ಹಲೋ... ಬಂದಿದೆ ಸ್ಪೈಸ್ ನ 2 ಹೊಸ ಮೊಬೈಲ್

Posted By: Staff

ಹಲೋ... ಬಂದಿದೆ ಸ್ಪೈಸ್ ನ 2 ಹೊಸ ಮೊಬೈಲ್
ಮುಂಬೈ. ಜೂ 29: ಚೆನ್ನಾಗಿರುವ ಮೊಬೈಲ್ ನಮ್ಮ ಕೈನಲ್ಲೇ ಇದ್ದರೂ ಹೊಸದು ಬೇಕೆನಿಸುತ್ತದೆ ಅಲ್ಲವೇ? ನಿಮ್ಮ ಹುಡುಕಾಟಕ್ಕೆ ಇನ್ನಷ್ಟು ಆಯ್ಕೆಯಾಗಿ ಮಾರುಕಟ್ಟೆಯಲ್ಲಿವೆ 'ಸ್ಪೈಸ್ Mi-270 ಮತ್ತು ಸ್ಪೈಸ್ Mi-410' ಮೊಬೈಲ್ ಗಳು. ನಿಮ್ಮ ನಾಡಿಮಿಡಿತಕ್ಕೆ ಇದು ಸರಿ ಹೊಂದಬಹುದು ನೋಡಿ!

'ಸ್ಪೈಸ್' ಭಾರತದ ಬೃಹತ್ ಮೊಬೈಲ್ ಕಂಪನಿಗಳಲ್ಲೊಂದು. ಉನ್ನತ ತಂತ್ರಜ್ಞಾನ ಹಾಗೂ ವಿವಿಧ ಆಕರ್ಷಕ ನಮೂನೆಗಳಲ್ಲಿ ಲಭ್ಯವಿರುವ ಸ್ಪೈಸ್ ಮೊಬೈಲ್ ಈಗಾಗಲೇ ಭಾರತೀಯರ ಮನೆ-ಮನ ತಲುಪಿಯಾಗಿದೆ. ಟ್ರಿಪಲ್ ಸಿಮ್ ಕಾರ್ಡ್, ಪ್ರೊಜೆಕ್ಟರ್ ಸಹಿತ ಲಭ್ಯವಿರುವ ಮೊಬೈಲ್ ಗಳೊಂದಿಗೆ ಕೈಗೆಟಕುವ ಬೆಲೆ ಈ ಕಂಪನಿಯ ವಿಶೇಷತೆಯಾಗಿದೆ.

ಇದೀಗ ಮಾರುಕಟ್ಟೆಗೆ ಬಂದಿರುವ ಸ್ಪೈಸ್ Mi-270 ಮತ್ತು ಸ್ಪೈಸ್ Mi-410 ಎಂಬ ಇನ್ನೆರಡು ಮಾದರಿಗಳು ಆಕರ್ಷಕ ಹಾಗೂ ಈಗಿನ ಕಾಲಕ್ಕೆ ತಕ್ಕ ವಿನ್ಯಾಸ ಹೊಂದಿವೆ.

ಸ್ಪೈಸ್ Mi-270 ಸ್ಪೈಸ್ Mi-410
3.7" ಅಗಲದ ಟಚ್ ಸ್ಕ್ರೀನ್ 4.1" ಅಗಲದ ಟಚ್ ಸ್ಕ್ರೀನ್
2 ಮೆಗಾ ಪಿಕ್ಸಲ್ ಕೆಮರಾ 5 ಮೆಗಾ ಪಿಕ್ಸಲ್ ಕೆಮರಾ(High Definition)
High Definition H-263 ವಿಡಿಯೊ High Definition H-263 ವಿಡಿಯೊ/td>
3.5 mm ಆಡಿಯೊ ಜಾಕ್ 3.5 mm ಆಡಿಯೊ ಜಾಕ್
ಬ್ಲೂ ಟೂಥ್,Wi-Fi,2G 3G, Wi-Fi, ಬ್ಲೂ ಟೂಥ್
Android OS ಫ್ರೋಯೊ Version Android OS ಜಿಂಜರ್ ಬ್ರೆಡ್
ಈ ಸೌಲಭ್ಯಗಳೊಂದಿಗೆ ಎರಡೂ ಮಾದರಿಗಳು ಎಫ್ ಎಂ, ಡಿಜಿಟಲ್ ಝೂಮ್ ವಿಡಿಯೊ ರೆಕಾರ್ಡಿಂಗ್ ಹಾಗೂ ಇಂಟರ್ನಲ್ ಮೆಮರಿ ಮತ್ತು 32 GB ಮೈಕ್ರೋ SD Card ಹೊಂದಿವೆ. ಸರಿ, ಇನ್ನೇಕೆ ತಡ... 'ಶೋರೂಂ' ಹೋಗಿ ನೋಡಿ. ಹೊಸ ಮಾದರಿಯ ಸ್ಪೈಸ್ ಗಳನ್ನು ಕೊಂಡು ನೀವೂ ಸ್ಪೈಸಿ ಆಗಬಹುದು.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot