Subscribe to Gizbot

ಮೊಟೊರೊಲಾ ಮೊಬೈಲ್ಸ್ ಜೋಡಿಯ ಮೋಡಿ ನೋಡಿ!

Posted By: Super

ಮೊಟೊರೊಲಾ ಮೊಬೈಲ್ಸ್ ಜೋಡಿಯ ಮೋಡಿ ನೋಡಿ!
ನವದೆಹಲಿ, ಜೂ 30: ಜಗತ್ತಿನ ಮುಂಚೂಣಿಯಲ್ಲಿರುವ ಮೊಬೈಲ್ ತಯಾರಿಕಾ ಕಂಪೆನಿಗಳಲ್ಲಿ ಮೊಟೊರೊಲಾ ಕೂಡ ಒಂದು. ಅಮೆರಿಕಾ ಮತ್ತು ಏಷ್ಯಾ ಮಾರುಕಟ್ಟೆಯಲ್ಲಿ ಬಹಳಷ್ಟು ಗ್ರಾಹಕರನ್ನು ಇದು ಹೊಂದಿದೆ. ಮುಂದಿನ 5 ರಿಂದ 8 ವರ್ಷಗಳಲ್ಲಿ ನಂ.1 ಸ್ಥಾನಕ್ಕೆ ಲಗ್ಗೆ ಹಾಕುವ ಮಹತ್ವಾಕಾಂಕ್ಷೆ ಹೊಂದಿದೆ.

ಮೊಟೊರೊಲಾ ಇಷ್ಟರಲ್ಲೇ 2 ಹೊಸ ಮೊಬೈಲ್ ಗಳನ್ನು ಭಾರತದ ಮಾರುಕಟ್ಟೆಗೆ ಬಿಡಲಿದೆ. ಅವು ಮೊಟೊರೊಲಾ ಥಿಯರಿ ಮತ್ತು ಮೊಟೊರೊಲಾ ಟೈಟಾನಿಯಮ್. ಮೊಟೊರೊಲಾ ಥಿಯರಿ ಬೇಸಿಕ್ ಮಾದರಿಯು, ಕೆಳವರ್ಗದ ಜನರಿಗೆ ಇಷ್ಟವಾಗಬಲ್ಲ ಮಲ್ಟಿಮೀಡಿಯಾ ಮೊಬೈಲ್. ಆದರೆ ಮೊಟೊರೊಲಾ ಟೈಟಾನಿಯಮ್, ಮಧ್ಯಮ ಹಾಗೂ ಮೇಲ್ವರ್ಗದ ಜನರಿಗೆ ರೀಚ್ ಆಗಬಲ್ಲದು. ಇವುಗಳ ವಿಶೇಷತೆಗಳನ್ನು ಈ ರೀತಿ ಪಟ್ಟಿಮಾಡಬಹುದು.

ಮೊಟೊರೊಲಾ ಥಿಯರಿ : ಇದು ಜಾವಾ ಆಧಾರತ ಸಾಫ್ಟ್ ವೇರ್ ಹೊಂದಿದೆ. ಕ್ಯಾಂಡಿ ಬಾರ್ ಆಕಾರದಲ್ಲಿರುವ ಇದು QWERTY Keypad ಹಾಗೂ 1.3 ಮೆಗಾ ಪಿಕ್ಸಲ್ ಕೆಮರಾ, ಬ್ಲೂ ಟೂಥ್ ಹೊಂದಿರುತ್ತದೆ.

ಮೊಟೊರೊಲಾ ಟೈಟಾನಿಯಮ್: ಇದು ಆಂಡ್ ರಾಯಿಡ್ ಆಧಾರತ ಸಾಫ್ಟ್ ವೇರ್ ಹೊಂದಿದೆ. QWERTY Keypad ನ ಜೊತೆ ಟಚ್ ಸ್ಕ್ರೀನ್ ದೊಡ್ಡ ಡಿಸ್ಪ್ಲೇ ಹೊಂದಿರುವ ಇದಕ್ಕೆ 5 ಮೆಗಾ ಪಿಕ್ಸಲ್ ಕೆಮರಾ ಇದೆ. ಬ್ಲೂ ಟೂಥ್| Wi-Fi ಟೆಕ್ನಾಲಜಿ ಬಳಸಿಕೊಂಡಿರುವ ಇದು ಸ್ಮಾರ್ಟ್ ಫೋನ್ ರೀತಿ 3 G ನೆಟ್ ವರ್ಕ್ ಕನೆಕ್ಷನ್ ಹೊಂದಿದೆ.

ಇವೆಲ್ಲವುಗಳ ಜೊತೆಗೆ - ವಿಡಿಯೊ ರೆಕಾರ್ಡಿಂಗ್, ವಿಡಿಯೊ ಪ್ಲೇಯರ್, ಮ್ಯೂಸಿಕ್ ಪ್ಲೇಯರ್, ಎಫ್ ಎಂ ರೇಡಿಯೊ ವಿತ್ RDS, 3.5 MM ಹೆಡ್ ಫೋನ್ ಜಾಕ್ ವಿತ್ ಎಕ್ಸ್ ರ್ಟನಲ್ ಸ್ಪೀಕರ್ ಸೌಲಭ್ಯಗಳು ಕೂಡ ಲಭ್ಯ. ಇನ್ನೇನು ಒಂದೆರಡು ದಿನಗಳಲ್ಲಿ ಮಾರುಕಟ್ಟೆ ತಲುಪಲಿರುವ ಇದರ ಬೆಲೆ ಇನ್ನೂ ನಿಗದಿಯಾಗಿಲ್ಲ.

ಬೇಕಾದಷ್ಟು ಮಾಹಿತಿ ಸಿಕ್ಕಿದೆ ನಿಮಗೆ. ಮನಸೆಳೆಯುವ ಮೊಬೈಲ್ ನಿಮ್ಮ ಕೈನಲ್ಲಿರಲಿ. ಇನ್ನು ಯಾವಾಗ ಯಾವ ಶೋ ರೂಂ ಗೆ ಹೋಗಿ ತರ್ತೀರಾ ಮೊಟೊರೊಲಾ? ಸದ್ಯದಲ್ಲಿಯೇ ನಿರ್ಧಾರ ಮಾಡಿ ಶೋ ರೂಂ ಗೆ ಓಡಿ...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot