ಆಪಲ್ ಐಫೋನ್ 5 ಗೆ 4.6 ಇಂಚ್ ರೆಟಿನಾ ಡಿಸ್ಪ್ಲೇ

By Varun
|
ಆಪಲ್ ಐಫೋನ್ 5 ಗೆ 4.6 ಇಂಚ್ ರೆಟಿನಾ ಡಿಸ್ಪ್ಲೇ

ಮೊನ್ನೆ ತಾನೇ ಬಿಡುಗಡೆಯಾದ ಹೊಸ ಆಪಲ್ ನ್ಯೂ ಪ್ಯಾಡ್ ಟ್ಯಾಬ್ಲೆಟ್ ಅತ್ಯದ್ಭುತ ಯಶಸ್ಸು ಕಂಡ ಬೆನ್ನಲ್ಲೇ ಆಪಲ್ ಹೊಸ 6ನೆ ಆವೃತ್ತಿಯ ಐಫೋನ್ ಅನ್ನು ಕೆಲವೇ ತಿಂಗಳುಗಳಲ್ಲಿ ಹೊರತರಲಿದೆ ಎಂದು ಕೊರಿಯಾದ ಪತ್ರಿಕೆಯೊಂದು ವರದಿ ಮಾಡಿದೆ.

ಮುಂಬರಲಿರುವ ಈ ಹೊಸ ಐಫೋನ್ನಲ್ಲಿ ಏನು ವಿಶೇಷ ಎಂದರೆ ಇದುವರೆಗೂ ಇದ್ದ 3.5 ಇಂಚ್ ನ ಸ್ಕ್ರೀನ್ ಬದಲು ದೊಡ್ಡದಾದ 4.6 ಇಂಚ್ ನ ರೆಟಿನಾ ಡಿಸ್ಪ್ಲೇ ಸ್ಕ್ರೀನ್ ಇರಲಿದೆ.

ಆಪಲ್ ಬದ್ಧ ವೈರಿ ಸ್ಯಾಮ್ಸಂಗ್ ಈಗಾಗಲೇ ತನ್ನ ಗ್ಯಾಲಕ್ಸಿ S II ಮಾಡಲ್ ಸ್ಮಾರ್ಟ್ ಫೋನಿಗೆ 4.65 ಇಂಚ್ ನ ಡಿಸ್ಪ್ಲೇ ಉಪಯೋಗಿಸುತ್ತಿದ್ದು ತನ್ನ ಐಫೋನಿಗೆ ಪೈಪೋಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಸ್ಕ್ರೀನ್ ಅನ್ನು ಅಳವಡಿಸಿಕೊಳ್ಳಲು ಯೋಚಿಸಿದೆ ಎನ್ನಲಾಗಿದೆ.

ಆಪಲ್ ನ ರೆಟಿನಾ ಡಿಸ್ಪ್ಲೇ ಐಫೋನಿಗೂ ಬಂದರೆ ಅದರ ಹುಚ್ಚು ಇನ್ನೂ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X