ಬರುತ್ತಿವೆ ನೋಕಿಯಾದ 4 ಸ್ಮಾರ್ಟ್ ಮೊಬೈಲ್ಸ್

Posted By: Staff

ಬರುತ್ತಿವೆ ನೋಕಿಯಾದ 4 ಸ್ಮಾರ್ಟ್ ಮೊಬೈಲ್ಸ್
ಬೆಂಗಳೂರು. ಜು 01. ಹಾಯ್... ನೀವು ಯಾವ ಮೊಬೈಲ್ ನಲ್ಲಿ 'ಹಲೋ' ಹೇಳುತ್ತಿದ್ದೀರ! ನೋಕಿಯಾ ತಾನೇ... ಯು ಆರ್ ಸ್ಮಾರ್ಟ್. ಇನ್ನೂ ಸ್ಮಾರ್ಟ್ ಆಗಿ. ಈಗ ನೋಕಿಯಾ ಇನ್ನೂ ಸ್ಮಾರ್ಟ್! ಅರ್ಥವಾಗಲಿಲ್ಲವೇ? ಮುಂದೆ ಓದಿ...

ನೋಕಿಯಾ ಸ್ಮಾರ್ಟ್ ಕಂಪೆನಿ ಎಂಬುದು ಜಗತ್ತಿಗೇ ಗೊತ್ತು. ಗೊತ್ತಿರುವುದಕ್ಕಿಂತ ಹೆಚ್ಚು ಸ್ಮಾರ್ಟ್ ಎಂದು ಭಾರತದಲ್ಲಿ ಪ್ರೂವ್ ಮಾಡಲು ನೋಕಿಯಾ ತರುತ್ತಿದೆ ಹೊಸ 4 S40 ಸ್ಮಾರ್ಟ್ ಫೋನ್ಸ್. ಹೆಸರಿಗೆ ತಕ್ಕಂತೆ ಬಲು ಆಕರ್ಷಕವಾಗಿರುವ ಇದು 1 GHz ಪ್ರೊಸೆಸ್ಸರ್ ಹೊಂದಿದ್ದು ಸಾಕಷ್ಟು ಜನಪ್ರಿಯವಾಗುವುದರಲ್ಲಿ ಸಂದೇಹವೇ ಇಲ್ಲ.

ನೋಕಿಯಾ ಸಂಸ್ಥೆಯಿಂದ ಸದ್ಯ ಬಿಡುಗಡೆಯಾಗುತ್ತಿರುವ 4 ಮೊಬೈಲ್ ಗಳು:
ನೋಕಿಯಾ 701 - ಹೆಲೆನ್,
ನೋಕಿಯಾ 700 - ಝೇಟಾ,
ನೋಕಿಯಾ 600 - ಸಿಂಡಿ,
ನೋಕಿಯಾ 500 - ಫೇಟ್

1 GHz ಪ್ರೊಸೆಸರ್ ಹೊಂದಿರುವ ನೋಕಿಯಾ 701 - ಹೆಲೆನ್, ನೋಕಿಯಾ 700 - ಝೇಟಾ, ಸಿಂಬಿಯನ್ - ಬೆಲ್ಲಿಯ ಆಕರ್ಷಕ ಆವೃತ್ತಿಯಾಗಿದ್ದು ಎಂತವರನ್ನೂ ತಕ್ಷಣ ಮೋಡಿ ಮಾಡಬಲ್ಲದು. ನವೀಕರಿಸಲ್ಪಟ್ಟಿರುವ ಈ ಮೊಬೈಲ್ ಬ್ರೌಸರ್ OVI ವರ್ಷನ್ 8.1 ನ ಅತಿ ವೇಗ ಹಾಗೂ ಸುಲಭಸಾಧ್ಯದ್ದಾಗಿದೆ.

ಇನ್ನು ನೋಕಿಯಾ 600 - ಸಿಂಡಿ ಮತ್ತು ನೋಕಿಯಾ 500 - ಫೇಟ್ ವಿಷಯಕ್ಕೆ ಬಂದರೆ ಇದು ಸಿಂಬಿಯನ್ ಅಣ್ಣಾ ಆಧಾರಿತವಾಗಿರಬೇಕು ಎಂದು ಹೇಳಲಾಗುತ್ತಿದೆ. ಮುಂದೆ 1 GHz ಆಧಾರಿತ ಸ್ಮಾರ್ಟ್ ಫೋನ್ ಸದ್ಯದಲ್ಲೇ ಬರಲಿದೆ ಎಂಬುದು ನಿಶ್ಚಿತ.

ನೋಕಿಯಾ ಈಗ ವಿಂಡೋಸ್ ಆಧಾರಿತ ಹೊಸ ಸ್ಮಾರ್ಟ್ ಫೋನ್ ಬಿಡುಗಡೆಯತ್ತ ತನ್ನ ಗಮನ ಕೇಂದ್ರೀಕರಿಸುತ್ತಿದ್ದರೂ ಕೂಡ ಭವಿಷ್ಯದಲ್ಲಿ ಸಿಂಬಿಯನ್ ಸ್ಮಾರ್ಟ್ ಫೋನ್ ತರುವ ಮಹತ್ವಾಕಾಂಕ್ಷೆ ಹೊಂದಿದೆ ಎಂಬ ಆಶಾವಾದ ಎಲ್ಲರಲ್ಲಿ ಮನೆಮಾಡಿದೆ. ಒಟ್ಟನಲ್ಲಿ ಜಗತ್ತಿನ ಅತ್ಯಂತ ಜನಪ್ರಿಯ ಮೊಬೈಲ್ ಕಂಪೆನಿ ನೋಕಿಯಾ ದತ್ತ ಈಗ ಎಲ್ಲರ ಚಿತ್ತ ಮನೆಮಾಡಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot