ನಿಮ್ಮ ಗೆಳಯ/ಗೆಳತಿಗೆ ಕಿಸ್ ಕಳಿಸಲು App

Posted By: Varun
ನಿಮ್ಮ ಗೆಳಯ/ಗೆಳತಿಗೆ ಕಿಸ್ ಕಳಿಸಲು App

ಪ್ರೀತಿ ಮಾಡುವವರಿಗೇ ಗೊತ್ತು ಪ್ರೀತಿಯ ರಸಮಯ ಕ್ಷಣಗಳ ಮಹತ್ವ. ಗೆಳೆಯ ಗೆಳತಿಯ ಮಧ್ಯೆ ಎಷ್ಟೇ ಪ್ರೀತಿ ಇದ್ದರೂ ವಾರದ ಎಲ್ಲಾ ದಿನ, ದಿನದ 24 ಗಂಟೆಯೂ ಒಟ್ಟಿಗೆ ಇರಲು ಸಾಧ್ಯವಿಲ್ಲ. ಹಾಗಾಗಿಯೇ ಮೊಬೈಲ್ ನಿಂದ ಕರೆ ಮಾಡುತ್ತೇವೆ, ಎಸ್ಎಂಎಸ್ ಮೂಲಕ ಮನದಾಳದ ಮಾತನ್ನು ಹಂಚಿಕೊಳ್ಳುತ್ತೇವೆ.

ಪ್ರೇಮಿಗಳು ಬೇರೆ ಬೇರೆ ಊರಿನಲ್ಲಿ ಇದ್ದರಂತೂ ಮೊಬೈಲ್ ಇಲ್ಲದೆ ಪ್ರೀತಿಯನ್ನು ಹಂಚಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಖಾಸಗಿ ಫೋಟೋ ಹಂಚಿಕೊಂಡರೆ ಬೇರೆಯವರು ನೋಡಬಹುದೆಂಬ ಭಯ ಇರುತ್ತದೆ.

ಪ್ರೇಮಿಗಳ ಈ ಪ್ರಾಬ್ಲಂ ಅನ್ನು ಅರ್ಥ ಮಾಡಿಕೊಂಡು ಕೆಲವು ಡೆವೆಲಪರುಗಳು ಸೇರಿಕೊಂಡು "ಪೇರ್" ಎಂಬ ಆಪ್ ಒಂದನ್ನು ಬಿಡುಗಡೆ ಮಾಡಿದ್ದು ಇದರಿಂದ ನೀವು ನಿಮ್ಮ ಗೆಳೆಯ/ಗೆಳತಿಗೆ ಉಮ್ಮಾ ಕೊಡಬಹುದು, ಮೆಸೇಜ್ ಕಳಿಸಬಹುದು, ವೀಡಿಯೋ ಹಾಗು ಖಾಸಗೀ ಫೋಟೋಗಳನ್ನು ಪರಸ್ಪರ ಹಂಚಿಕೊಳ್ಳಬಹುದು, ಯಾರಿಗೂ ಗೊತ್ತಾಗದಂತೆ.

ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಆಪಲ್ ಐಫೋನ್ ಅನ್ನು ನಿಮ್ಮ ಗೆಳತಿಯ ಫೋನಿಗೆ ಪೇರ್ ಮಾಡಿದರೆ ಸಾಕು. ಈ ಆಪ್ ಆಪಲ್ ಮಳಿಗೆಯಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಆಂಡ್ರಾಯ್ಡ್ ಸಾಧನಗಳಿಗೂ ಈ ಆಪ್ ಬರಲಿದ್ದು ಈ ರೀತಿಯ ಆಪ್ ಗಳಿಂದ ಇನ್ನೂ ಏನೇನು ಮಾಡಬಹುದು ಎಂದು ನೀವೇ ತಿಳಿದುಕೊಳ್ಳಲು ಕ್ಲಿಕ್ ಮಾಡಿ

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot