ಎಚ್.ಟಿ.ಸಿ 3 ಹೊಸ ಆಂಡ್ರಾಯ್ಡ್ ಫೋನ್ ಮಾರ್ಚ್ 30 ಕ್ಕೆ

Posted By: Varun
ಎಚ್.ಟಿ.ಸಿ 3 ಹೊಸ ಆಂಡ್ರಾಯ್ಡ್ ಫೋನ್ ಮಾರ್ಚ್ 30 ಕ್ಕೆ

ಎಚ್.ಟಿ.ಸಿ ಮೊಬೈಲ್ ಮೊನ್ನೆ ತಾನೇ ಮುಗಿದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ಸಿನಲ್ಲಿ 3 ಹೊಸ ಆಂಡ್ರಾಯ್ಡ್ ಫೋನುಗಳನ್ನು ಡಿಸ್ಪ್ಲೇ ಮಾಡಿತ್ತು. ಮಾರ್ಚ್ 30ಕ್ಕೆ ಈ ಮೂರೂ ಫೋನುಗಳನ್ನು ಸಿಂಗಾಪುರದಲ್ಲಿ ಬಿಡುಗಡೆ ಮಾಡಲಿದ್ದು, ಏಪ್ರಿಲ್ ಮೊದಲನೇ ವಾರಕ್ಕೆ ಭಾರತಕ್ಕೆ ಬರುವ ಸಾಧ್ಯತೆಗಳಿವೆ.

ಎಚ್.ಟಿ.ಸಿ ಒನ್ ಸರಣಿಯಲ್ಲಿ ಒನ್ ಎಕ್ಸ್, ಒನ್ ವಿ ಹಾಗು ಒನ್ ಎಸ್ ಮಾಡಲ್ಗಳನ್ನ ಬಿಡುಗಡೆ ಮಾಡಲಿದ್ದು ಈ ಸರಣಿಯ ಎಲ್ಲಾ ಫೋನ್ಗಳಲ್ಲಿ ಆಂಡ್ರಾಯ್ಡ್ 4.೦ ತಂತ್ರಾಂಶದೊಂದಿಗೆ ಬರಲಿದ್ದು, ಇಮೇಜ್ ಸೆನ್ಸ್ 4 ಹೆಸರಿನ ಹೊಸ ಫೀಚರ್ ಹೊಂದಿದೆ. ಇದರಿಂದಾಗಿ ಎಚ್.ಟಿ.ಸಿಯಲ್ಲಿರುವ ಕ್ಯಾಮರಾ ಲೆನ್ಸ್, ಸೆನ್ಸರ್, ತಂತ್ರಾಂಶ ಇನ್ನೂ ಹೆಚ್ಚಿನ ಕಾರ್ಯಕ್ಷಮತೆ ಹೊಂದಲಿದ್ದು ಕಡಿಮೆ ಬೆಳಕಿನಲ್ಲೂ ಚಿತ್ರಗಳನ್ನು ತೆಗೆಯಬಹುದಾಗಿದೆ. ಇದರ ಜೊತೆ ಇನ್ನೂ ಹೊಸ ಫೀಚರ್ ಎಂದರೆ ವೀಡಿಯೊ ಪಿಕ್ ಎಂಬುದು. ಇದರಿಂದಾಗಿ ನೀವು ವೀಡಿಯೊ ತೆಗೆಯುತ್ತಲೇ ಚಿತ್ರಗಳನ್ನೂ ತೆಗೆಯಬಹುದು.

ಕ್ಲೌಡ್ ಕಂಪ್ಯೂಟಿಂಗ್ ಸೌಲಭ್ಯದ ಡ್ರಾಪ್ ಬಾಕ್ಸ್ ಇರುವ ಆಪ್ ಇರಲಿದ್ದು 25 GB ಮಾಹಿತಿಯನ್ನು 2 ವರ್ಷಗಳ ಕಾಲ ಸಂಗ್ರಹಿಸಿಡಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot