ಎಚ್ ಟಿಸಿಯ ಹೊಸ "ಮೈ ಟಚ್"ನಲ್ಲಿ ಏನೋ ಇದೆ

Posted By: Staff

ಎಚ್ ಟಿಸಿಯ ಹೊಸ
ಮೊಬೈಲ್ ನ ಸ್ಮಾರ್ಟ್ ಫೋನ್ ಜಗತ್ತಿನಲ್ಲಿ 'ಎಚ್ ಟಿಸಿ ' ದೊಡ್ಡಣ್ಣ. ಇಂದು ಜಗತ್ತಿನಲ್ಲಿ ಸಿಗುವ ಸ್ಮಾರ್ಟ್ ಫೋನ್ ಗಳ ಪೈಕಿ ಹೆಚ್ ಟಿಸಿ ಗೆ ಅಗ್ರ ಸ್ಥಾನ ದೊರೆಯಲು ಕಾರಣ ಅದರ ಉನ್ನತ ಮಟ್ಟದ ಗ್ರಾಹಕ ಸೇವೆ ಮತ್ತು ಮಾರಾಟದಲ್ಲಿ ಅದು ಅನುಸರಿಸುತ್ತಿರುವ 'ದಿ ಬೆಸ್ಟ್' ಅಂಶಗಳು. ಭಾರತೀಯ ಮಾರುಕಟ್ಟೆಯಲ್ಲಿಯೂ ಹೆಚ್ ಟಿಸಿ ಸಾಕಷ್ಟು ಜನಪ್ರಿಯ ಬ್ರಾಂಡ್.

ಇದೀಗ ಅದು, ಭಾರತದ ಮಧ್ಯಮ ಹಾಗೂ ಮೇಲ್ವರ್ಗದ ಜನರನ್ನು ಗಮನದಲ್ಲಿಟ್ಟು ತನ್ನ ಮೊಬೈಲ್ ಮಾರಾಟ ಜಾಲವನ್ನು ವಿಸ್ತರಿಸುತ್ತಿದೆ. ಹೊಸದಾಗಿ ಭಾರತದ ಮಾರುಕಟ್ಟಗೆ ಎಚ್ ಟಿಸಿ, 'ಮೈ ಟಚ್' ಎಂಬ ಮೊಬೈಲ್ ಬಿಡುಗಡೆ ಮಾಡಲಿದೆ. ಇಲ್ಲಿ ದೊರೆಯುವ ಎಚ್ ಟಿಸಿ ಕಂಪನಿಯ ಮೊಬೈಲ್ ಗಳಲ್ಲಿ 'ಮೈ ಟಚ್' ಅತ್ಯಂತ ಕಡಿಮೆ ಬೆಲೆ ಹೊಂದಿದೆ. ಆದರೆ ಇದಕ್ಕೆ ಅಳವಡಿಸಿರುವ ತಂತ್ರಜ್ಞಾನದಲ್ಲಿ ಯಾವುದೇ ಕೊರತೆಯಿಲ್ಲ.

ಎಚ್ ಟಿಸಿ ಯ ಮೈ ಟಚ್, 3.2 ಇಂಚು ಅಗಲದ ಡಿಸ್ ಪ್ಲೇ ಸ್ರ್ಕೀನ್ ಹೊಂದಿರುವ ಸ್ಪಷ್ಟ ಚಿತ್ರಣ ನೀಡಬಲ್ಲ ಪುಟ್ಟ ಮೊಬೈಲ್. ಮೈ ಟಚ್ ನಿಮ್ಮ ಕೈಯಲ್ಲಿರುವಾಗ ನಿಮಗೆ ಎಳ್ಳಷ್ಟೂ ಬೋರಾಗದಂತೆ ಅತ್ಯಾಧುನಿಕ ಮಲ್ಟಿಮೀಡಿಯಾ ತಂತ್ರಜ್ಞಾನ ಆಧಾರಿತ ಮ್ಯೂಸಿಕ್ ಪ್ಲೇಯರ್ ಮತ್ತು ವಿಡಿಯೋ ಪ್ಲೇಯರ್ ಹೊಂದಿದೆ. ಆಡಿಯೋ ಜಾಕ್ ಕೂಡ ಲಭ್ಯವಿದೆ. ಡಿಜಿಟಲ್ ಝೂಮ್ ಮತ್ತು ಲೆಟ್ ಫ್ಲಾಶ್ ಸಹಿತ ಒಳ್ಳೆ ಗುಣಮಟ್ಟದ ಕೆಮರಾ ಹೊಂದಿರುವ ಇದು ಹೈ-ಡೆಪನಿಷನ್ ರೆಕಾರ್ಡಿಂಗ್ ಮೂಲಕ ಉತ್ಕೃಷ್ಟ ಗುಣಮಟ್ಟದ ವಿಡಿಯೋ ರೆಕಾರ್ಡಿಂಗ್ ಗೆ ಸಹಕಾರಿಯಾಗಿದೆ.

ಆಂತರಿಕ 16 ಜಿಬಿ ಹಾಗೂ SD ಕಾರ್ಡ ಮೂಲಕ ವಿಸ್ತರಿಸಬಹುದಾದ ಮೆಮೊರಿ ಹೊಂದಿರುವ ಇದು ಸರ್ವರೀತಿಯಂದಲೂ ಅತ್ಯಾಧುನಿಕವಾಗಿದೆ. ಈ ಮೊಬೈಲ್ 2.2 ಫ್ರೋಯೊ ಆವೃತ್ತಿಯ ಆಂಡ್ ರಾಯಿಡ್ ಮೂಲಕ ಕಾರ್ಯನಿರ್ವಹಿಸುವುದಲ್ಲದೇ ಪವರ್ ಫುಲ್ 800 MHz ಪ್ರೊಸೆಸರ್ ಹೊಂದಿದೆ.

ಎಚ್ ಟಿಸಿ ಮೈ ಟಚ್ನ ವಿಶೇಷತೆಗಳು:
* ಆಂಡ್ ರಾಯಿಡ್ 2.2 ಫ್ರೋಯೊ OS
* SD ಕಾರ್ಡ ಮೂಲಕ ವಿಸ್ತರಿಸಬಹುದಾದ 16 ಜಿಬಿ ಮೆಮೊರಿ ಕಾರ್ಡ್
* 3G ಸೌಲಭ್ಯ
* 3 ಮೆಗಾ ಪಿಕ್ಸೆಲ್ ಕೆಮರಾ
* ಮ್ಯೂಸಿಕ್ ಪ್ಲೇಯರ್
* ಬ್ಲೂ ಟೂಥ್ ಮತ್ತು ವೈ-ಫೈ
* ಜಾವಾ ತಂತ್ರಜ್ಞಾನ

ಇಷ್ಟೆಲ್ಲ ವಿಶೇಷತೆಗಳಿಂದ ಕೂಡಿರುವ ಇದರ ಬೆಲೆ ರು. 9000 ಮಾತ್ರ ಎಂದರೆ ನೀವು ನಂಬಲೇಬೇಕು. ಏಕೆಂದರೆ ಇದು ಕಂಪನಿಯೇ ನಿಗದಿ ಪಡಿಸಿರುವ ಬೆಲೆ. ಎಚ್ ಟಿಸಿ ಯ ಮೈ ಟಚ್ ಆದಷ್ಟು ಶೀಘ್ರ ಮಾರುಕಟ್ಟೆಗೆ ಬರಲಿ ಎಂದು ಆಶಿಸುತ್ತಿದ್ದೀರಾ? ನಿಮ್ಮ ಕನಸಿನ ಮೊಬೈಲ್ ಬರುತ್ತಿದೆ ಕೈಚಾಚಿ ಬಾಚಿಕೊಳ್ಳಿ...

;
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot