ಟೆಲಿಕಾಂ ಕಂಪೆನಿಗಳ ಮೋಸಕ್ಕೆ ಬ್ರೇಕ್!!..ಟ್ರಾಯ್‌ನ ಹೊಸ ನಿಯಮಗಳು ಸೂಪರೋ ಸುಪರ್!!

Written By:

ಟೆಲಿಕಾಂನಲ್ಲಿ ಹಲವು ಬದಲಾವಣೆಗಳನ್ನು ತರುವಲ್ಲಿ ಯಶಸ್ವಿಯಾಗಿರುವ ಭಾರತೀಯ ದೂರ ಸಂಪರ್ಕ ನಿಯಂತ್ರಣ ಇಲಾಖೆ ಟ್ರಾಯ್, ಇದೀಗ ಗ್ರಾಹಕರಿಗೆ ಬಹುಉಪಯೋಗ ಆಗುವಂತಹ ನೂತನ ನಿಯಮವನ್ನು ಜಾರಿಗೊಳಿಸಲು ಮುಂದಾಗಿದೆ.!!

ಹೌದು, ಟೆಲಿಕಾಂ ಕಂಪೆನಿಗಳ ಮೋಸಕ್ಕೆ ಬ್ರೇಕ್ ಹಾಕಲು ಟ್ರಾಯ್ ನಿರ್ಧರಿಸಿದ್ದು, ಮೆಸೇಜ್ ಮತ್ತು ಸ್ಪ್ಯಾಮ್ ಕಾಲ್‌ಗಳ ಮೂಲಕ ಗ್ರಾಹಕರನ್ನು ವಂಚಿಸುವುದನ್ನು ತಡೆಯಲು ಕಾನೂನನ್ನು ಬಿಡಗಿಮಾಡಲು ಹೊರಟಿದೆ.!! ಜೊತೆಗೆ "ಡು ನಾಟ್ ಡಿಸ್ಟರ್ಬ್" ಎಂಬ ಹೊಸ ಆಯ್ಕೆಯನ್ನು ತರಲು ನಿರ್ಧರಿಸಿದೆ.!!

ನೂತನ ಕಾನೂನಿನ ಮೂಲಕ ಗ್ರಾಹಕರಿಗೆ ವಂಚನೆಯಾಗದ ಹಾಗೆ ಟೆಲಿಕಾಂ ಕಂಪೆನಿಗಳ ಮೇಲೆ ಭಾರಿ ಬ್ರಮ್ಮಾಸ್ರವನ್ನು ಪ್ರಯೋಗಿಸಲು ಟ್ರಾಯ್ ನಿರ್ಧರಿಸಿದ್ದು, ಹೊಸ ಕಾನೂನು ಯಾವ ಯಾವ ಅಂಶಗಳನ್ನು ಹೊಂದಿದೆ ಎಂದು ಕೆಳಗಿನ ಸ್ಲೈಡರ್‌ಗಲಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ರಿಮಿನಲ್ ಮೊಕದ್ದಮೆ!!

ಕ್ರಿಮಿನಲ್ ಮೊಕದ್ದಮೆ!!

ಮೆಸೇಜ್ ಮತ್ತು ಸ್ಪ್ಯಾಮ್ ಕಾಲ್‌ಗಳ ಮೂಲಕ ಗ್ರಾಹಕರನ್ನು ವಂಚಿಸಿರುವ ಪ್ರಕರಣಗಳ ಮೇಲೆ ಟೆಲಿಕಾಂ ಕಂಪೆನಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಟ್ರಾಯ್ ಚಿಂತಿಸಿದೆ ಎನ್ನಲಾಗಿದೆ.!!

ಟೆಲಿಕಾಂ ಕಂಪೆನಿಗಳ ಜುಟ್ಟು ಗ್ರಾಹಕರ ಕೈಗೆ!!

ಟೆಲಿಕಾಂ ಕಂಪೆನಿಗಳ ಜುಟ್ಟು ಗ್ರಾಹಕರ ಕೈಗೆ!!

ಹೌದು, ಎಲ್ಲಾ ಟೆಲಿಕಾಂಗಳ ಜುಟ್ಟನ್ನು ಗ್ರಾಹಕರ ಕೈಗೆ ನೀಡಲು ಟ್ರಾಯ್ ಮುಂದಾಗಿದೆ. ಇದಕ್ಕಾಗಿ "ಮೈ ಕಾಲ್" ಎಂಬ ಆಪನ್ನು ಹೊರತರುತ್ತಿದ್ದು, ಟೆಲಿಕಾಂ ಕಂಪೆನಿಗಳ ಸೇವೆಗೇ ಗ್ರಾಹಕರು ರೇಟಿಂಗ್ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ. ಇದರಿಂದ ಟೆಲಿಕಾಂ ಕಂಪೆನಿಗಳ ರ್ಯಾಂಕಿಂಗ್ ಬಿಡುಗಡೆಯಾಗುತ್ತದೆ.!!

"ಡು ನಾಟ್ ಡಿಸ್ಟರ್ಬ್" ಪ್ಲೀಸ್!!!

ಟೆಲಿಕಾಂ ಕಂಪೆನಿಗಳು ಪದೇ ಪದೇ ಗ್ರಾಹಕರಿಗೆ ಮೆಸೇಜ್ ಮತ್ತು ಕಾಲ್ ಮಾಡಿ ತೊಂದರೆ ಉಂಟು ಮಾಡಲು ಸಾಧ್ಯವಿಲ್ಲದ ಹಾಗೆ ಟ್ರಾಯ್ ಡು ನಾಟ್ ಡಿಸ್ಟರ್ಬ್ ಎಂಬ ಆಯ್ಕೆಯನ್ನು ಎಲ್ಲಾ ಕಂಪೆನಿಗಳಿಗೂ ಏಕರೂಪವಾಗಿ ಜಾರಿ ಮಾಡುತ್ತಿದೆ.!!

ಗ್ರಾಹಕನೇ ದೇವರು!!

ಗ್ರಾಹಕನೇ ದೇವರು!!

ಈ ಮೊದಲು ಕಾಲ್‌ಡ್ರಾಪ್ ಸಮಸ್ಯೆ ಬಂದಿದ್ದರೆ ಗ್ರಾಹಕರು ಟೆಲಿಕಾಂಗಳ ವಿರುದ್ದ ಹೋರಾಡಲು ಸಾಧ್ಯವಿರಲಿಲ್ಲ. ಆದರೆ, ಈಗ ಕಾಲ್‌ಡ್ರಾಪ್ ಸಮಸ್ಯೆ ಹೆಚ್ಚಾದರೆ ಕಂಪೆನಿಗಳ ವಿರುದ್ದ ಗ್ರಾಹಕರು ದೂರನ್ನು ದಾಖಲಿಸಬಹುದು.!! ಹಾಗಾಗಿ, ಟೆಲಿಕಾಂ ಕಂಪೆನಿಗಳಿಗೆ ಇನ್ನು ಗ್ರಾಹಕರೆ ದೇವೆರು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The Telecom Regulatory Authority of India will soon add more muscle to its Do Not Disturb. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot