ಹಲೋ ಬಂದಿದೆ! ಸ್ಪೈಸ್ ನ ಟ್ರಾನ್ಸ್ ಫಾರ್ಮರ್ ಫೋನ್...

Posted By: Staff

ಹಲೋ ಬಂದಿದೆ! ಸ್ಪೈಸ್ ನ ಟ್ರಾನ್ಸ್ ಫಾರ್ಮರ್ ಫೋನ್...
ಬೆಂಗಳೂರು. ಜು 1: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮೂಲ ಅಗತ್ಯಗಳಲ್ಲೊಂದಾಗಿರುವುದರ ಜೊತೆಗೆ ಫ್ಯಾಷನ್ ಪ್ರಿಯರನ್ನೂ ಸೆಳೆಯುತ್ತಿದೆ. ಅದು ಸಿನಿಮಾ ಅಥವಾ ನಟ-ನಟಿಯರ ಆರಾಧನೆಯೊಂದಿಗೆ ತಳುಕು ಹಾಕಿಕೊಂಡು ಅವರ ಮೊಬೈಲ್ ಕೂಡ ಇನ್ ಸ್ಪಿರೇಶನ್ ಆಗುತ್ತಿದೆ. ಬಗೆಬಗೆಯ ಆಕರ್ಷಕ ಮೊಬೈಲ್ ಗಳು ಹೊಸ ಹೊಸ ವಿನ್ಯಾಸಗಳೊಂದಿಗೆ ಯುವ ಪೀಳಿಗೆಯನ್ನು ಹೆಚ್ಚಾಗಿ ಆಕರ್ಷಿಸುತ್ತಿವೆ.

ಸ್ಪೈಸ್ ಕಂಪನಿ "ಟ್ರಾನ್ಸ್ ಫಾರ್ಮರ್ ಸಾಗಾ(Transformers Saga)" ಸುಪರ್ ಹಿಟ್ ಸಿನಿಮಾದಿಂದ ಸ್ಪೂರ್ತಿಪಡೆದು 'ಟ್ರಾನ್ಸ್ ಫಾರ್ಮರ್' ಹೆಸರಿನ ಮೊಬೈಲ್ ಮಾರುಕಟ್ಟೆಗೆ ತಂದಿದೆ. ಭಾರತದಲ್ಲಿ ಪ್ರಪ್ರಥಮವಾಗಿ ಅಡಿಯಿಡುತ್ತಿರುವ ಟ್ರಾನ್ಸ್ ಫಾರ್ಮರ್ ಫೋನ್ ಇದಾಗಿದೆ.

ಹೆಸರಿಗೆ ತಕ್ಕಂತೆ ಇದು ಕ್ಷಣಾರ್ಧದಲ್ಲಿ ಟ್ರೆಂಡಿ ಬಾರ್ ಮಾದರಿಯಿಂದ ಟಚ್ ಸ್ಕ್ರೀನ್ ಆಧಾರಿತ ಮೊಬೈಲ್ ಗೆ ಬದಲಾವಣೆ ಹೊಂದುತ್ತದೆ. ಆಕಾರವನ್ನು ತಕ್ಷಣ ಬದಲಾಯಿಸುವುದಲ್ಲದೇ Sci-Fi ಸೌಂಡ್ ಕೂಡ ಇರುವುದು ಗಮನಾರ್ಹವಾಗಿದೆ.

ಈ ಮೊಬೈಲ್ ಬೇರೆ ಅತ್ಯಾಧುನಿಕ ಮೊಬೈಲ್ ಗಳಂತೆ ಮಲ್ಟಿಮೀಡಿಯಾ, ಮಲ್ಟಿ ಫಾರ್ಮೆಟ್ ಆಡಿಯೊ ಮತ್ತು ವಿಡಿಯೊ ಪ್ಲೇಯರ್, ಎಫ್ ಎಂ ರೇಡಿಯೊ ಮತ್ತು ಸ್ಟಿರಿಯೊ ಸ್ಪೀಕರ್ ಹಾಗೂ ಯುನಿವೆರಸೆಲ್ ಜಾಕ್ ಹೊಂದಿದೆ.

ಇದರ ವಿಶೇಷತೆಗಳು ಈ ರೀತಿ ಇವೆ:
* ಡ್ಯುಯಲ್ ಸಿಮ್ ಸೌಲಭ್ಯ
* 1.3 ಮೆಗಾ ಪಿಕ್ಸಲ್ ಕೆಮರಾ
* ಮೈಕ್ರೋ SD ಬಳಸಿ 8GB ತನಕ ವಿಸ್ತರಿಸಬಹುದಾದ ಮೆಮೊರಿ ಸ್ಲಾಟ್
* ಮ್ಯೂಸಿಕ್ ಪ್ಲೇಯರ್
* ಜಾವಾ ತಾಂತ್ರಿಕತೆ ಆಧಾರಿತ
* ಬ್ಲೂ ಟೂಥ್

ಇಷ್ಟೆಲ್ಲ ಸೌಲಭ್ಯಗಳಿದ್ದರೂ ಇದು ಭಾರತದಲ್ಲಿ ನಂಬಲಸಾಧ್ಯವಾದ ಕಡಿಮೆ ಬೆಲೆ ಕೇವಲ ರು. 4599 ಕ್ಕೆ ದೊರೆಯುತ್ತದೆ. ಈ ಹೊಸ ಟ್ರಾನ್ಸ್ ಫಾರ್ಮರ್ ಮೂಲಕ ಸ್ಪೈಸ್ ಕಂಪನಿಯು ಮೊಬೈಲ್ ಮಾರಾಟದಲ್ಲಿ ಹೊಸ ದಾಖಲೆ ಬರೆಯುವ ಕಾಲ ಸನ್ನಿಹಿತವಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot