ಮೋಡಿ ನೋಡಿ ಹೊಸ ಮೈಕ್ರೊ ಮ್ಯಾಕ್ಸ್ ವಾನ್ ಗೋ X450

Posted By: Staff

ಮೋಡಿ ನೋಡಿ ಹೊಸ ಮೈಕ್ರೊ ಮ್ಯಾಕ್ಸ್ ವಾನ್ ಗೋ X450
ಭಾರತದಲ್ಲಿ ಮನೆ ಮನೆ ಮಾತಾಗಿರುವ ಮೈಕ್ರೊ ಮ್ಯಾಕ್ಸ್ ಸ್ವದೇಶೀ ಮೊಬೈ ಲ್ ಕಂಪೆನಿಗಳಲ್ಲಿ ಅತಿ ದೊಡ್ಡದು. ಕೈಗೆಟಕುವ ಬೆಲೆಯಲ್ಲಿ ಅತ್ಯಾಧುನಿಕ, ಶ್ರೇಷ್ಠ ತಂತ್ರಜ್ಞಾನ ಬಳಸಿ ತಯಾರಿಸಲಾಗಿರುವ ಈ ಮೊಬೈಲ್ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಈಗ ತನ್ನ ಯಶಸ್ಸಿನ ಪಯಣದ ಮುಂದಿನ ಹೆಜ್ಜೆಯಾಗಿ ಹೊಸ ಮೊಬೈಲ್ ಗಳ ಬಿಡುಗಡೆಗೆ ಸಜ್ಜಾಗಿದೆ.

ಇತ್ತೀಚಿಗೆ ಬಿಡುಗಡೆಯಾಗಿರುವ ವಾನ್ ಗೋX450 ಬಗ್ಗೆ ಹೇಳಲೇಬೇಕು. ಇದು ಹೆಟ್ ಟರ್ನರ್ ಜೊತೆಗೆ ಅತ್ಯಾಧುನಿಕ ರೂಪ, ವಿನ್ಯಾಸಗಳಿಂದ ಆಕರ್ಷವಾಗಿದ್ದು ನೋಡಿದಾಕ್ಷಣ ಮನಸೋಲುವಂತಿದೆ. ನ್ಯಾಯಯುತವಾದ ಬೆಲೆಯ ಜೊತೆ 'ಡಾಕ್ ಏಬಲ್' ಸಹಿತ ಸ್ಟ್ಯಾಂಡರ್ಡ್ ಬ್ಲೂ ಟೂಥ್(ಸೆಲ್ಪ್ ಚಾರ್ಜಿಂಗ್) ಲಭ್ಯವಿರುವಿದು ಅತ್ಯಂತ ಪ್ರಯೋಜನಕಾರಿಯಾಗಿದೆ.

ಮ್ಯಾಟ್ ಪಿನಿಶ್ ನಲ್ಲಿ ಕಂಗೊಳಿಸುತ್ತಿರುವ ಮೈಕ್ರೊ ಮ್ಯಾಕ್ಸ್ ನ ಎದುರು ಭಾಗ ಮನಮೋಹಕವಾಗಿದೆ. ದೊಡ್ಡ 6.1 ಸೆಂ. ಮೀ. ಅಗಲದ ಸ್ಕ್ರೀನ್ ಹೊಂದಿರುವ ಇದು ತುಂಬಾ ಹಗುರವಾಗಿಯೂ ಇದೆ. ಸುಲಭವಾಗಿ ಉಪಯೋಗಿಸಬಹುದಾದ ಈ ಮೊಬೈಲ್ ವಿಶಿಷ್ಟ ಆಕಾರದಿಂದ ಗಮನಸೆಳೆಯುತ್ತಿದೆ. ಸೂರ್ಯಕಾಂತಿ ಬಣ್ಣದಲ್ಲಿ ತಯಾರಾಗಿರುವ ಇದು ವಿವಿಧ ನಮೂನೆಗಳ ವಿಡಿಯೋ ಪಾರ್ಮೆಟ್ ಗಳು ಲಭ್ಯವಾಗುವಂತೆ ಉತ್ತಮ ಮ್ಯೂಸಿಕ್ ಪ್ಲೇಯರ್ ಹಾಗೂ ವಿಡಿಯೋ ಪ್ಲೇಯರ್ ಗಳನ್ನು ಹೊಂದಿದೆ.

3.5ರ ಆಡಿಯೋ ಜಾಕ್ ಅಂಡ್ ಎಫ್. ಎಂ. ರೇಡಿಯೋ ಗಳ ಜೊತೆ ಮೈಕ್ರೋ ಯುಎಸ್ ಬಿ ಸಹಿತ ಜಿಪಿಆರ್ಎಸ್ ಹೊಂದಿದೆ. ಒಪೆರಾ ಬ್ರೌಸರ್ ಹೊಂದಿರುವುದು ವೆಬ್ ಆಕ್ಸೆಸ್ ಗೆ ಅನುಕೂಲಕರವಾಗಿದೆ. ವಿಡಿಯೋ ರೆಕಾರ್ಡಿಂಗ್ ಗೆ ಒಳ್ಳೆಯ ಗುಣಮಟ್ಟದ ಕೆಮರಾ ಇದೆ. ಜಾವಾ ಸಪೋರ್ಟ್ ಹೊಂದಿರುವ ಇದು ಜಾವಾ ಆಧಾರಿತ ಗೇಮ್ಸ್ ಗಳನ್ನು ಡೌನ್ ಲೋಡ್ ಹಾಗೂ ಇನ್ ಸ್ಟಾಲ್ ಮಾಡಿಕೊಂಡು ಇದರಲ್ಲಿ ನೋಡಲು ಅನುಕೂಲಕರವಾಗಿದೆ.

ಇದರ ವಿಶೇಷತೆಗಳನ್ನು ಈ ರೀತಿ ಪಟ್ಟಿಮಾಡಬಹುದು:
* ಬ್ಲೂ ಟೂಥ್ ಡೊಂಗಲ್ ಹೆಡ್ ಸೆಟ್
* 2 ಮೆಗಾ ಪಿಕ್ಸೆಲ್ ಕೆಮರಾ
* ಮ್ಯೂಸಿಕ್ ಅಂಡ್ ವಿಡಿಯೋ ಪ್ಲೇಯರ್
* ಎಫ್ ಎಂ ರೇಡಿಯೊ
* 8 ಜಿಬಿ ವಿಸ್ತರಿಸಬಹುದಾದ ಮೆಮೊರಿ ಕಾರ್ಡ್
* ಜಾವಾ
* ಬ್ಲೂ ಟೂಥ್ ಮತ್ತು ಜಿಪಿಆರ್ಎಸ್

ಇಷ್ಟೆಲ್ಲ ವಿಶೇಷತೆಗಳಿರುವ ಈ ಮೊಬೈಲ್ ಬೆಲೆ ಕೇವಲ ರು. 3500 ಮಾತ್ರ. ಹಾಗಾಗಿ ಈ ಹೊಸ ಮೊಬೈಲ್ ಭಾರತದ ಮಾರುಕಟ್ಟೆಯಲ್ಲಿ ಹಾಟ್ ಕೇಕ್ ನಂತೆ ಮಾರಾಟವಾಗುವುದು ಗ್ಯಾರಂಟಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot