭವಾದ ಮತ್ತು ಕೆಟ್ಟ ಪಾಸ್‌ವರ್ಡ್‌ಗಳು ಎಂದು ಕರೆದಿದ್ದಾರೆ.! ಹಾಗಾದರೆ, ವಿಶ್ವದಲ್ಲಿಯೇ ಟಾಪ್ 10 ಕೆಟ್ಟ ಪಾಸ್‌ವರ್ಡ್‌ಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ವಿಶ್ವ ಅತಿ ಕೆಟ್ಟ ಪಾಸ್‌ವರ್ಡ್!!
ಪಾಸ್‌ವರ್ಡ್‌ಗೆ ಕನಿಷ್ಠ ಆರು ಅಕ್ಷರಗಳು ಇರಬೇಕು ಎಂಬ ನಿಯಮ ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಕಾಣಿಸಿಕೊಂಡ ಕೂಡಲೇ ಹಿಂದೆ-ಮುಂದೆ ನೋಡದೇ 123456 ಎಂದು ಹಲವರು ಒತ್ತುತ್ತಿದ್ದಾರೆ. ಆದರೆ, ನಿಮಗೆ ಗೊತ್ತಾ? ವಿಶ್ವದಲ್ಲೇ ಅತಿ ಸುಲಭವಾದ ಮತ್ತು ಕೆಟ್ಟ ಪಾಸ್‌ವರ್ಡ್ ಇದೇ!!

ಎರಡನೇ ಅತಿ ಕೆಟ್ಟ ಪಾಸ್‌ವರ್ಡ್!!
ಅತಿ ಬುದ್ದಿವಂತಿಕೆಯೂ ಕೆಲವೊಮ್ಮೆ ಮೂರ್ಖತನಕ್ಕೆ ಕಾರಣವಾಗಬಹುದು ಎನ್ನುವುದಕ್ಕೆ ವಿಶ್ವದ ಎರಡನೇ ಅತಿ ಕೆಟ್ಟ ಪಾಸ್‌ವರ್ಡ್ ಉದಾಹರಣೆಯಾಗಬಹುದು. ಏಕೆಂದರೆ, ‘PASSWORD'! ಎಂಬ ಪದವನ್ನೇ ಹಲವು ಬುದ್ಧಿವಂತರು ತಮ್ಮ ಖಾತೆಗಳಿಗೆ ಇಟ್ಟು ತಾವು ಬುದ್ದಿವಂತರು ಎಂದುಕೊಳ್ಳುತ್ತಾರೆ.! ಇದು ಎರಡನೇ ಅತಿ ಕೆಟ್ಟ ಪಾಸ್‌ವರ್ಡ್!!

ಮೂರನೇ ಅತಿ ಕೆಟ್ಟ ಪಾಸ್‌ವರ್ಡ್!!
ಪಾಸ್‌ವರ್ಡ್‌ಗೆ ಕನಿಷ್ಠ ಆರು ಅಕ್ಷರಗಳು ಇರಬೇಕು ಎಂಬ ನಿಯಮ ಮುರಿಯುವವರು ವಿಶ್ವದ ಮೂರನೇ ಅತಿ ಕೆಟ್ಟ ಪಾಸ್‌ವರ್ಡ್ ಬಳಸುತ್ತಾರೆ. ಹೇಳಿದ ಕೂಡಲೇ ಆರು ಅಂಕಿಗಳನ್ನೇ ಇಡುವುದು ಅಷ್ಟೊಂದು ಒಳ್ಳೆಯದಲ್ಲ ಎಂದು ಭಾವಿಸಿ 7 ಮತ್ತು 8 ನ್ನು ಸೇರಿಸಿ 12345678 ಎಂಬ ಪಾಸ್‌ವರ್ಡ್ ಇಡುತ್ತಾರೆ. ಇದು ಮೂರನೇ ಅತಿ ಕೆಟ್ಟ ಪಾಸ್‌ವರ್ಡ್!!

QWERTY ಕಿರಿಕ್!!
ಕಂಪ್ಯೂಟರ್ ಕೀಬೋರ್ಡ್‌ನಲ್ಲಿ ಇರುವ ಮೊದಲ ಅಕ್ಷರಗಳನ್ನು ಜನರು ಪಾಸ್‌ವರ್ಡ್ ಆಗಿ ಇಟ್ಟುಕೊಳ್ಳುತ್ತಾರೆ.! ವಿಶ್ವದಲ್ಲಿ ಈ ಪಾಸ್‌ವರ್ಡ್ ಅನ್ನೇ ಹಲವರು ತಮ್ಮ ಖಾತೆಗಳಿಗೆ ಪಾಸ್‌ವರ್ಡ್ ಮಾಡಿದ್ದಾರೆ. ಅತಿ ಸುಲಭವಾಗಿ ತಿಳಿದುಕೊಳ್ಳಬಹುದಾದ ಪಾಸ್‌ವರ್ಡ್‌ಗಳಲ್ಲಿ ಇದಕ್ಕೆ ನಾಲ್ಕನೇ ಸ್ಥಾನ ಸಿಕ್ಕಿದೆ.!!

5ಕ್ಕೆ ಐದನೇ ಸ್ಥಾನ!!
ವಿಶ್ವದಲ್ಲಿಯೇ 5 ಸ್ಥಾನದಲ್ಲಿರುವ ಅತ್ಯಂತ ಕೆಟ್ಟ ಪಾಸ್‌ವರ್ಡ್ ಎಂದರೆ ‘12345'!! 5 ಅಂಕಿಗಳಿಂರುವ ಈ ಪಾಸ್‌ವರ್ಡ್ ಅನ್ನು ಹೆಚ್ಚು ಜನರು ಬಳಕೆ ಮಾಡುತ್ತಿದ್ದಾರೆ.!!

1 ಟು 9 ಗೆ 6 ನೇ ಸ್ಥಾನ!!
ವಿಶ್ವದ 6 ನೇ ಅತ್ಯಂತ ಕೆಟ್ಟ ಪಾಸ್‌ವರ್ಡ್ 1 ರಿಂದ 9 ರ ವರೆಗೆ ಇರುವ ಸಂಖ್ಯೆಗಳಾಗಿವೆ. ‘123456789' ಎಂದು ಪಾಸ್‌ವರ್ಡ್ ಇಡುವವರು ಬಹಳಷ್ಟು ಜನರಿದ್ದಾರೆ.!!


ಮಹಾನ್ ಬುದ್ದಿವಂತರು!!
ವಿಶ್ವದ 7 ನೇ ಅತ್ಯಂತ ಕೆಟ್ಟ ಪಾಸ್‌ವರ್ಡ್ ಮಹಾನ್ ಬುದ್ದಿವಂತರಿಗೆ ಸಿಕ್ಕಿದೆ.! ‘what ever' ಎಂದು ನೀಡಿ ಯಾರಿಗೂ ತಿಳಿಯುವುದಿಲ್ಲ ಎಂದುಕೊಳ್ಳುವ ಈ ಪಾಸ್‌ವರ್ಡ್ ವಿಶ್ವದ 7 ನೇ ಅತ್ಯಂತ ಕೆಟ್ಟ ಪಾಸ್‌ವರ್ಡ್!!

ಎಂಟನೇ ಸ್ಥಾನ ಯಾವುದಕ್ಕೆ?
1 ರಿಂದ 7 ಅಂಕೆಗಳ ಸಂಖ್ಯೆ ವಿಶ್ವದ 8 ನೇ ಅತ್ಯಂತ ಕೆಟ್ಟ ಪಾಸ್‌ವರ್ಡ್ ಎಂದು ಕರೆಯಲ್ಪಟ್ಟಿದೆ. ‘1234567' ರ ವರೆಗೆ ಪಾಸ್‌ವರ್ಡ್ ಕೊನೆ ಮಾಡುವವರು ಇದ್ದಾರೆ.!!

ಅತ್ಯಂತ ಸೋಮಾರಿಗಳಿಗೆ 9ನೇ ಸ್ಥಾನ!!
ವಿಶ್ವದ 9ನೇ ಅತ್ಯಂತ ಕೆಟ್ಟ ಪಾಸ್‌ವರ್ಡ್ ಅತ್ಯಂತ ಸೋಮಾರಿಗಳ ಪಾಲಾಗಿದೆ. 1 ಅಂಕೆಯನ್ನು ಆರು ಭಾರಿ ಒತ್ತಿ ‘111111' ಪಾಸ್‌ವರ್ಡ್ ಇಡುವವರ ಸಂಖ್ಯೆ 9ನೇ ಸ್ಥಾನದಲ್ಲಿದೆ.

10ನೇ ಸ್ಥಾನ ಡ್ರ್ಯಾಗನ್ ಗೆ!!
ಹೆಚ್ಚು ಬಳಕೆದಾಗಯವ ಪದ ಡ್ರ್ಯಾಗನ್ ಕೆಟ್ಟ ಪಾಸ್‌ವರ್ಡ್‌ಗಳ ಸಾಲಿನಲ್ಲಿ 10ನೇ ಸ್ಥಾನವನ್ನು ಪಡೆದಿದೆ. ನಂತರದ ಸ್ಥಾನಗಳನ್ನು I LOVE YOU, HELLO, FREEDOM, MONKEY, TRUST NUMBER1, ಪಾಸ್‌ವರ್ಡ್‌ಗಳು ಪಡೆದುಕೊಂಡಿವೆ.!!

ಒಂದೇ ಒಂದು ತಪ್ಪು!!
ಸುಲಭವಾಗಿ ನೆನಪಿಟ್ಟುಕೊಳ್ಳಲು ಸಾಧ್ಯವಿರುವಂತಹ ಪಾಸ್‌ವರ್ಡ್‌ಗಳನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ ಎಂದು ‘ಸ್ಪ್ಯಾಷ್ ಡೇಟಾ' ಎಂಬ ಆನ್‌ಲೈನ್ ಸಂಸ್ಥೆ ತನ್ನ ಸಮೀಕ್ಷೆಯಲ್ಲಿ ಬಹಿರಂಗಪಡಿಸಿದೆ. ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗಲು ಅತಿ ಸುಲಭ ಪಾಸ್‌ವರ್ಡ್‌ಗಳೇ ಕಾರಣ ಎಂದು ತಿಳಿಸಿದೆ. ಈ ಒಂದೇ ಒಂದು ತಪ್ಪು ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ.!


Click it and Unblock the Notifications








