ಸಿಂಬಿಯನ್ OS ನಿಂದ ಹೊರಬರಲಿದೆ 2016 ರಿಂದ ನೋಕಿಯಾ

Posted By: Staff

ಸಿಂಬಿಯನ್ OS ನಿಂದ ಹೊರಬರಲಿದೆ 2016 ರಿಂದ ನೋಕಿಯಾ
ಬೆಂಗಳೂರು. ಜು. 07: ಮೊಬೈಲ್ ಉತ್ಪಾದನೆಯ ಜಗತ್ತಿನ ಬಹು ಜನಪ್ರಿಯ ಕಂಪೆನಿಗಳಲ್ಲಿ ನೋಕಿಯಾ ಹೆಸರು ಚಿರಪರಿಚಿತ. ಇದರ ಮಾರಾಟ ಹಾಗೂ ಸೇವೆಯಲ್ಲಿನ ಉತ್ಕೃಷ್ಟತೆ ಇದರ ಈ ಪರಿಯ ಜನಪ್ರಿಯತೆಯ ಗುಟ್ಟು. ಇದೀಗ ನೋಕಿಯಾ ತನ್ನ ಹ್ಯಾಂಡ್ ಸೆಟ್ ಗಳಿಗೆ ಇಸವಿ 2016 ರಿಂದ 'ಸಿಂಬಿಯನ್' OS ನಿಂದ ಮುಕ್ತಿ ಕೊಡಲು ಉದ್ದೇಶಿಸಿದೆ.


ಇತ್ತೀಚಿಗಷ್ಟೇ ನೋಕಿಯಾ ಇಂಡಿಯಾ ವಿಭಾಗದ ಮಾರ್ಕೆಟಿಂಗ್ ಡೈರೆಕ್ಟರ್ ಶ್ರೀ ವಿರಲ್ ಓಝಾ, ಈ ವಿಷಯವನ್ನು ಬಹಿರಂಗಪಡಿಸಿದ್ದು 2016 ರ ನಂತರ ಯಾವುದೇ ಮೊಬೈಲ್ ಗೆ ಸಿಂಬಿಯನ್ OS ಬಳಸಲಾಗುವುದಿಲ್ಲ ಎಂದಿದ್ದಾರೆ. ನೋಕಿಯಾ ಮತ್ತು ಇಂಟೆಲ್ ಸಹಯೋಗದ ' ಮೀಗೋ' ಇನ್ನು ಮುಂದಿನ ದಿನಗಳಲ್ಲಿ ಉತ್ಪಾದನೆ ಆಗುವುದಿಲ್ಲ, N9 ಹೊರತು ಪಡಿಸಿ ಯಾವುದರಲ್ಲೂ ಮೀಗೋ ಇರುವಿದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ನೋಕಿಯಾ ಕ್ರಿಸ್ಟೆಂಡ್ E6 ಮತ್ತು X7 ಎಂಬ ಎರಡು ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಮಾಡಿದೆ. ಇದು 'ಸಿಂಬಿಯನ್ OS' ಆಧಾರಿತ 'ಸಿಂಬಿಯನ್ ಅಣ್ಣಾ'.
ನೋಕಿಯಾ E6, ಅತಿ ಹೆಚ್ಚು ಎನ್ನಬಹುದಾದ 2 ತಿಂಗಳ ಸ್ಟ್ಯಾಂಡ್ ಬೈ, 14 ತಾಸುಗಳ ಟಾಕ್ ಟೈಮ್ ಬ್ಯಾಟರಿ ಬ್ಬ್ಯಾಕಪ್ ಹೊಂದಿದೆ. ಟಚ್ ಸ್ಕ್ರೀನ್ ಹಾಗೂ QWERTY ಕೀ ಪ್ಯಾಡ್ ಹೊಂದಿದೆ. ಮೈಕ್ರೋ ಸಾಪ್ಟ್ ಎಕ್ಸ್ ಚೇಂಜ್, ಮೈಕ್ರೋ ಸಾಪ್ಟ್ ಕಮ್ಮುನಿಕೇಟರ್ ಮೊಬೈಲ್, ಮೈಕ್ರೋ ಸಾಪ್ಟ್ ಶೇರ್ ಪಾಯಿಂಟ್ ಹೊಂದಿರುವುದರಿಂದ ಇದು ಬಿಸಿನೆಸ್ ಕ್ಲಾಸ್ ಮೊಬೈಲ್ ಎಂದು ಹೆಸರಾಗಿದೆ. ಇದು ಸಾಕಷ್ಟು ಅತ್ಯಾಧುನಿಕವಾಗಿದ್ದು ಆಕರ್ಷಕವೂ ಆಗಿದೆ.

ನೋಕಿಯಾ X7, ಬಾಕ್ಸ್ ಸ್ಟೈಲ್ ಹಾಗೂ ಸೆಕ್ಸ್ ಅಪೀಲ್ ಹೊಂದಿದ್ದು ಯುಜಜನತೆಯನ್ನು ಗಮನದಲ್ಲಿಟ್ಟು ತಯಾರಿಸಲಾಗಿದೆ. ಸಾಕಷ್ಟು ಹೆಚ್ಚಿನ ವಿಶೇಷತೆಗಳಿದ್ದು ಎಂತವರನ್ನೂ ಆಕರ್ಷಿಸಬಲ್ಲ ಕಾರ್ಯಕ್ಷಮತೆ ಹೊಂದಿದೆ. ಈ ಮೊಬೈಲ್ ಪ್ರೊಮೋಟ್ ಮಾಡಲು ನೋಕಿಯಾ, ಜುಲೈ 7ರಿಂದ ಆಗಸ್ಟ್ 7ರ ತನಕ ಡೆಲ್ಲಿ NCR, ಮುಂಬೈ ಹಾಗೂ ಬೆಂಗಳೂರುಗಳಲ್ಲಿ "ಫುಲ್ ಥ್ರೋಟಲ್" ಎಂಬ ಈವೆಂಟ್ ಆಯೋಜಿಸಿದೆ.

ಒಟ್ಟಿನಲ್ಲಿ ಇದೀಗ ನೋಕಿಯಾ ಸಿಂಬಿಯನ್ OS ನಿಂದ ಹೊರಬರಲು ನಿರ್ಧರಿಸಿದ್ದು ಸ್ಪಸ್ಟವಾಗಿದೆ. ಆದರೆ 'ಸಿಂಬಿಯನ್' OS ' ನಿಂದ ಸದ್ಯಕ್ಕೆ ಸಾಕಷ್ಟು ಹೆಚ್ಚಿನ ಲಾಭ ಮಾಡಿಕೊಳ್ಳಲು ಕಂಪೆನಿ ನಿರ್ಧರಿಸಿದೆ. ಭವಿಷ್ಯದಲ್ಲಿ ಸಾಕಷ್ಟು ಹೊಸ ಮೊಬೈಲ್ ಗಳನ್ನು ಉತ್ಪಾದಿಸಲು ಯೋಜನೆ ಹಮ್ಮಿಕೊಂಡಿದೆ. ಆ ಮೂಲಕ ತನ್ನ ಯಶಸ್ಸಿನ ನಾಗಾಲೋಟವನ್ನು ಇನ್ನೂ ಹೆಚ್ಚಿಸಿಕೊಳ್ಳಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot