Subscribe to Gizbot

ಅರೆರೇ...ನೋಕಿಯಾ ಹೊಸ ಸ್ಮಾರ್ಟ್ ಫೋನ್ 'ಸೀ ರೇ'

Posted By: Super
ಅರೆರೇ...ನೋಕಿಯಾ ಹೊಸ ಸ್ಮಾರ್ಟ್ ಫೋನ್ 'ಸೀ ರೇ'
ನ್ಯೂಯಾರ್ಕ್ ಜೂ 29: ಮೊಬೈಲ್ ಉತ್ಪಾದನೆ ಹಾಗೂ ಮಾರಾಟದಲ್ಲಿ ಜಗತ್ತಿನ ಅಗ್ರಗಣ್ಯ ಸಂಸ್ಥೆ ನೋಕಿಯಾ, ಭಾರತದಲ್ಲಿ ಬೃಹತ್ ಪ್ರಮಾಣದಲ್ಲಿ ಗ್ರಾಹಕರನ್ನು ಹೊಂದಿದೆ. ಸದ್ಯದಲ್ಲಿಯೇ ಹೊಸ ಮಾದರಿಯ ಡಜನ್ ಗಟ್ಟಲೆ ಮೊಬೈಲ್ ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮಹತ್ತ್ವಾಕಾಂಕ್ಷೆ ಹೊಂದಿದೆ.

ಹೊಸದೊಂದು ಅಧ್ಯಾಯ ಬರೆಯಲು ಸನ್ನದ್ಧವಾಗಿರುವ ನೋಕಿಯಾ, ಅಂಡ್ರ್ಯಾಡ್ ಹೊಂದಿರುವ ಸ್ಮಾರ್ಟ್ ಫೋನ್ ಅಥವಾ ವಿಂಡೋಸ್ ಆಧಾರಿತ ಆಪರೇಟಿಂಗ್ ಸಿಸ್ಟಮ್ ಇರುವ ಮೊಬೈಲ್ ಫೋನ್ ಮಾರುಕಟ್ಟೆಗೆ ಬಿಡುಗಡೆಮಾಡುವ ಮೂಲಕ ನೋಕಿಯಾ ಯಶಸ್ಸಿನ ನಾಗಾಲೋಟವನ್ನು ಮುಂದುವರಿಸಲಿದೆ.

'ಸೀ ರೇ' (Sea Ray) ಎಂಬ ಹೆಸರಿನ ಸ್ಮಾರ್ಟ್ ಫೋನ್, ಸದ್ಯ ಬಿಡುಗಡೆಯಾಗಿರುವ ನೋಕಿಯಾ N9 ನ್ನು ಸಾಕಷ್ಟು ಹೋಲುತ್ತದೆ ಎನ್ನಲಾಗಿದೆ. ಇದು ಬಿಡುಗಡೆಯಾದಾಗ ಜಗತ್ತಿನ ತುಂಬೆಲ್ಲಾ ಸಾಕಷ್ಟು ಸದ್ದು ಮಾಡಲಿದೆಯಲ್ಲದೇ ಕಂಪನಿಯ ಬೊಕ್ಕಸಕ್ಕೆ ಸಂಪತ್ತಿನ ಸಾಗರವೇ ಹರಿದು ಬರಲಿದೆ. 'ಡಬಲ್ ಸಿಮ್' ಮೊಬೈಲ್ ಮಾರಾಟದ ಮೂಲಕ ಈಗಾಗಲೇ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನೋಕಿಯಾ ಸಾಮಾನ್ಯ ಜನರನ್ನೂ ಈಗಾಗಲೇ ತಲುಪಿದ್ದಾಗಿದೆ.

'ಸೀ ರೇ' 8 ಮೆಗಾ ಫಿಕ್ಸೆಲ್ ಕೆಮರಾ ಹೊಂದಿದ್ದು ಶ್ರೇಷ್ಠ ಗುಣಮಟ್ಟದ ಇಮೇಜ್ ನೀಡಬಲ್ಲ ಝೀಸಸ್ ಲೆನ್ಸ್ ಹೊಂದಿದ್ದು, ಅತೀ ವೇಗದ ಚಾಲನೆಗೆ ಅನುವಾಗುವಂತೆ 1 GHz ಪ್ರೊಸೆಸರ್ ಹೊಂದಿದೆ. ಅತ್ಯಾಧುನಿಕ ಮನೊರಂಜನೆ ಹಾಗೂ ತಾಂತ್ರಿಕ ಗುಣಮಟ್ಟ ಹೊಂದಿರುವುದು ಖಾತ್ರಿ. ಆದರೆ ಈಗಲೇ ನಿಮ್ಮ ಕೈಯಲ್ಲಿ ಬರಲಾರದು. ಕಾರಣ ಇನ್ನೂ ದರ ನಿಗದಿಯಾಗಿಲ್ಲದ ಈ ಸೀ ರೇ, ಬರುವ ಡಿಸಂಬರ್ ವೇಳೆಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot