ಸ್ಮಾರ್ಟ್ ಫೋನ್ ಕೊಳ್ಳಲು 3 ಸ್ಮಾರ್ಟ್ ಅಂಶಗಳು

ಸ್ಮಾರ್ಟ್ ಫೋನುಗಳ ವಿಚಾರಕ್ಕೆ ಬಂದಾಗ ನಾವು ಆಪಲ್, ಸೋನಿ, ಸ್ಯಾಮ್ಸಂಗ್ ,ಎಚ್.ಟಿ.ಸಿ, ಬ್ಲಾಕ್ ಬೆರಿ, ಎಲ್.ಜಿ ಮುಂತಾದ ಕಂಪನಿಗಳ ಉತ್ಕೃಷ್ಟ ಮಾಡೆಲುಗಳು ನಮ್ಮನ್ನು ತಲೆಕೆಡುವಂತೆ ಮಾಡುತ್ತವೆ. ಹೀಗಾಗಿ ನಮ್ಮ ಅಗತ್ಯಕ್ಕೆ ತಕ್ಕ ಹಾಗೆ ಸ್ಮಾರ್ಟ್ ಫೋನ್ ಕೊಳ್ಳಲು ಈ ಮೂರು ಪ್ರಮುಖ ಅಂಶಗಳನ್ನು ಗಮನದಲ್ಲಿಡಿ.
ಕ್ಯಾಮರಾ ಸಾಮರ್ಥ್ಯ:
ಮಧ್ಯಮ-ಮೇಲ್ಮಟ್ಟದ ಶ್ರೇಣಿಯ ಸ್ಮಾರ್ಟ್ ಫೋನುಗಳಲ್ಲಿ ಇರುವ ಕ್ಯಾಮರಾಗಳು ಡಿಜಿಟಲ್ ಕ್ಯಾಮರಾಗಳಿಗಿಂತ ಉತ್ತಮವಾಗಿ ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯವಿದ್ದು ನೀವು ಅದಕ್ಕೆoತಲೇ ಬೇರೆ ಕ್ಯಾಮರಾವನ್ನು ಕೊಂಡೊಯ್ಯುವ ಅಗತ್ಯವಿಲ್ಲ. ಹೀಗಾಗಿ ನೀವು ಕರೆಗಳು, ಎಸ್ಎಂಎಸ್ ಜೊತೆ ನಿಮಗೆ ಚಿತ್ರ ಸೆರೆಹಿಡಿಯಲು ಸ್ಮಾರ್ಟ್ ಫೋನು ತೆಗೆದುಕೊಳ್ಳುವುದಾದರೆ, ಸ್ಯಾಮ್ಸಂಗ್ ಇಲ್ಲವೇ ಆಪಲ್ ನ ಫೋನ್ ಖರೀದಿಸಬಹುದು.
ಮಲ್ಟಿಮೀಡಿಯಾ:
ಸ್ಮಾರ್ಟ್ ಫೋನುಗಳಲ್ಲಿ ಮೆಮೊರಿ ಬಹುಮುಖ್ಯವಾಗಿದ್ದು, ಮಲ್ಟಿಮೀಡಿಯಾ ಆಪ್, ಗೇಮ್, ಸಿನಿಮಾ, ಹಾಡುಗಳು ಸಂಗ್ರಹ ಮಾಡಲು ನಿಮಗೆ ಕನಿಷ್ಟವೆಂದರೆ 4 -32 GB ಮೆಮೊರಿ ಇರುವ ಫೋನ್ ಬೇಕಾಗುತ್ತದೆ. ಈ ವಿಷಯದಲ್ಲಿ ಆಪಲ್ ಹಾಗು ಸ್ಯಾಮ್ಸಂಗ್ ನ ಫೋನುಗಳು ಅತ್ಯುತ್ತಮವಾಗಿದ್ದು ಹಾಡುಗಳನ್ನು ಕೇಳಲು ಬೇಕಾದ ಆಡಿಯೋ ಫೀಚರುಗಳು ಇದರಲ್ಲಿ ಇವೆ.
ಇಂಟರ್ನೆಟ್ ಸೇವೆ:
ಈಗಂತೂ ಟ್ವಿಟರ್, ಫೇಸ್ ಬುಕ್, ಇಮೇಲ್ ಸೌಲಭ್ಯ ಇರುವ ಸ್ಮಾರ್ಟ್ ಫೋನುಗಳು ಸಾಮಾನ್ಯವಾಗಿವೆ. ಆದರೆ ನೀವುದಿನದಲ್ಲಿ 10 ಕ್ಕಿಂತ ಹೆಚ್ಚು ಇಮೇಲ್ ಕಳಿಸುವಿರಾದರೆ ಬ್ಲಾಕ್ ಬೆರಿ ಸ್ಮಾರ್ಟ್ ಫೋನ್ ಖರೀದಿಸಿ. ಸಾಮಾಜಿಕ ಜಾಲ ತಾಣಗಳ ಆಪ್ ಇರುವ ಫೋನ್ ಕಡಿಮೆ ಬೆಲೆಗೂ ಸಿಗಲಿರುವುದರಿಂದ, ನೋಕಿಯಾ ಮೊಬೈಲುಗಳಿಗೆ ಮೊರೆ ಹೋಗಬಹುದು.


Click it and Unblock the Notifications








