ಈ ಹೊಸ ಮೊಬೈಲ್ ನಿಮ್ಮ ಗಮನ ಸೆಳೆಯವುದು ಗ್ಯಾರಂಟಿ!

Posted By: Staff

ಈ ಹೊಸ ಮೊಬೈಲ್ ನಿಮ್ಮ ಗಮನ ಸೆಳೆಯವುದು ಗ್ಯಾರಂಟಿ!
ಸ್ಯಾಮ್ ಸಂಗ್ ಕಂಪೆನಿ ಎಲೆಕ್ಟ್ರಾನಿಕ್ಸ್ ಜಗತ್ತಿನಲ್ಲಿ ಅತ್ಯಂತ ಪ್ರಸಿದ್ಧ ಹೆಸರು. ಕಂಪೆನಿ ಈಗಾಗಲೇ ಸಾಕಷ್ಟು ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ಹಾಗೂ ಸಂಗೀತಕ್ಕೆ ಸಂಬಂಧಿಸಿದ ಉಪಕರಣಗಳನ್ನು ಬಿಡುಗಡೆ ಮಾಡಿದೆ. ಸ್ಯಾಮ್ ಸಂಗ್ ನ ಮೊಬೈಲುಗಳು ಜಗತ್ತಿನಾದ್ಯಂತ ಸದ್ದು ಹಾಗೂ ಸುದ್ದಿ ಎರಡನ್ನೂ ಮಾಡುತ್ತಿವೆ.

ಇದೀಗ ಹೊಸ ಸ್ಯಾಮ್ ಸಂಗ್ ಮೊಬೈಲ್ ಮಾರುಕಟ್ಟೆಗೆ ಬರುತ್ತಿದೆ. ಅದು ಹೊಸ ಸ್ಯಾಮ್ ಸಂಗ್ ವೇವ್ 3 ಎಸ್9500. ಇದೊಂದು ಅತ್ಯಾಧುನಿಕವಾದ ಸ್ಮಾರ್ಟ್ ಫೋನ್ ಆಗಿದ್ದು ಆಕರ್ಷಕ ರೂಪ, ವಿನ್ಯಾಸ, ಬೆಲೆ ಎಲ್ಲವನ್ನೂ ಹೊಂದಿದೆ. ಈ ಹೊಸ ಫೊನ್ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದು ಮಾರುಕಟ್ಟೆಗೆ ಬಂದ ಮೇಲೆ ಬಹಳಷ್ಟು ವ್ಯಾಪಾರವಾಗಿ ದಾಖಲೆ ಸೃಷ್ಟಿಸಿದರೂ ಆಶ್ಚರ್ಯವಿಲ್ಲ.

ಈ ಹೊಸ ಫೋನಿನಲ್ಲಿ ಏನೇನಿದೆ ವಿಶೇಷ ಎಂದು ನೋಡಹೊರಟರೆ ಆಧುನಿಕ ಫೋನಿನಲ್ಲಿ ಗ್ರಾಹಕ ಏನೇನು ವಿಶೇಷತೆಗಳನ್ನು ಬಯಸುತ್ತಾನೋ ಅದೆಲ್ಲವೂ ಇದೆ. ಜೊತೆಗೆ ದೊಡ್ಡ 2.0 ಆಪರೇಟಿಂಗ್ ಸಿಸ್ಟಮ್, 1.4 ಗಿಗಾಹರ್ಟ್ಸ್ ಪ್ರೊಸೆಸರ್, 4 ಇಂಚುಗಳ ಸೂಪರ್ ಅಮೋಲ್ಡ್ ಪರದೆ, 5 ಎಂ.ಪಿ ಕ್ಯಾಮೆರಾ ಮತ್ತು ವಿಜಿಎ ಫ್ರಂಟ್ ಕ್ಯಾಮೆರಾ, 4 ಜಿಬಿ ಆಂತಿಕ ಮೆಮೊರಿ ಜೊತೆಗೆ ವಿಸ್ತರಿಸಬಹುದಾದ ಹೊಸ ಮೆಮರಿ ಲಭ್ಯವಿದೆ.

ಮಾರುಕಟ್ಟೆಗೆ ಬರುವ ಮೊದಲು ಬೆಲೆ ನಿರ್ಧರಿಸಲ್ಪಡಲಿದ್ದು ನಂತರ ವಿಶೇಷತೆಯ ಜೊತೆಗೆ ಬೆಲೆ ಕೂಡ ಆಕರ್ಷಕವಾಗಿದ್ದರೆ ಮಾರಾಟ ಜೋರಾಗಿರುವುದರಲ್ಲಿ ಯಾವ ಸಂದೇಹವೂ ಇಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot