ನೋಕಿಯಾ ಸಿಂಬಿಯನ್ ಅಣ್ಣಾ OS ನಲ್ಲಿ E6 & X7

Posted By: Staff

ನೋಕಿಯಾ ಸಿಂಬಿಯನ್ ಅಣ್ಣಾ OS ನಲ್ಲಿ E6 & X7
ನೋಕಿಯಾ ಹೆಸರು ಮೊಬೈಲ್ ಜಗತ್ತಿನಲ್ಲಿ ಚಿರಪರಿಚಿತ. ಕೈಗೆಟಕುವ ಬೆಲೆಯಲ್ಲಿ ಹೊಸ ವಿನ್ಯಾಸ, ಆಕರ್ಷಕ ಬಣ್ಣ, ಅತ್ಯಾಧುನಿಕ ತಂತ್ರಜ್ಞಾನಗಳನ್ನೊಳಗೊಂಡ ನವೀನ ಮಾದರಿಯ ಮೊಬೈಲ್ ಗಳು ಮಾರುಕಟ್ಟೆಯಲ್ಲಿ ಈಗಾಗಲೇ ಸಾಕಷ್ಟಿವೆ.

ಇವುಗಳ ಜೊತೆ ಈಗ ನೋಕಿಯಾ ಈಗಾಗಲೇ ಬಿಡುಗಡೆ ಮಾಡಿರುವ ಸಿಂಬಿಯನ್ ಅಣ್ಣಾ ಮೊಬೈಲ್ ನ್ನು ಇನ್ನೂ ಉನ್ನತೀಕರಿಸಿ ಸ್ಟ್ಯಾಂಡರ್ಡ್ ಪ್ರೀ ಇನ್ ಸ್ಟಾಲ್ಡ್ OS ನೊಂದಿಗೆ E6 ಮತ್ತು X7 ಎಂಬ 2 ಮಾದರಿಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮಿಂಚಲು ಅಗತ್ಯವರುವ ಎಲ್ಲಾ ಮಲ್ಟಿಮೀಡಿಯಾ ಸೌಲಭ್ಯಗಳನ್ನು ಹೊಂದಿದೆ.

ನೋಕಿಯಾ E6 ಆಧುನಿಕ ಮೊಬೈಲ್ ಗಳಲ್ಲಿರುವ ಎಲ್ಲಾ ಸೌಲಭ್ಯಗಳೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಇನ್ನೂ ಅನೇಕ ವಿಶೇಷತೆಗಳನ್ನು ಹೊಂದಿದೆ.

ನೋಕಿಯಾ E6 ನ ವಿಶೇಷತೆಗಳು:
* ಸಿಂಬಿಯನ್ ಅಣ್ಣಾ OS
* 8 ಮೆಗಾ ಪಿಕ್ಸೆಲ್ ಕೆಮರಾ
* Wi-Fi ಸಹಕಾರ
* 720p ವಿಡಿಯೊ ರೆಕಾರ್ಡಿಂಗ್
* ಬ್ಲೂ ಟೂಥ್ 3.0 ಡತ್ RDR
* ವಿಡಿಯೊ ಕರೆಗಾಗಿ VGA 'ಫ್ರಂಟ್ ಕೆಮರಾ'
* 14 MBPS ವರೆಗಿನ 3G ಇಂಟರ್ ನೆಟ್ ಸ್ಪೀಡ್ಸ್
* ಜಾವಾ ತಂತ್ರಜ್ಞಾನ
* 7 ತಾಸು ಬ್ಯಾಟರಿ ಬ್ಯಾಕಪ್| 3 ದಿನಗಳ ಸ್ಟ್ಯಾಂಡ್ ಬೈ

ನೋಕಿಯಾ X7 ಇದು 16 ಮಿಲಿಯನ್ ಬಣ್ಣ, 640x360 ರೆಸೊಲ್ಯೂಶನ್ ಹೊಂದಿರುವ 'ಅಮೋಲೆಡ್' ಸ್ಕ್ರೀನ್ ಹೊಂದಿದೆ. ಎಂಟರ್ ಟೈನ್ ಮಂಟ್ ಫೋನ್ ಆಗಿರುವ ಇದರ ಬಹುಮುಖ್ಯ ಉಪಯೋಗವೆಂದರೆ ಇದು ಬಿದ್ದಾಗ ಉಂಟಾಗಬಹುದಾದ ಗೀರುಗಳು ಮತ್ತು ಒಡೆಯುವಿಕೆಯನ್ನು ತಡೆಯುತ್ತದೆ. ಇದು 320MB ಒಳ ಮೆಮೊರಿಯ ಜೊತೆಗೆ 32GB ಗೆ ವಿಸ್ತರಿಸಬಹುದಾದ ಮೆಮೊರಿ ಸೌಲಭ್ಯ ಹೊಂದಿದೆ.

E6 ನಂತೆ ಇದು ಕೂಡ 2G ಹಾಗೂ ಅತಿ ವೇಗದ 3G ನೆಟ್ ವರ್ಕ್ ಹೊಂದಿದೆ. ಆದರೆ E6 ನಂತೆ 7 ತಾಸುಗಳ ಬದಲಾಗಿ 4.5 ತಾಸುಗಳ ಬ್ಯಾಟರಿ ಬ್ಯಾಕಪ್ ಹೊಂದಿದೆ. ಹೆಚ್ಚು ರೆಸೊಲ್ಯೂಷನ್ ಹೊಂದಿರುವ 720P ವಿಡಿಯೊ ರೆಕಾರ್ಡಿಂಗ್ ಇದೆ. E6 ನ ಬೆಲೆ ರು. 18,000 ಹಾಗೂ X7 ನ ಬೆಲೆ ರು. 22829

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot