ವಾರಂಟಿ:ಈ App ನಲ್ಲಿ ಉಳಿಯುವುದು ಗ್ಯಾರಂಟಿ

Posted By: Varun
ವಾರಂಟಿ:ಈ App ನಲ್ಲಿ ಉಳಿಯುವುದು ಗ್ಯಾರಂಟಿ

ನಾವು ದಿನನಿತ್ಯದ ಬದುಕಲ್ಲಿ ಹಲವಾರು ವಸ್ತುಗಳನ್ನು ಖರೀದಿಸುತ್ತೇವೆ. ಅದೆಷ್ಟೋ ಬಿಲ್ಲುಗಳನ್ನು ಜೇಬಿನಲ್ಲಿ ಇಲ್ಲವೆ ಪರ್ಸಿನಲ್ಲಿ ತುರುಕಿರುತ್ತೇವೆ. ಕೊಂಡುಕೊಂಡ ವಸ್ತು ಕೆಟ್ಟಾಗ ಇಲ್ಲವೆ ಹಾನಿಯಾದಾಗ ಅದರ ಬಿಲ್ಲುಗಳು ಸಿಗದಿದ್ದರೆ ಪರದಾಡಬೇಕಾಗುತ್ತದೆ.

ಇನ್ನುಮುಂದೆ ನೀವು ಯಾವುದೇ ವಾರಂಟಿ ಇರುವ ವಸ್ತು ಖರೀದಿಸಿದಾಗ ಅದರ ಬಿಲ್ಲನ್ನು ಜೋಪಾನ ಮಾಡುವ ವಾರಂಟಿಫೈ ಎಂಬ ಆಪ್ (App) ಬಂದಿದೆ. ಇದನ್ನು ನೀವು ನಿಮ್ಮ ಸ್ಮಾರ್ಟ್ಫೋನ್ ಹಾಗು ಆಪಲ್ ನ ಉತ್ಪನ್ನಗಳಲ್ಲಿ ಡೌನ್ಲೋಡ್ ಮಾಡಿಕೊಂಡು ಆ ಬಿಲ್ ಅನ್ನುಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ. ಸ್ಕ್ಯಾನ್ ಆದ ನಿಮ್ಮ ಬಿಲ್ಲುಗಳನ್ನುವಾರಂಟಿಫೈ ನ ಸರ್ವರುಗಳು ಎಷ್ಟೇ ವರ್ಷವಾದರೂ ಸರಿ ಜೋಪಾನ ಮಾಡುತ್ತವೆ.

ಇದಷ್ಟೇ ಅಲ್ಲದೆ ವಾರಂಟಿ ಕೊನೆಯಾಗುವ ಸಮಯವನ್ನು ಅದೇ ನೆನಪಿಸುತ್ತದೆ ಹಾಗು ಆನ್ಲೈನ್ ನಲ್ಲೇ ವಾರಂಟಿಯನ್ನು ವಿಸ್ತರಿಸಬಹುದು.

ಈ ಆಪ್ ಅನ್ನು ನಿಮ್ಮ ಆಪಲ್ ಹಾಗು ಆಂಡ್ರಾಯ್ಡ್ ಫೋನುಗಳಿಗೆ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot