Home
ಫೀಚರ್ ಸ್ಟೋರೀಸ್

ವಿಶ್ವದ ಮೊದಲ ರೂಬೋಟ್ ರಾಜಕಾರಣಿ ಬಗ್ಗೆ ನಿಮಗೆಷ್ಟು ಗೊತ್ತು?

ನ್ಯೂಜಿಲೆಂಡ್​ನ ವಿಜ್ಞಾನಿ ನಿಕ್ ಗೆರಿಟ್ಸನ್ ವಿಶ್ವದ ಮೊದಲ ಕೃತಕ ಬುದ್ಧಿಮತ್ತೆಯ ರೋಬೋಟ್ ರಾಜಕಾರಣಿಯನ್ನು ಸೃಷ್ಟಿಸಿದ್ದು, ‘ಸ್ಯಾಮ್ ಎಂದು ನಾಮಕರಣ ಮಾಡಿದ್ದಾರೆ.!

By Bhaskar N J

ತಂತ್ರಜ್ಞಾನದ ಬೆಳವಣಿಗೆ ಇದೀಗ ಆರ್ಟಿಫಿಷಿಯಲ್ ಕ್ಷೇತ್ರಕ್ಕೆ ಕಾಲಿಟ್ಟು ಸ್ವತಂತ್ತ ಬುದ್ದಿಮತ್ತೆ ಹೊಂದಿರುವ ರೋಬೋಟ್‌ಗಳನ್ನು ತಯಾರಿಸಲು ಇಂಜಿನಿಯರ್‌ಗಳು ಮತ್ತು ವಿಜ್ಞಾನಿಗಳು ಸೇರಿ ಪ್ರಯತ್ನಿಸುತ್ತಿದ್ದಾರೆ. ಮತ್ತು ಅಂತಹ ರೋಬೋಟ್‌ಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ ಕೂಡ.! ಇದಕ್ಕೆ ಹೊಸಹೊಂದು ಉದಾಹರಣೆ ರೋಬೋಟ್ ರಾಜಕಾರಣಿ.!

ಹೌದು, ಇದೇನು ರೋಬೋಟ್ ರಾಜಕಾರಣಿ ಎಂದು ಹೇಳುತ್ತಿದ್ದೀರಾ ಎಂದುಕೊಳ್ಳಬೇಡಿ. ಏಕೆಂದರೆ ನ್ಯೂಜಿಲೆಂಡ್​ನ ವಿಜ್ಞಾನಿ ನಿಕ್ ಗೆರಿಟ್ಸನ್ ವಿಶ್ವದ ಮೊದಲ ಕೃತಕ ಬುದ್ಧಿಮತ್ತೆಯ ರೋಬೋಟ್ ರಾಜಕಾರಣಿಯನ್ನು ಸೃಷ್ಟಿಸಿದ್ದು, 'ಸ್ಯಾಮ್ ಎಂದು ನಾಮಕರಣ ಮಾಡಿದ್ದಾರೆ.! ಹಾಗಾದರೆ, ಈ ರೋಬೋಟ್ ಏನು ಕೆಲಸ ಮಾಡುತ್ತದೆ ಎಂಬುದನ್ನು ಮುಂದೆ ತಿಳಿಯಿರಿ.!!

ರೋಬೋಟ್ ರಾಜಕಾರಣಿ!!

ರೋಬೋಟ್ ರಾಜಕಾರಣಿ!!

ಕೃತಕ ಬುದ್ಧಿಮತ್ತೆಯ ಮೊದಲ ರೋಬೋಟ್ ರಾಜಕಾರಣಿ ಎಂಬ ಹಣಪಟ್ಟಿಯೊಂದಿಗೆ ಹೊರಬಂದಿರುವ ಸ್ಯಾಮ್ ರೂಬೋಟ್ ಸ್ಥಳೀಯ ಸಮಸ್ಯೆಗಳ ಬಗ್ಗೆ ನಿರರ್ಗಳವಾಗಿ ಉತ್ತರಿಸುತ್ತಾನಂತೆ.!! ವಸತಿ ಯೋಜನೆ, ಶಿಕ್ಷಣ, ವಲಸೆ ಕುರಿತ ಪ್ರಶ್ನೆಗಳಿಗೂ ಈತ ನಿಖರವಾಗಿ ಉತ್ತರಿಸುವ ಕಲೆ ಇವನಲ್ಲಿದೆ.!!

ಸಾಮಾಜಿಕ ಜಾಲತಾಣ ಬಳಕೆ!!

ಸಾಮಾಜಿಕ ಜಾಲತಾಣ ಬಳಕೆ!!

ಸ್ಥಳೀಯ ಸಮಸ್ಯೆಗಳ ಬಗ್ಗೆ ನಿರರ್ಗಳವಾಗಿ ಉತ್ತರಿಸುವ ಸ್ಯಾಮ್, ಜನರು ಕೇಳುವ ಪ್ರಶ್ನೆಗಳಿಗೆ ಫೇಸ್​ಬುಕ್ ಮೆಸೆಂಜರ್ ಸಹಿತ ಸಾಮಾಜಿಕ ಜಾಲತಾಣಗಳ ಮೂಲಕ ಉತ್ತರಿಸುವುದನ್ನು ಕಲಿಯುತ್ತಿದ್ದಾನೆ ಎಂದು ವಿಜ್ಞಾನಿ ನಿಕ್ ಹೇಳಿದ್ದಾರೆ. ಹಾಗಾಗಿ, ಇನ್ನು ಸ್ಯಾಮ್ ಸೋಶಿಯಲ್ ಮೀಡಿಯಾದಲ್ಲಿಯೂ ಸಹ ಬ್ಯುಸಿಯಾಗಬಹುದು.!!

ಚುನಾವಣೆಗೆ ಸ್ಪರ್ಧೆ?

ಚುನಾವಣೆಗೆ ಸ್ಪರ್ಧೆ?

ಮುಂದುವರೆದ ರಾಷ್ಟ್ರಗಳಲ್ಲಿ ಏನು ಬೇಕಾದರೂ ನಡೆಯಬಹುದು ಎನ್ನುವ ಒಂದು ರೂಮರ್ಸ್ ಸ್ಯಾಮ್ ರೋಬೋಟ್ ಮೇಲಿದೆ.! ಹೌದು, ಈ ರೋಬಾಟ್ ರಾಜಕಾರಣಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಚುನಾವಣಾ ಕಣಕ್ಕೆ ಇಳಿಸುವುದು ರೋಬೋಟ್ ನಿರ್ಮಾತೃ ನಿಕ್ ಯೋಜನೆ.! ಆದರೆ ಈ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.!!

ಸಂಶೋಧನೆ ನಡೆಯುತ್ತಿದೆ.!!

ಸಂಶೋಧನೆ ನಡೆಯುತ್ತಿದೆ.!!

ಈ ರೋಬಾಟ್ ರಾಜಕಾರಣಿ ಅಭಿವೃದ್ಧಿ ಇನ್ನೂ ಆರಂಭಿಕ ಹಂತದಲ್ಲಿದ್ದು, ಸ್ವಂತ ನಿರ್ಧಾರ ಕೈಗೊಳ್ಳುವುದು, ನಿತ್ಯದ ಕಾರ್ಯನಿರ್ವಹಣೆ ಸಹಿತ ಹಲವು ಕಾರ್ಯಗಳ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಯಬೇಕಿದೆ ಎಂದು ನಿಕ್ ಹೇಳಿದ್ದಾರೆ. ಪೂರ್ತಿ ಅಭಿವೃದ್ದಿಯಾದರೆ ಈ ರೂಬೋಟ್ ಹೆಚ್ಚು ಉಪಯೋಗವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.!!

ಈ ರೂಬೋಟ್‌ನಿಂದ ಅನುಕೂಲವಿದೆಯೇ?

ಈ ರೂಬೋಟ್‌ನಿಂದ ಅನುಕೂಲವಿದೆಯೇ?

ದಿನದ 24 ಗಂಟೆಯೂ ಬಿಡುವುರಹಿತವಾಗಿ ಕೆಲಸ ಮಾಡುವ ಈ ರೋಬಾಟ್ ರಾಜಕಾರಣಿ ಸಮರ್ಥವಾಗಿ ಹಾಗೂ ಪಾರದರ್ಶಕವಾಗಿ ಕೆಲಸ ನಿರ್ವಹಿಸುತ್ತದೆ. ಹಾಗಾಗಿ, ರಾಜಕೀಯ ಮತ್ತು ಸಾಂಸ್ಕೃತಿಕ ಅಸಮತೋಲನವನ್ನೂ ರೋಬಾಟ್ ರಾಜಕಾರಣಿ ನಿವಾರಿಸಬಹುದು ಎಂದು ನಿಕ್ ಅಂದುಕೊಂಡಿದ್ದಾರೆ.!!

Best Mobiles in India

English summary
Scientists have developed the world’s first artificial intelligence politician.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+