Subscribe to Gizbot

ಮೊಬೈಲ್ ನಲ್ಲಿ ಹೆಚ್ಚು ವೀಡಿಯೋ ನೋಡಲು ತಂತ್ರಾಂಶ

Posted By: Varun
ಮೊಬೈಲ್ ನಲ್ಲಿ ಹೆಚ್ಚು ವೀಡಿಯೋ ನೋಡಲು ತಂತ್ರಾಂಶ

ಮೊಬೈಲ್ ಫೋನುಗಳಿಗೆ ಚಿಪ್ಸೆಟ್ಗಳನ್ನು ಉತ್ಪಾದಿಸುವ ಮೀಡಿಯಾಟೆಕ್ ಎಂಬ ಕಂಪನಿ ಈಗ ಚಲನಚಿತ್ರಗಳನ್ನು ಕಂಪ್ರೆಶನ್ ಮಾಡುವ ತಂತ್ರಾಂಶವೊಂದನ್ನು ಮಾರುಕಟ್ಟೆಗೆ ತಂದಿದೆ.

ನಿಮ್ಮ ಬಳಿ ಮೆಮೊರಿ ಕಾರ್ಡ್ ಹೊಂದುವ ಫೋನ್ ಇದ್ದರೆ ಅದರಲ್ಲಿ ಹಾಡು, ವೀಡಿಯೋ ಇಲ್ಲವೆ ಚಲನಚಿತ್ರಗಳನ್ನು ಹಾಕಿಕೊಂಡಿರುತ್ತೀರಿ. ಆದರೆ ವೀಡಿಯೋಗಳು ಹೆಚ್ಚು ಜಾಗವನ್ನು ಆಕ್ರಮಿಸುವುದರಿಂದ ಹೆಚ್ಚು ವೀಡಿಯೋಗಳನ್ನು ಇಟ್ಟುಕೊಳ್ಳಲಾಗುವುದಿಲ್ಲ.

ಸಾಧಾರಣವಾಗಿ ಒಂದು ಫಿಲಂಗೆ ಕನಿಷ್ಠ 1GBಯಷ್ಟಾದರೂ ಜಾಗ ಬೇಕು. ಆದರೆ ಮೀಡಿಯಾ ಟೆಕ್ ನ ತಂತ್ರಾಂಶ ಒಂದು ಫಿಲಂಗೆ ಕೇವಲ 150 MB ಗೆ ಕಂಪ್ರೆಸ್ಸ್ ಮಾಡಿಕೊಡುತ್ತದೆ ಅದೂ ಯಾವುದೇ ಕ್ವಾಲಿಟಿ ಲಾಸ್ ಇಲ್ಲದೆ.MP4 ಹಾಗು H.264 ಫಾರ್ಮ್ಯಾಟ್ ಗಳನ್ನು ಪ್ಲೇ ಮಾಡಬಹುದಾಗಿದ್ದು ಯಾವುದೇ ಮೊಬೈಲಿನಲ್ಲಿ ವೀಡಿಯೋಗಳನ್ನು ನೋಡಬಹುದು, ಈ ಕಂಪ್ರೆಸ್ಸ್ ಆಗಿರುವ ವೀಡಿಯೋಗಳನ್ನು.

ಈಗಾಗಲೇ ಈ ತಂತ್ರಾಂಶವನ್ನು ಮೈಕ್ರೋಮ್ಯಾಕ್ಸ್, ಲಾವಾ, ಇಂಟೆಕ್ಸ್ ಹಾಗು ಸ್ಪೈಸ್ ಮೊಬೈಲುಗಳು ಬಳಸುತ್ತಿವೆ.

 

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot