Subscribe to Gizbot

ಮೊಬೈಲ್ ಮಹಾರಾಜ ಹೊಸ ನೋಕಿಯಾ- C5-00 5MP

Posted By: Super

ಮೊಬೈಲ್ ಮಹಾರಾಜ ಹೊಸ ನೋಕಿಯಾ- C5-00 5MP

ಬೆಂಗಳೂರು. ಜು 3: ಯುದ್ಧಕ್ಕೆ ಸಿದ್ಧವಾಗಿಯೂ ಯುಧ್ಧ ಭೂಮಿಗೆ ಬರಲಾಗದ ಯೋಧನಂತೆ ನಿಂತಿದೆ ಮೊಬೈಲ್ ಸಾಮ್ರಾಜ್ಯದಲ್ಲೊಂದು ಆಲ್ ರೌಂಡರ್ ಆಗಬಲ್ಲ ಮೊಬೈಲ್ ನೋಕಿಯಾ- C5-00 5MP. ಕಾರಣ ಬೃಹತ್ ಮೊಬೈಲ್ ಕಂಪನಿಗಳ ಮಧ್ಯೆ ಸ್ಮಾರ್ಟ ಫೋನ್ಸ್ ಮತ್ತು ಟ್ಯಾಬ್ಲೆಟ್ಸ್ ಗಳ ನಡುವಿನ ತಿಕ್ಕಾಟದಲ್ಲಿ ರೆಗ್ಯುಲರ್ ಕ್ಯಾಂಡಿ ಬಾರ್ ಫೋನ್ ಗಳ ಆರ್ಭಟಕ್ಕೆ ತಾತ್ಕಾಲಿಕ ಕಡಿವಾಣ ಬಿದ್ದಿದೆ.

ಮಾರುಕಟ್ಟೆಗೆ ಬರಲು ಸಜ್ಜಾಗಿ ನಿಂತಿರುವ ನೋಕಿಯಾ ಹೊಸ ಫೋನ್ - C5-00 5MP. ಈಗಾಗಲೇ ಮಾರುಕಟ್ಟೆಯಲ್ಲಿ ಮಿಂಚುತ್ತಿರುವ ನೋಕಿಯಾ C5 ನ ಉನ್ನತೀಕರಿಸಿದ ಆವೃತ್ತಿಯಾಗಿರುವ ನೋಕಿಯಾ C5-00 5MP, ನೋಡಲು ಸರಳವಾಗಿ ಅನ್ನಿಸಿದರೂ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ.

ಇದು 2.2 ವಜಿಎ ಟಿಎಫ್ ಟಿ ಸ್ಕ್ರೀನ್ ಮತ್ತು ಆಲ್ಫಾ ನ್ಯೂಮರಿಕ್ ಕೀಪ್ಯಾಡ್ ಹೊಂದಿದೆ.ನೋಕಿಯಾ ಈಗ ಅತ್ಯಾಧುನಿಕವಾದ ಸಿಂಬಿಯನ್ OS ನತ್ತ ತನ್ನ ಗಮನವನ್ನು ಕೇಂದ್ರೀಕರಿಸಿದ್ದರೂ ಕೂಡ ನೋಕಿಯಾ C5-00 5MP S60 ಪ್ಲಾಟ್ ಫಾರ್ಮ್ ದೊರಕಿರುವುದು ಗಮನಾರ್ಹವಾಗಿದೆ. ಈ ಮೊಬೈಲ್ 600 MHz ARM ಪ್ರೊಸೆಸರ್ ಮತ್ತು 512 MB ಹಾಗೂ 256 MB ರೋಮ್ ಮತ್ತು ರಾಮ್ ಹೊಂದಿದ್ದು 32 ಜಿಬಿ ಮೈಕ್ರೋ SD ಕಾರ್ಡ್ ಉಪಯೋಗ ಸಾಮರ್ಥ್ಯ ಪಡೆದಿದೆ.

ಹೊಸ ಆವೃತ್ತಿಯ ವಿಶಿಷ್ಟತೆಯಿರುವುದು ಇದರಲ್ಲಿರುವ ಫಿಕ್ಸ್ಡ್ ಫೋಕಸ್ 5 ಮೆಗಾ ಕೆಮರಾದಲ್ಲಿ. ಈ ಕೆಮರಾ ಪ್ರತಿ ಸೆಕೆಂಡ್ ಗೆ 15 ಫ್ರೇಮ್ ಗಳಂತೆ ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯ ಹೊಂದಿದೆ. ನೋಕಿಯಾ- C5-00 5MP ಯ ಇನ್ನೊಂದು ಹೈಲೈಟ್ ಎಂದರೆ 11 ತಾಸುಗಳ ಟಾಕ್ ಟೈಮ್ ಹಾಗೂ 25 ದನಗಳ ಬ್ಯಾಟರಿ ಬ್ಯಾಕಪ್. ಇದು ಮೊದಲಿನ ನೋಕಿಯಾ C5 ಗಿಂತ ಸಾಕಷ್ಟು ಹೆಚ್ಚು. ಹಾಗೇ 30 ಸುದೀರ್ಘ ತಾಸುಗಳ ಮ್ಯೂಸಿಕ್ ಪ್ಲೇಬ್ಯಾಕ್ ಲಭ್ಯತೆ ಇರುವುದು ಸಂಗೀತ ಪ್ರೇಮಿಗಳ ಪಾಲಿಗೆ ಹಬ್ಬವೇ ಸರಿ.

ನೋಕಿಯಾ- C5-00 5MP ನ ವಿಶೇಷತೆಗಳು:
* A 5 ಮೆಗಾ ಪಿಕ್ಸೆಲ್ ಕೆಮರಾ
* ಸುದೀರ್ಘ ಬ್ಯಾಟರಿ ಸಾಮರ್ಥ್ಯ
* GPS ಸಹಿತ ನೋಕಿಯಾ ನಕಾಶೆ
* ಯುಎಸ್ ಬಿ 2.0
* ಯುಎಸ್ ಬಿ ಚಾರ್ಜಿಂಗ್ ಮತ್ತು ಡಾಟಾ ವಿನಿಮಯ ಸೌಲಭ್ಯ
* ಬ್ಲೂ ಟೂಥ್ 2.0 +ಇಡಿಆರ್
* 32 ಜಿಬಿ ಗೆ ವಿಸ್ತರಿಸಬಹುದಾದ ಮೆಮೊರಿ ಸೌಲಭ್ಯ

ಇಂತಹ ಒಂದು ಅತ್ಯಮೂಲ್ಯ ಮೊಬೈಲ್ ಬರುತ್ತಿದೆ ಎಂಬುದು ಪುಳಕವನ್ನುಂಟುಮಾಡುವ ವಿಚಾರವಾದರೂ ಕಂಪೆನಿಯ ಕಡೆಯಿಂದ ಈ ವಿಷಯಕ್ಕೆ ಇನ್ನೂ ಪುಷ್ಟಿದೊರಕಿಲ್ಲ. ಇದರ ಬೆಲೆ ರು. 7500 ಎಂಬ ವದಂತಿ ಇದೆ. ಮಾರುಕಟ್ಟೆಗೆ ಇದರ ಆಗಮನವಾದರೆ ನಮ್ಮ ಭಾರತದಲ್ಲಿ ಇದು ಹೊಸ ಅಧ್ಯಾಯ ಬರೆಯುವದರಲ್ಲಿ ಸಂದೇಹವೇ ಇಲ್ಲ. ಪ್ರತಿಯೊಬ್ಬರೂ ಬಯಸುವ, ಖರೀದಿಸುವ ಮೊಬೈಲ್ ಇದಾಗಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot