ಯುವಕರಿಗೆಂದೇ ಬಂದಿದೆ ಇಂಟೆಕ್ಸ್ ಯುವ ಮೊಬೈಲ್

Posted By: Varun
ಯುವಕರಿಗೆಂದೇ ಬಂದಿದೆ ಇಂಟೆಕ್ಸ್ ಯುವ ಮೊಬೈಲ್

ಭಾರತದ ಮೊಬೈಲ್ ಉತ್ಪಾದಕ ಇಂಟೆಕ್ಸ್, ವಿನೂತನ ಮೊಬೈಲ್ ಫೋನುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ.

ಈಗ ಯುವಕರನ್ನು ಗಮನದಲ್ಲಿ ಇಟ್ಟುಕೊಂಡು ಇಂಟೆಕ್ಸ್, ಹೊಸ ಇಂಟೆಕ್ಸ್ ಯುವ ಹೆಸರಿನ ಕಡಿಮೆ ಬಜೆಟ್ ನ, 8 ಗಂಟೆ ಟಾಕ್ ಟೈಮ್ ಹಾಗು 500 ಗಂಟೆ ಸ್ಟಾಂಡ್ ಬೈ ಇರುವ ಮೊಬೈಲ್ ಒಂದನ್ನು ಬಿಡುಗಡೆ ಮಾಡಿದೆ.

ಯುವಕರು ಸಾಮಾನ್ಯವಾಗಿ ಮೊಬೈಲ್ ಬಳಕೆ ಹೆಚ್ಚಾಗಿಮಾಡುವುದರಿಂದ ಪದೇ ಪದೇ ಚಾರ್ಜ್ ಮಾಡುವ ಅವಶ್ಯಕತೆ ಬರಬಹುದು. ಜೊತೆಗೆ ಮ್ಯೂಸಿಕ್ ಪ್ಲೇಯರ್ ಹಾಗು ವೀಡಿಯೋಗಳನ್ನೂ ಬಳಸುವುದರಿಂದ ಹೆಚ್ಚು ಫೀಚರ್ ಹಾಗು ಸಾಮರ್ಥ್ಯದ ಬ್ಯಾಟರಿ ಬೇಕಾಗುತ್ತದೆ.

ಈ ಯುವ ಫೀಚರ್ ಫೋನಿನಲ್ಲಿ ಏನೇನಿದೆ ಎಂದು ಗೊತ್ತಾ:

 • 2.6 ಇಂಚು ಸ್ಕ್ರೀನ್

 • 1.3 ಮೆಗಾ ಪಿಕ್ಸೆಲ್ ಕ್ಯಾಮೆರಾ

 • ಬೇಡದ ಕರೆ ನಿರ್ಬಂಧಿಸಲು ಬ್ಲಾಕ್ ಲಿಸ್ಟ್ ಆಪ್ಶನ್.

 • ವಿಡಿಯೋ ಪ್ಲೇಯರ್ (15FPS, ಎವಿಐ, 3GP, MP4) ಒಳಗೊಂಡಿದೆ

 • ಆಡಿಯೋ ಪ್ಲೇಯರ್ (MP3 ಮತ್ತು AMR), ವಾಯ್ಸ್ ರೆಕಾರ್ಡರ್

 • ರೆಕಾರ್ಡಿಂಗ್ ಮಾಡಬಹುದಾದ ಸೌಲಭ್ಯ ಇರುವ FM ರೇಡಿಯೋ.

 • 16 ವರೆಗೆ ವಿಸ್ತರಿಸಬಹುದಾದ ಮೈಕ್ರೋ SD ಕಾರ್ಡ್

 • ಬ್ಲೂತೂತ್, USB ಕಾರ್ಡ್

 • ಗೇಮ್ಸ್, LED ಟಾರ್ಚ್

 • ಇಂಟರ್ನೆಟ್ ಹೊಂದಲು GPRS, WAP ಮತ್ತು ಎಂಎಂಎಸ್.

 • 1000 ಕಾಂಟ್ಯಾಕ್ಟ್ ಇಡಬಹುದಾದ ಫೋನ್ ಮೆಮೊರಿ

 • ಸ್ಮಾರ್ಟ್ ಡಯಲ್, ಕರೆ ದಾಖಲೆ, ಬ್ಯಾಟರಿ ಮ್ಯಾನೇಜರ್
 

ಈ ಮೊಬೈಲ್ 2,890 ರೂಪಾಯಿಗೆ ಕೊಳ್ಳಬಹುದಾಗಿದ್ದು ಕಪ್ಪು ಬಿಳಿ ಮತ್ತು ಬೆಳ್ಳಿ ಬಣ್ಣಗಳಲ್ಲಿ ಲಭ್ಯವಿದೆ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot