ಆಂಡ್ರಾಯ್ಡ್ ಫೋನುಗಳ ಲಾಕ್ FBI ಗೂ ಕಷ್ಟ

Posted By: Varun
ಆಂಡ್ರಾಯ್ಡ್ ಫೋನುಗಳ ಲಾಕ್ FBI ಗೂ ಕಷ್ಟ

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನಿನ ಸುರಕ್ಷತೆ ಬಗ್ಗೆ ಚಿಂತೆ ಇದ್ದರೆ ಬಿಟ್ಟುಬಿಡಿ. ಆಂಡ್ರಾಯ್ಡ್ ಫೋನುಗಳಿಗೆ ಬರುವ ಮಾದರಿ ಲಾಕ್ ಅತ್ಯಂತ ಸುರಕ್ಷಿತವೆಂದು ಸಾಬೀತಾಗಿದೆ.

ವಿಷಯ ಏನೆಂದರೆ, ಅಮೇರಿಕಾದ ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಶನ್ (FBI) ಕೆಲವು ಕೇಸುಗಳ ವಿಚಾರಣೆಯಲ್ಲಿ ಸಾಕ್ಷಿಯಾಗಿದ್ದ ಆಂಡ್ರಾಯ್ಡ್ ಫೋನುಗಳನ್ನು ಕೋರ್ಟಿನಲ್ಲಿ ಹಾಜರುಪಡಿಸಿ ಮಾಹಿತಿಗಾಗಿ ತೆಗೆಯಲೆತ್ನಿಸಿದಾಗ ವಿಫಲವಾಯ್ತಂತೆ. ಹಲವಾರು ಕಾಂಬಿನೇಶನ್ಗಳನ್ನು ಪ್ರಯತ್ನಿಸಿದರೂ ಆಂಡ್ರಾಯ್ಡ್ ಫೋನುಗಳು ಅನ್ ಲಾಕ್ ಆಗಲಿಲ್ಲವಂತೆ. ಹಾಗಾಗಿFBI ನಂತಹ ಸಂಸ್ಥೆಯೇ ಮಾಡಲಾಗದ್ದನ್ನು ಒಬ್ಬ ಕಳ್ಳ ಮಾಡುವುದು ಬಹುತೇಕ ಕಷ್ಟವೆಂದು ಸಾಬೀತಾಗಿದೆ.

ನಿಮ್ಮ ಆಂಡ್ರಾಯ್ಡ್ ಫೋನುಗಳಲ್ಲಿ ಈ ಲಾಕ್ ಅನ್ನು ಏನೇಬಲ್ ಮಾಡಿಕೊಳ್ಳಲು ಈ ರೀತಿ ಮಾಡಿ.

Settings ಗೆ ಹೋಗಿ 'Location and Settings' ಕ್ಲಿಕ್ ಮಾಡಿ 'Screen Unlock ಅನ್ನು ಕ್ಲಿಕ್ ಮಾಡಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot